ದೇವರು

ಕೋಲಾರದ ಬಳಿ ಇರೋ ಕೈವಾರ ಸ್ಥಳದ ಮಹಿಮೆಯನ್ನು ತಿಳ್ಕೊಂಡ್ರೆ ನೀವು ಒಮ್ಮೆ ಹೋಗಿ ಬರ್ತಿರಾ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕೋಲಾರದ ಬಳಿ ಇರೋ ಕೈವಾರ ಸ್ಥಳದ ಮಹಿಮೆಯನ್ನು ತಿಳ್ಕೊಂಡ್ರೆ ನೀವು ಒಮ್ಮೆ ಹೋಗಿ ಬರ್ತಿರಾ.

 

 

ಕೋಲಾರ ಜಿಲ್ಲೆಯ ಕೈವಾರ, ತಾತಯ್ಯನವರಆಧ್ಯಾತ್ಮಿಕ ಕ್ಷೇತ್ರವಾಗಿ ಬೆಳಗಿದ ಐತಿಹಾಸಿಕ ಪ್ರದೇಶ. ಒಂದು ಕಾಲದಲ್ಲಿ ಇದನ್ನು ‘ಕೈವಾರನಾಡು’ ಎಂದು ಕರೆಸಿಕೊಂಡಿತ್ತು. ಮಹಾಭಾರತದ ಕಾಲದಲ್ಲಿ ಪಾಂಡವರು ಇಲ್ಲಿ ತಂಗಿದ್ದರಿಂದ ಪವಿತ್ರ ಕ್ಷೇತ್ರವಾಯಿತು ಎಂದು ಇಲ್ಲಿನ ಜನರು ನಂಬಿದ್ದಾರೆ. ಮಹಾನ್ ಸಂತ ಶ್ರೀ ಯೋಗಿ ನಾರೇಯಣ ಯತೀಂದ್ರರು ಜನ್ಮವೆತ್ತಿದ ಸ್ಥಳವಿದು. ಲಕ್ಷ್ಮಣ ತೀರ್ಥ, ಯೋಗಿ ನಾರಾಯಣ ಮಠ, ಅಮರ ನಾರಾಯಣ, ಭೀಮಲಿಂಗೇಶ್ವರ, ವೈಕುಂಠ ದೇವಾಲಯ, ಭೀಮನ ಹೆಜ್ಜೆ ಗುರುತುಗಳು, ಯೋಗಿ ತಾತಯ್ಯನವರ ಜೀವ ಸಮಾಧಿ, ಕನ್ಯಕಾ ಪರಮೇಶ್ವರಿ ದೇವಾಲಯಗಳು ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.

 

 

ಕೈವಾರ ತಾತಯ್ಯ: ತಾತಯ್ಯ ಒಬ್ಬ ನಿಜವಾದ ಮಾನವತಾವಾದಿ. ೧೧೦ ವರ್ಷ ಬದುಕಿದ್ದ ನಾರಾಯಣಪ್ಪ ೧೮೩೬ರಲ್ಲಿ ಜೀವ ಸಮಾಧಿಯಾದರು. ತಾತಯ್ಯನವರು ಜೀವ ಸಮಾಧಿಯಾದ ಕೈವಾರ ಕ್ಷೇತ್ರವು ಭಕ್ತರ ಪಾಲಿಗೆ ಶ್ರದ್ದಾತಾಣ ಪ್ರತಿವರ್ಷ ಜ್ಯೇಷ್ಠಮಾಸದ ಶುದ್ಧ ತದಿಗೆಯಂದು ಕೈವಾರದಲ್ಲಿ ಯೋಗೀಂದ್ರರ ರಥೋತ್ಸವ ನಡೆಯುತ್ತದೆ.

ಕೇವಲ ಧಾರ್ಮಿಕವಾಗಿ ಪವಿತ್ರ ಸ್ಥಳ ಎಂದು ಕರೆಸಿಕೊಳ್ಳದೆ ಸಾಹಸ ಪ್ರಿಯರಿಗೂ ಕೈವಾರ ಹೇಳಿಮಾಡಿಸಿದ ಜಾಗ ಏಕೆಂದರೆ ಇಲ್ಲಿನ ಬೆಟ್ಟ ನೋಡಲು ಮನಮೋಹಕವಾಗಿದ್ದು ಬೆಟ್ಟ ಹತ್ತುವ ಹವ್ಯಾಸವನ್ನು ಹೊಂದಿರುವ ಜನ ಒಂದು ಗಂಟೆಯಲ್ಲಿ ಬೆಟ್ಟವನ್ನು ಹತ್ತಬಹುದು. ಬೆಟ್ಟದ ಮೇಲೆ ಲಕ್ಷ್ಮಣ ತೀರ್ಥ ಹಾಗೂ ಬಕಾಸುರ ಬಂಡೆಯನ್ನು ನಾವು ನೋಡಬಹುದು. ಲಕ್ಷ್ಮಣ ತೀರ್ಥದಲ್ಲಿ ಸದಾ ಕಾಲ ನೀರಿನ ಒರಟೆ ಇರುತ್ತದೆ.

 

 

ಲಕ್ಷ್ಮಣ ತೀರ್ಥದ ಮಹಿಮೆ:
ತ್ರೇತಾಯುಗದಲ್ಲಿ ರಾಮ ಸೀತೆ ಲಕ್ಷ್ಮಣ ಕೈವಾರಕ್ಕೆ ಬಂದಿದ್ದಾಗ ಬೆಟ್ಟದ ಮೇಲೆ ಸೀತೆಗೆ ಬಾಯಾರಿಕೆಯಾಗುತ್ತದೆ ಆಗ ಸುತ್ತಮುತ್ತ ಎಲ್ಲೋ ನೀರು ಇಲ್ಲದಿದ್ದರಿಂದ ಲಕ್ಷ್ಮಣ ತನ್ನಲ್ಲಿದ್ದ ಬಾಣವನ್ನು ಬಂಡೆಗೆ ಹೊಡೆದು ನೀರು ತೆಗೆದು ತನ್ನ ಅತ್ತಿಗೆ ಸೀತೆಗೆ ಕೊಡುತ್ತಾನೆ ಎಂಬ ಕಥೆಯನ್ನು ಇಲ್ಲಿನ ಜನ ಹೇಳುತ್ತಾರೆ. ವಿಶೇಷ ಸೆಂದರೆ ಇಲ್ಲಿ ದೊರೆಯುವ ನೀರು ಔಷಧಿಯ ಗುಣಗಳನ್ನು ಹೊಂದಿದ್ದು, ಇಲ್ಲಿಗೆ ಬರುವ ಪ್ರವಾಸಿಗರು ಈ ನೀರನ್ನು ಕುಡಿದರೆ ರೋಗರುಜಿನಗಳು, ಚರ್ಮರೋಗಗಳು ವಾಸಿಯಾಗುತ್ತವೆ ಎಂಬ ಪ್ರತೀತಿಯೂ ಇದೆ.

 

 

ಬಕಾಸುರ ಬಂಡೆ
ಕೈವಾರ ಬೆಟ್ಟದ ಮೇಲೆ ವಾಸವಿದ್ದ ಬಕಾಸುರ ರಾಕ್ಷಸನನ್ನು ಭೀಮ ಕೊಂದು, ಬೆಟ್ಟದ ಗುಹೆಯೊಂದರಲ್ಲಿ ಮುಚ್ಚಿದ್ದ ಆದ ಕರಣ ಭೀಮನ ಅಮಾವಾಸ್ಯೆಯ ದಿನದಂದು ಈ ಬಂಡೆಯಿಂದ ಕೀವು ಮತ್ತು ರಕ್ತ ಸೋರುತ್ತದೆ ಎಂದು ಸ್ಥಳಿಯರು ಹೇಳುತ್ತಾರೆ.

ಈ ಪುಣ್ಯ ಕ್ಷೇತ್ರಕ್ಕೆ ಹೋಗುವ ಮಾರ್ಗ:
ಶ್ರೀ ಕ್ಷೇತ್ರ ಕೈವಾರಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಿದ್ದು ಬೆಂಗಳೂರುಮತ್ತು ಹೊಸಕೋಟೆ ಮಾರ್ಗವಾಗಿ ಕೈವಾರಕ್ಕೆ ೬೦ ಕಿ.ಮೀ. ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top