ಸಮಾಚಾರ

ಸ್ವಂತ ಪಕ್ಷ ಕಟ್ಟಿ ಪ್ರಧಾನ ಮಂತ್ರಿ ಆಗ್ತಾರಂತೆ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್.

ಸ್ವಂತ ಪಕ್ಷ ಕಟ್ಟಿ ಪ್ರಧಾನ ಮಂತ್ರಿ ಆಗ್ತಾರಂತೆ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್.

 

 

ಯಾವಾಗಲು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗೋ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮತ್ತೆ ಸುದ್ದಿಗೆ ಬಂದಿದ್ದಾರೆ.. ತಮ್ಮ ಸಲೀಸಾದ ಕೆಟ್ಟ ಮಾತುಗಳು, ವಿಚಿತ್ರ ಮ್ಯಾನರಿಸಂನಿಂದ ಜನರನ್ನು ಆಕರ್ಷಿಸುವ ಹುಚ್ಚ ವೆಂಕಟ್ ಈ ಭಾರಿ ಸಿನಿಮಾ ಅಥವಾ ಇತರೆ ವಿಷಯಗಳ ಬದಲು ಡೈರೆಕ್ಟಾಗಿ ತಮ್ಮ ರಾಜಕೀಯದ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ತಾವು ಒಂದಲ್ಲ ಒಂದು ದಿನ ಪ್ರಧಾನ ಮಂತ್ರಿ ಆಗುತ್ತೇನೆ ಎಂದು ಗಂಟಾಘೋಷವಾಗಿ ಸಾರಿಕೊಂಡಿದ್ದಾರೆ.

 

 

ಡಿಕ್ಟೇಟರ್ ಹುಚ್ಚ ವೆಂಕಟ್ ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಹುಚ್ಚ ವೆಂಕಟ್ ತಮ್ಮ ರಾಜಕೀಯ ಇರಾದೆಯನ್ನ ಹೊರಹಾಕಿದ್ದಾರೆ. “ಈ ಭಾರಿಯ ಎಲೆಕ್ಷನ್ ನಲ್ಲಿ ನಾನೂ ಸ್ಪರ್ಧಿಸೋಣ ಅಂತ ಅಂದುಕೊಂಡಿದ್ದೆ ಆದರೆ ಇದಕ್ಕೆ ನಮ್ಮ ತಂದೆ ಒಪ್ಪಿಕೊಳ್ಳದಿದ್ದರಿಂದ ನಾನು ಈ ಭಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ತಂದೆಯನ್ನು ಒಪ್ಪಿಸಿ ರಾಜಕೀಯ ಪ್ರವೇಶ ಮಾಡಲಿದ್ದೇನೆ. ನಾನೇ ಒಂದು ಸ್ವತಂತ್ರ ಪಕ್ಷವನ್ನು ಕಟ್ಟಿ ನನಗೆ 60 ವರ್ಷ ಆಗುವ ವೇಳೆ ತಾನು ಒಂದು ದಿನ ಪ್ರಧಾನಿ ಆಗಿಯೇ ಆಗುತ್ತೇನೆ” ಎಂದು ಹೇಳಿದ್ದಾರೆ.

ಇದೆ ವೇಳೆ ಮಾತನಾಡಿದ ಹುಚ್ಚ ವೆಂಕಟ್ ಚುನಾವಣೆಯಲ್ಲಿ ನಕಲಿ ಮತವನ್ನು ಹಣ, ಸೀರೆ, ಹೆಂಡಕ್ಕಾಗಿ ಮಾರಿಕೊಂಡು ತಮ್ಮನ್ನು ತಾವು ಮಾರಿಕೊಳ್ಳಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಮಂಗಳೂರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಮಾತನಾಡಿದ ವೆಂಕಟ್ ಧರ್ಮದ ಹೆಸರನ್ನು ಹೇಳಿಕೊಂಡು ನಾವು ಕಿತ್ತಾಡುವುದು ಬೇಡ, ನಾವೆಲ್ಲಾ ಒಂದೇ. ನಮ್ಮ ಒಗ್ಗಟ್ಟನ್ನು ಒಡೆಯಲು ಬರುವವರ ಜೊತೆ ನಾವು ಹೋಗುವುದು ಬೇಡ ಎಂದು ಕೇಳಿಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top