ಕ್ರೀಡೆ

2ನೇ ಟೆಸ್ಟ್: ಮೊದಲ ದಿನದ ಭಾರತ- ದ.ಆಫ್ರಿಕಾ ಸಮಬಲದ ಹೋರಾಟ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

2ನೇ ಟೆಸ್ಟ್: ಮೊದಲ ದಿನದ ಭಾರತ- ದ.ಆಫ್ರಿಕಾ ಸಮಬಲದ ಹೋರಾಟ.

 

 

ಮೊದಲ ಪಂದ್ಯದಲ್ಲಿ ಅನುಭವಿಸಿದ ಸೋಲಿನ ನಂತರ ಆತಿಥೇಯ ದಕ್ಷಿಣ ಆಫ್ರಿಕಾದ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ತೊಡೆತಟ್ಟಿ ನಿಂತಿದೆ. ಸೆಂಚೂರಿಯಂ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ಮೊದಲ ದಿನದ ಆಟದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡು ತಂಡಗಳೂ ಸಮಬಲದ ಹೋರಾಟ ನಡೆಸಿವೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡವು ಮೊದಲ ದಿನದಂತ್ಯಕ್ಕೆ ನಿಗದಿತ 90 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿದೆ.

ಇನ್ನಿಂಗ್ಸ್ ಆರಂಭಿಸಿದ ಎಲ್ಗಾರ್-ಮರ್ಕ್ರಾಮ್ ಜೋಡಿ 85 ರನ್ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಎಲ್ಗಾರ್-ಮರ್ಕ್ರಾಮ್ ಜೋಡಿ 85 ರನ್ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿತು. ಟೀ ವಿರಾಮದ ಹೊತ್ತಿಗೆ ದಕ್ಷಿಣ ಆಫ್ರಿಕಾ 56 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. ಒಟ್ಟಾರೆ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾದ ಪರ ಏಡನ್‌ ಮಕ್ರಮ್‌ 94 ಮತ್ತು ಹಾಶೀಮ್ ಆಮ್ಲಾ 82 ರನ್ ಗಳಿಸಿದರೆ ಭಾರತದ ಪರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೂರು ವಿಕೆಟುಗಳನ್ನು ಕಬಳಿಸಿ ಮಿಂಚಿದರು.

 

ಸಂಕ್ಷಿಪ್ತ ಸ್ಕೋರ್:

ಮೊದಲ ದಿನದಾಟದ ಅಂತ್ಯಕ್ಕೆ ದ.ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 269

ಮರ್ಕ್ರಾಮ್: 94
ಹಾಶೀಮ್ ಆಮ್ಲಾ 82
ಡಿಯನ್ ಎಲ್ಗರ್: 31

ಅಶ್ವಿನ್:90/3
ಇಶಾಂತ್ ಶರ್ಮ:32/1

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top