ಮನೋರಂಜನೆ

ನಿಮ್ಮನ್ನು ನಕ್ಕು ನಗಿಸಲು ಹೊಸ ರೂಪದಲ್ಲಿ ಮತ್ತೆ ಬರ್ತಿದೆ ಮಜಾ ಟಾಕೀಸ್-2.

ನಿಮ್ಮನ್ನು ನಕ್ಕು ನಗಿಸಲು ಹೊಸ ರೂಪದಲ್ಲಿ ಮತ್ತೆ ಬರ್ತಿದೆ ಮಜಾ ಟಾಕೀಸ್-2.

 

 

ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬರುತ್ತಿದ್ದ ಮಜಾ ಟಾಕೀಸ್ ಶೋನ ಮೊದಲ ಸೀಸನ್ ಭರ್ಜರಿ ಯಶಸ್ಸನ್ನು ಗಳಿಸಿತ್ತು ಸುಮಾರು 250 ಕ್ಕೂ ಅಧಿಕ ಎಪಿಸೋಡ್ಗಳನ್ನ ಪ್ರಸಾರ ಮಾಡಿದ್ದ ಮಜಾಟಾಕೀಸ್ ಅತಿಹೆಚ್ಚು ಎಪಿಸೋಡ್ ಗಳನ್ನೂ ಪ್ರಸಾರ ಮಾಡಿದ ಕಾಮಿಡಿ ಷೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮದ ಕಲಾವಿದ ಕಾಮಿಡಿ ಸೃಜನ್ ನಿರೂಪಣೆಗೆ ವೀಕ್ಷಕರು ಫಿದಾ ಆಗಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಮಜಾ ಟಾಕೀಸ್ ಮುಕ್ತಾಯಗೊಂಡಿತ್ತು.

 

 

ಮಜಾ ಟಾಕೀಸ್ ಮುಗಿದ ನಂತರ ವೀಕೆಂಡ್’ನಲ್ಲಿ ಮಜಾ ಟಾಕೀಸ್ ಇಲ್ಲದೆ ಬೇಸರಗೊಂಡಿದ್ದರು ಅಂತಹ ವೀಕ್ಷಕರಿಗೆ ಮಜಾ ಟಾಕೀಸ್ ಟೀಮ್ ಸಿಹಿ ಸುದ್ದಿಯನ್ನು ನೀಡಿದೆ. ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಮಜಾ ಟಾಕೀಸ್ ಹೊಸ ರೂಪದಲ್ಲಿ ಮಜಾ ಟಾಕೀಸ್ ಸೂಪರ್ ಸೀಸನ್ ಎಂಬ ಹೆಸರಿನಲ್ಲಿ ಮತ್ತೆ ಬರಲು ಸಜ್ಜಾಗಿದೆ. ನಿರೂಪಕ ಸೃಜನ್ ಲೋಕೇಶ್ ಅವರು ತಮ್ಮ ಫೇಸ್ ಬುಕ್ ಅಕೌಂಟ್ ಅಲ್ಲಿ ಮಜಾ ಟಾಕೀಸ್ ಮತ್ತೆ ಶುರುವಾಗುತ್ತಿರುವುದರ ಬಗ್ಗೆ ತಿಳಿಸಿದ್ದು ಇದಕ್ಕೆ ಸಂಭಂದಿಸಿದಂತೆ ವೀಡಿಯೊವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ ಚಾನೆಲ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹೊರಬಿಟ್ಟಿಲ್ಲ.

ಈಗಾಗಲೇ ಕಾರ್ಯಕ್ರಮದ ಪ್ರೋಮೋ ಶೂಟಿಂಗ್ ಅನ್ನು ಮಾಡಿ ಮುಗಿಸಿರುವ ಮಜಾ ಟಾಕೀಸ್ ಟೀಮ್ ಸೂಪರ್ ಸೀಸನ್ ಅನ್ನು ಫೆಬ್ರವರಿ 08ನೇ ತಾರೀಕಿನಿಂದ ಶುರು ಮಾಡುವ ತಯಾರಿಯಲ್ಲಿದೆ ಎಂಬ ಸುದ್ದಿಯಿದೆ ಈ ಭಾರಿ ಕಾರ್ಯಕ್ರಮ ಸಂಪೂರ್ಣ ವಿಭಿನ್ನವಾಗಿ ಮತ್ತು ಹೊಸ ಕಾನ್ಸೆಪ್ಟ್ ನಲ್ಲಿ ಮೂಡಿಬರಿಲಿದೆಯಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top