ಕಿರುತೆರೆ

ದಿವಾಕರ್ ಮುಂದೆ ಅವರ ಪತ್ನಿ ಮಮತಾ ಇಟ್ಟಿರುವ ಬಹುದೊಡ್ಡ ಬೇಡಿಕೆ ಏನು ಗೊತ್ತಾ?

ದಿವಾಕರ್ ಮುಂದೆ ಅವರ ಪತ್ನಿ ಮಮತಾ ಇಟ್ಟಿರುವ ಬಹುದೊಡ್ಡ ಬೇಡಿಕೆ ಏನು ಗೊತ್ತಾ?

 

 

ಬಿಗ್ ಬಾಸ್ ಸೀಸನ್ 5 ಇನ್ನೇನು ಮುಗಿಯುವ ಹಂತ ತಲುಪಿದ್ದು ಕೇವಲ ಇನ್ನು ಮೂರು ವಾರಗಳು ಮಾತ್ರ ಬಾಕಿ ಇದೆ. ಈ ಹಂತದಲ್ಲಿ ಇಷ್ಟು ದಿನ ತಮ್ಮ ಫ್ಯಾಮಿಲಿಯವರನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಸ್ವಲ್ಪ ಮಟ್ಟಿಗೆ ಚೈತನ್ಯ ನೀಡುವ ಸಲುವಾಗಿ ಒಬ್ಬೊಬ್ಬ ಸ್ಪರ್ಧಿಯ ಕುಟುಂಬದಿಂದ ಒಂದು ದಿನದ ಮಟ್ಟಿಗೆ ಬಿಗ್ ಬಾಸ್ ಮನೆಗೆ ಕರೆಸಲಾಗುತ್ತಿದೆ. ಅದರಂತೆ ಮೊನ್ನೆ ದಿವಾಕರ್ ಅವರ ಪತ್ನಿ ಮಮತಾ ಬಿಗ್ ಬಾಸ್ ಮನೆಯೊಳಕ್ಕೆ ಕಾಲಿಟ್ಟಿದ್ದರು.

 

 

ಮನೆಗೆ ಬಂದು ಮನೆಯ ಎಲ್ಲ ಸದಸ್ಯರನ್ನು ಖುಷಿಯಿಂದ ಮಾತನಾಡಿಸಿದ ದಿವಾಕರ್ ಪತ್ನಿ ಮಮತಾ ದಿವಾಕರ್ ಜೊತೆ ಮಾತನಾಡುತ್ತ ಕುಳಿತು ಅವರ ಮುಂದೆ ಕೆಲವು ಬೇಡಿಕಗಳನ್ನು ಇಟ್ಟಿದ್ದಾರೆ. ಮುಂದಿನ ತಿಂಗಳು ಅವರ ವಿವಾಹ ವಾರ್ಷಿಕೋತ್ಸವವಿದ್ದು ಅದಕ್ಕೆ ಮಮತಾ ಅವರಿಗೆ ದಿವಾಕರ್ ವಿಶೇಷವಾದ ಒಂದು ಗಿಫ್ಟ್ ಅನ್ನು ನೀಡಬೇಕಂತೆ.. ಅಷ್ಟಕ್ಕೋ ಮಮತಾ ಅವರು ಕೇಳಿರುವ ವಿಶೇಷವಾದ ಗಿಫ್ಟ್ ಏನು ಗೊತ್ತಾ? ಮುಂದೆ ಓದಿ.

 

 

ದಿವಾಕರ್ ಈ ಭಾರಿಯ ಬಿಗ್ ಬಾಸ್ ವಿನ್ನರ್ ಆಗಬೇಕಂತೆ, ಅದೇ ಅವರ ವಿವಾಹ ಮಹೋತ್ಸವಕ್ಕೆ ಬೇಕಾಗಿರುವ ಗಿಫ್ಟ್ ಅಂತೇ, ದಿವಾಕರ್ ಏನಾದರೂ ಬಿಗ್ ಬಾಸ್ ನಿಂದ ಹೊರಬರುತ್ತಾರೆ ಅಂದರೆ ಅದು ಬಿಗ್ ಬಾಸ್ ವಿನ್ನರ್ ಆಗಿಯೇ ಬರಬೇಕಂತೆ. ಇದು ಮಮತಾ ಅವರ ನಹುದೊಡ್ಡ ಡಿಮ್ಯಾಂಡ್ ಆಗಿದೆ. ಮಮತಾ ಅವರ ಈ ಬೇಡಿಕೆ ಈಡೇರುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ ಇದೆ ತಿಂಗಳ ಕೊನೆಯಲ್ಲಿ ಉತ್ತರ ಸಿಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top