ಸಿನಿಮಾ

ದಶಕಗಳ ಹಿಂದೆ ಟಿವಿಯಲ್ಲಿ ನಟನೆ ಮಾಡ್ತಿದ್ದ ಕೆ.ಪಿ.ನಂಜುಂಡಿ ಮತ್ತೊಮ್ಮೆ ಹಳೆ ಖದರ್ ನೊಂದಿಗೆ ಬರ್ತಿದ್ದಾರೆ .

ಹತ್ತಾರು ವರ್ಷಗಳ ಹಿಂದೆ ಟಿವಿ ಸೀರಿಯಲ್ ಗಳಲ್ಲಿ ನಟನೆ ಮಾಡಿ ಮನೆ ಮಗನಂತೆಯೇ ಆಗಿ ಹೋಗಿದ್ದ ನಂಜುಂಡಿ ಕಾಲ ಕ್ರಮೇಣ ತಮ್ಮ ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡು ಸಂಪೂರ್ಣ ಅಭಿನಯವನ್ನು ಕೈಬಿಟ್ಟಿದ್ದರು ಈಗ ಮತ್ತೊಮ್ಮೆ ಕನಕ ಚಿತ್ರದಲ್ಲಿ ತಮ್ಮ ಹಳೆ ಖದರ್ ನೊಂದಿಗೆ ಬೆಳ್ಳಿ ತೆರೆಗೆ ಬರ್ತಿದ್ದಾರೆ .

 

 

ನಾಯಕ ನಟ ದುನಿಯಾ ವಿಜಯ ಅವರ ಹೊಸ ಚಿತ್ರ ಕನಕ ಇನ್ನೇನು ಜನವರಿ 26 ನೇ ತಾರೀಕು ಗಣರಾಜ್ಯ ದಿನದಂದು ಬಿಡುಗಡೆ ಆಗಲಿದೆ .
ನವೀನ ಸಜ್ಜು ಸಂಗೀತ ಸಂಯೋಜಿಸಿರುವ ‘ಎಣ್ಣೆ ನಿಮ್ಮದು ಊಟ ನಂದು’ ಎಂದು ಪ್ರಾರಂಭವಾಗುವ ಈ ಹಾಡು ಸ್ಯಾಂಡಲ್ ವುಡ್ ನಲ್ಲಿ ಕಿಕ್ ಕೊಡುತ್ತಿದೆ.

 

 

ನವೀನ ಸಜ್ಜು ಸಂಗೀತ ಸಂಯೋಜಿಸಿರುವ ಈ ಹಾಡನ್ನು ಸ್ವತಃ ಅವರೇಹಾಡಿದ್ದು ಹಾಡಿಗೆ ಅವರೇ ಹೆಜ್ಜೆ ಹಾಕಿದ್ದಾರೆ ಸದ್ಯ ಚಂದನವನದಲ್ಲಿ ಸದ್ದು ಮಾಡುತ್ತಿರುವ
ಎಣ್ಣೆ ಸಾಂಗ್ ಗಳ ಪಟ್ಟಿಗೆ ಕನಕ ಚಿತ್ರದ ಈ ಹಾಡು ಕೂಡ ಸೇರಿಕೊಂಡಿದೆ. ಯೂಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಈ ಹಾಡು ತುಂಬಾ ವೈರಲ್ ಆಗಿದೆ.

 

 

ಇಷ್ಟು ದಿನ ತಮ್ಮ ಚಿನ್ನದ ಮಳಿಗೆ ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ ಹಾಗು ‘ವಿಶ್ವ ಕರ್ಮ’ ಸಮಾವೇಶಗಳಲ್ಲಿ ತೊಡಗಿಸಿಕೊಂಡಿದ್ದ ನಂಜುಂಡಿ ಮತ್ತೆ ಬೆಳ್ಳಿ ತೆರೆಗೆ ಮರಳಿರುವುದು ಬಹಳಷ್ಟು ಮಂದಿಗೆ ಖುಷಿ ಕೊಟ್ಟಿದೆ .

 

 

ಕನಕ ಚಿತ್ರದ ಎಣ್ಣೆ ಸಾಂಗು ಈಗಾಗಲೇ ಭಾರಿ ಗದ್ದಲವನ್ನು ಎಬ್ಬಿಸಿ ಪಡ್ಡೆಗಳ ಮನ ಗೆದ್ದಿದೆ, ಈಗಾಗಲೇ ಭಾರಿ ನಿರೀಕ್ಷೆಗಳು ಇದ್ದು ಚಿತ್ರ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದಾರೆ ಪ್ರೇಕ್ಷಕರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top