ಸಮಾಚಾರ

ಕಾಸಿಲ್ಲಾ ಅಂದ್ರೆ ಈ ಮನೆಯಲ್ಲಿ ಕರಿಮಣಿ ಕೂಡ ತೋರಿಸರು, ಟರ್ಕಿಯಲ್ಲಿ ಮತ್ಸ್ಯಬೇಲಿ-ಪ್ರ್ಯಾನ್ಸಿನಲ್ಲಿ ಅಕ್ಷೇರಿಯಂಗಿಳಿ!

ಕಾಸಿಲ್ಲಾ ಅಂದ್ರೆ ಈ ಮನೆಯಲ್ಲಿ ಕರಿಮಣಿ ಕೂಡ ತೋರಿಸರು, ಟರ್ಕಿಯಲ್ಲಿ ಮತ್ಸ್ಯಬೇಲಿ-ಪ್ರ್ಯಾನ್ಸಿನಲ್ಲಿ ಅಕ್ಷೇರಿಯಂಗಿಳಿ!

ಟರ್ಕಿಯಲ್ಲಿ ಮತ್ಸ್ಯಬೇಲಿ-ಪ್ರ್ಯಾನ್ಸಿನಲ್ಲಿ ಅಕ್ಷೇರಿಯಂಗಿಳಿ!

ಟರ್ಕಿ ದೇಶದ ಎಯಿಜಿನ್ ಸೀ ಬಳಿಯ ಕಾಂಪೌಂಡ್ ರಹಿತ ಈ ಮನೆಗೆ ಬೇಲಿ ಇಲ್ಲ. 20 ಸಾವಿರ ಡಾಲರ್ ಖರ್ಚು ಮಾಡಿ 50 ಮೀಟರ್ ಉದ್ದದ ಮತ್ಸ್ಯಾಗಾರ ನಿರ್ಮಿಸಿದ್ದಾನೆ ಮಾಲೀಕ ಮೊಹ್ಮೆಟ್ ಆಲಿ ಗೊಕ್ಸೆಗು.

 

 

ಬಾಹ್ಯಕ್ಕಿಂತಲೂ ಆಂತರಿಕ ಸೌಂದರ್ಯ ಮುಖ್ಯ ಎಂಬುದು ತಿಳಿದಿದೆ. ಆದರೂ ಆಕರ್ಷಕ ‘ಮತ್ಸ್ಯ ಬೇಲಿ’ ನಿರ್ಮಿಸಿದ್ದಾನೆ.

ಗೊಕ್ಸೆಗು ಏನು ಗುಗ್ಗು ಅಲ್ಲಾ ರೀ…ಮನೆಯೊಳಗೆ ಬರುವ ಅತಿಥಿಗಳಿಗಿಂತಲೂ ಹೊರಗೆ ನಿಲ್ಲುವವರೇ ಅಧಿಕವಾಗಿರುವಂತೆ ಮಾಡಿರಬೇಕು. ಗಾಜಿನ ಮತ್ಸ್ಯಾಗಾರದಲ್ಲಿ ಜೀವಂತ ‘ಮೀನಾರಾಶಿ’ಯೊಂದಿಗೆ ಆಕ್ಟೋಪಸ್ ಕೂಡ ಇದೆಯಂತೆ.  ಗೋಲಿ ಹೊಡೆದರೆ ಅಪಾಯ ಗಟ್ಟಿ.

 

 

ಇದು ಟರ್ಕಿಯ ಮತ್ಸ್ಯ ಬೇಲಿಯ ಮನೆ ನೋಡಿ… ಪ್ರಾನ್ಸ್‍ನ ಬಾಂದೋಲ್ ನಗರಕ್ಕೆ ಬನ್ನೀ…

ಈ ಮನೆಯಲ್ಲಿ ಮತ್ಸ್ಯಗಾರವೇ ಇದೆ.

 

 

ರೀ ಈ ಮತ್ಸ್ಯಾಗಾರಕ್ಕೆ ಇಳಿದು ಈಜಬಹುದು. ಮೀನಿನಂತೆ ಪುಟ್ಟ ಕಲ್ಲುಗಳು, ಅವುಗಳ ಮೇಲೆಲ್ಲಾ ಈಜಿ ಮೋಜು ಮಾಡಬಹುದು. ವಿಶಿಷ್ಟ ವಿನ್ಯಾಸದ ಅಕ್ವೇರಿಯಂ ಈಜುಕೊಳದಿಂದ ಮನೆಯ ಒಳಗೂ, ಹೊರಗೂ ಒಂದೇ ರೀತಿಯಾಗಿ ಕಾಣಿಸಲಿದೆ. ಈ ಅಕ್ವೇರಿಯಂಗಿಳಿದರೆ, ಗಾಜಿನ ಗೋಡೆಯ ಮೂಲಕ, ಮನೆಯೊಳಗೇ ಈಜಿದ ಅನುಭವವಾಗಲಿದೆ. ಈ ವಿನ್ಯಾಸವನ್ನು ಖ್ಯಾತ ಕಟ್ಟಡ ವಿನ್ಯಾಸಕಾರ ರೂಡಿ ರಿಕೊಟ್ಟಿ ರೂಪಿಸಿದ್ದಾನೆ. ಏರ್‍ಬಿಎನ್‍ಬಿ ಎಂಬ ಸಂಸ್ಥೇ ರೂಪಿಸಿರುವ ಈ ಮನೆಯಲ್ಲಿ ‘ಹೋಂ ಸ್ಟೇ’ ಮಾಡಲು ಅಡ್ಡಿಯಿಲ್ಲ. ಆದರೆ ದುಭಾರಿ ತೆರಬೇಕು. ವಾರಾಂತ್ಯದಲ್ಲಿ ಇನ್ನಷ್ಟು ಕಾಸ್ಟ್ಲಿ. ಕಾಸಿಲ್ಲಾ ಅಂದ್ರೆ ಈ ಮನೆಯಲ್ಲಿ ಕರಿಮಣಿ ಕೂಡ ತೋರಿಸರು.

 

 

ಇದಕ್ಕಿಂತಲೂ ಗೋಲಿ ಹೊಡೆಯದೆ ಟರ್ಕಿಯ ಮನೆಯನ್ನೇ ಮನತುಂಬಿಕೊಳ್ಳಲು ಅಡ್ಡಿಯಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top