ಧರ್ಮ

ಹೊಸ ಮನೆಯಲ್ಲಿ ವಾಸ ಮಾಡುವ ಮುನ್ನ ಗೃಹ ಪ್ರವೇಶವನ್ನು ಏಕೆ ಮಾಡುತ್ತಾರೆ ಗೊತ್ತಾ ?

ಹೊಸ ಮನೆಯಲ್ಲಿ ವಾಸ ಮಾಡುವ ಮುನ್ನ ಗೃಹ ಪ್ರವೇಶವನ್ನು ಏಕೆ ಮಾಡುತ್ತಾರೆ ಗೊತ್ತಾ ?

ಈಗ ಯಾರಾದರೂ ಹೊಸ ಮನೆಯಲ್ಲಿ ವಾಸ ಮಾಡಬೇಕೆಂದರೆ, ತುಂಬಾ ಸರಳ ಸಮಾರಂಭ ಮಾಡುತ್ತಾರೆ. ಆದರೆ ಒಂದು ಕಾಲದಲ್ಲಿ ಆ ರೀತಿ ಇರಲಿಲ್ಲ. ಆ ಮನೆಗೆ ಗೃಹ ಪ್ರವೇಶ ಮಾಡುತ್ತಿದ್ದರು. ಆ ಬಳಿಕ ಆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ ಈಗ ಈ ಪದ್ಧತಿಯು ಅಷ್ಟಾಗಿ ಇಲ್ಲ.
ಗೃಹಪ್ರವೇಶ ಎಂಬುದು ಕಡಿಮೆ ಆಗಿದೆ. ಇಷ್ಟಕ್ಕೂ ಈ ಗೃಹಪ್ರವೇಶ ಎಂಬುದನ್ನು ಯಾಕೆ ಮಾಡುತ್ತಾರೆ. ಅದರ ಹಿಂದಿರುವ ಕಾರಣವನ್ನು ಅದನ್ನು ಈಗ ತಿಳಿದುಕೊಳ್ಳೋಣ ಬನ್ನಿ…..

ಯಾವುದೇ ಮನೆಗಾದರೂ ಅದು ಇರುವ ಸ್ಥಳ ಮುಖ್ಯ. ಆ ಸ್ಥಳವೇ ಆ ಮನೆಯ ಮೇಲೆ ಪ್ರಮುಖವಾಗಿ ಪರಿಣಾಮ ಬೀರುತ್ತದೆ. ಅದರಲ್ಲಿರುವ ವ್ಯಕ್ತಿಗಳ ಜೀವನವನ್ನು ಅದು ಪ್ರಭಾವಗೊಳಿಸುತ್ತದೆ. ಇದರ ಜೊತೆಗೆ ಖಾಲಿ ಇರುವ ಮನೆಯಲ್ಲಿ ದುಷ್ಟ ಶಕ್ತಿಗಳು ವಾಸವಾಗಿರುತ್ತವೆಯಂತೆ .

ಆ ದುಷ್ಟ ಶಕ್ತಿಗಳನ್ನು ಹೊರಗೋಡಿಸಬೇಕೆಂದರೆ ಶಾಸ್ತ್ರೋಕ್ತವಾಗಿ ಪೂಜೆಗಳನ್ನು,ಹೋಮ,ಹವನವನ್ನು ಮಾಡಬೇಕು.

 

 

ಆ ರೀತಿ ಪೂಜೆ ಮಾಡಿದರೆ ಹೊಸ ಮನೆಯಲ್ಲಿ ಇರುವ ದುಷ್ಟಶಕ್ತಿಗಳು ಹೋಗುತ್ತವೆ. ಆ ಬಳಿಕ ಅದರಲ್ಲಿ ವಾಸ ಮಾಡಬಹುದು. ಹಾಗಾಗಿಯೇ ಗೃಹ ಪ್ರವೇಶ ಮಾಡುತ್ತಾರೆ. ಆ ಸಂದರ್ಭದಲ್ಲಿ ಪೂಜೆಗಳನ್ನು ಮಾಡಿ ಮನೆಗೆ ಪ್ರವೇಶ ಮಾಡುತ್ತಾರೆ.

 

 

ಇನ್ನೂ ಗೃಹ ಪ್ರವೇಶದ ಹಿಂದೆ ಇರುವ ಇನ್ನೊಂದು ಕಾರಣ ಏನೆಂದರೆ…… ಯಾರಿಗೇ ಆಗಲಿ ಕೋಪ, ಮದ, ಮಾತ್ಸರ್ಯ ಎಂಬ ಗುಣ ಇದ್ದೇ ಇರುತ್ತವೆ. ಇವುಗಳನ್ನು ಹೊರಗೆ ಓಡಿಸಲು ಎಲ್ಲರೊಂದಿಗೆ ಬೆರೆತು ಸಹಾಯ ಮಾಡುವಂತೆ, ಹೊಸ ಜೀವನ ಪ್ರಾರಂಭಿಸಬೇಕೆಂದು ಸೂಚಿಸಲು ಈ ಗೃಹಪ್ರವೇಶವನ್ನು ಮಾಡುತ್ತಾರೆ.

 

 

ಕನಿಷ್ಠ ಪಕ್ಷ ಹೊಸ ಮನೆಯಲ್ಲಿಯಾದರೂ ಮೊದಲು ಹೇಳಿದಂತೆ ಸುಖಕರವಾದ ಜೀವನ ನಡೆಸಬೇಕೆಂದು ನಮ್ಮ ಹಿರಿಯರು ಕೋರುತ್ತಾರೆ. ಹಾಗಾಗಿಯೇ ಬಹಳಷ್ಟು ಮಂದಿ ಗೃಹ ಪ್ರವೇಶ ಮಾಡುತ್ತಾರೆ. ಇದಿಷ್ಟು ಗೃಹ ಪ್ರವೇಶದ ಹಿಂದಿರುವ ಅಸಲಿ ಕಾರಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top