ವಿಶೇಷ

‘ಲೌ’ ಗೋಡೆ ಲೌಲಿಯಾಗಿದೆ ಇದರ ಬಗ್ಗೆ ತಿಳಿದುಕೊಳ್ಳಿ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

‘ಲೌ’ ಗೋಡೆ ಬಗ್ಗೆ ತಿಳಿದುಕೊಳ್ಳಿ!

ಲೌ ಆಕಾರದ ಈ ಡ್ಯಾಂ ಲೌಲಿಯಾಗಿದೆಯಲ್ಲವೇ?

 

 

ಇದೇನು ಪ್ರೇಮಿಗಳಿಗಾಗಿ ನಿರ್ಮಿಸಿದ್ದಾರೆಯೇ?

ಪ್ರೇಮಿಗಳು ಬರಲು ಅಡ್ಡಿಯಿಲ್ಲ. ಆದರೆ ಅವರಿಗಾಗಿ ಮಾತ್ರವೇ ಇದನ್ನು ನಿರ್ಮಿಸಿಲ್ಲ. ಟೌಮ್ ಸೌಕ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್‍ಗೆ ನೀರು ಸಂಗ್ರಹಿಸಲು ನಿರ್ಮಿಸಿರುವ ಅಣೆಕಟ್ಟೆ ಇದು. ಈ ಅಣೆಕಟ್ಟೆಯನ್ನು ಲೌ ಆಕಾರದಲ್ಲಿ ಏಕೆ ನಿರ್ಮಿಸಿದ್ದಾರೆಂಬುದು ತಿಳಿದಿಲ್ಲ. ನೀರು ಸಂಗ್ರಹಕ್ಕೆ ಶೇಪ್ ಅಡ್ಡಿಯಾಗಿಲ್ಲ.

 

 

ಲೌ ಪಾಸಾದವರ ಹೃದಯದಲ್ಲಿ ಕರಗಿ ‘ನೀರಾ’ಗುವಷ್ಟು ಮನವಿರುತ್ತದೆ. ಫೇಲಾದವರಲ್ಲಿ ಡ್ಯಾಂನಲ್ಲಿ ಹಿಡಿದಿಡಬಹುದಾದಷ್ಟು ಕಣ್ಣೀರು ಇರಲಿದೆ ಎಂದು ಸಾಂಕೇತಿಕವಾಗಿ ಸೂಚಿಸಲು ಇದು ನಿರ್ಮಿಸಿಲ್ಲ!

ವಿಶಾಲ ಹೃದಯಿಗಳಲ್ಲಿ ಮಾತ್ರ ‘ಲೌ’ ಅರಳೀತು. ಹೀಗಾಗಿ ಇದು ಕೂಡ ಸಾಕಷ್ಟು ವಿಶಾಲವಾಗಿದೆ. ಲೌ ಶೇಪ್‍ನಲ್ಲಿದ್ದು ಲೌಲಿಯಾಗಿದೆ. ಈ ಅಣೆಕಟ್ಟೆಯ ಮೇಲೆ ಮೇಲೆ ಸರಾಗವಾಗಿ ಕಾರು, ಬಸ್‍ಗಳನ್ನು ಚಲಾಯಿಸಬಹುದಾಷ್ಟು ‘ಲೌ’ (ಗೋಡೆ) ವಿಶಾಲವಾಗಿದೆ. ಪ್ರೇಮಿಗಳು ಮಾತ್ರವಲ್ಲದೆ ಎಲ್ಲರನ್ನೂ ಲೌ ಅಣೆಕಟ್ಟೆ ಆಕರ್ಷಿಸುತ್ತಿದೆ.

 

 

ಮಿಸೋರಿ ನದಿ 80 ಕಿ.ಮೀ ದೂರದಲ್ಲಿದೆ. ಅಲ್ಲಿಂದ ಸೇಂಟ್ ಫ್ರಾಂಕೋಯಿಸ್ ಪರ್ವತಕ್ಕೆ ಏರಿಸಿ – ‘ನೀರಿಳಿಸಿ’ 225 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

‘ಲೌ’ನ ಅದ್ಭುತ ‘ಶಕ್ತಿ’ ಕಾಣಬಯಸುವ ‘ಲೌಕಿಕರು’ ಅಮೇರಿಕದ ರೆನಾಲ್ಡ್ಸ್ ಪ್ರಾಂತ್ಯಕ್ಕೆ ತೆರಳಬೇಕು. ಲೌ ಪಾಸಾದರೆ ಮತ್ತೆ ಬರುವ ಹರಕೆ ಹೊತ್ತು ಬನ್ನಿ- ತಪ್ಪಿಲ್ಲ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top