ತಿಂಡಿ ತೀರ್ಥ

ಬಾಯಲ್ಲಿ ನೀರು ಬರಿಸೋ ಗರಿಗರಿಯಾದ ಮಶ್ರೂಮ್ ಬೋಂಡಾ ಮಾಡುವ ಸಿಂಪಲ್ ವಿಧಾನ ತಿಳಿದುಕೊಳ್ಳಿ.

ಬಾಯಲ್ಲಿ ನೀರು ಬರಿಸೋ ಗರಿಗರಿಯಾದ ಮಶ್ರೂಮ್
ಬೋಂಡಾ ಮಾಡುವ ಸಿಂಪಲ್ ವಿಧಾನ ತಿಳಿದುಕೊಳ್ಳಿ.

ಮಶ್ರೂಮ್ ಬೋಂಡಾ :

 

 

ಬೇಕಾಗುವ ಸಾಮಗ್ರಿಗಳು :

ಚಿಕ್ಕದಾಗಿ ಕತ್ತರಿಸಿಕೊಂಡ ಅಣಬೆ 1 ಕಪ್
ಬೇಯಿಸಿಕೊಂಡು ಸಿಪ್ಪೆ ತೆಗೆದ ಆಲೂಗೆಡ್ಡೆ 2
ಜೀರಿಗೆ 1 ಚಮಚ

ಚಿಕ್ಕದಾಗಿ ಕತ್ತರಿಸಿಕೊಂಡ ಹಸಿಮೆಣಸಿನಕಾಯಿ 3
ಚಿಕ್ಕದಾಗಿ ಕತ್ತರಿಸಿಕೊಂಡ ಶುಂಠಿ 1 ಚಮಚ
ಗರಂ ಮಸಾಲಾ ಪುಡಿ 1 ಚಮಚ

ಕೊತ್ತಂಬರಿ ಸೊಪ್ಪು ಸ್ವಲ್ಪ
ಅಚ್ಚ ಖಾರದ ಪುಡಿ ರುಚಿಗೆ ಬೇಕಾದಷ್ಟು
ಉಪ್ಪು ರುಚಿಗೆ ಬೇಕಾದಷ್ಟು
ಎಣ್ಣೆ

ಕಡಲೆ ಹಿಟ್ಟು ಅರ್ಧ ಕಪ್
ಕಾಳು ಮೆಣಸಿನಪುಡಿ ಅರ್ಧ ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ

 

 

ಮಾಡುವ ವಿಧಾನ :

ಮೊದಲಿಗೆ ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ,ಚಿಕ್ಕದಾಗಿ ಕತ್ತರಿಸಿಕೊಂಡ ಶುಂಠಿ,ಚಿಕ್ಕದಾಗಿ ಕತ್ತರಿಸಿಕೊಂಡ ಹಸಿಮೆಣಸಿನಕಾಯಿ,ಚಿಕ್ಕದಾಗಿ ಕತ್ತರಿಸಿಕೊಂಡ ಅಣಬೆ,ಉಪ್ಪು ಹಾಕಿ ಚೆನ್ನಾಗಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು .ನಂತರ ಇದಕ್ಕೆ ಬೇಯಿಸಿಕೊಂಡು ಸಿಪ್ಪೆ ತೆಗೆದು ಪುಡಿಯ ರೀತಿ ಮಾಡಿಕೊಂಡ ಆಲೂಗೆಡ್ಡೆ ,ಗರಂ ಮಸಾಲಾ ಪುಡಿ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಬೇಕು .

ಈ ಸಮಯದಲ್ಲಿ ಕಡಲೆ ಹಿಟ್ಟು ,ಕಾಳು ಮೆಣಸಿನಪುಡಿ,ಶುಂಠಿ ಬೆಳ್ಳುಳ್ಳಿ ಪೇಸ್ಟ್,ಉಪ್ಪು ,ಅಚ್ಚ ಖಾರದ ಪುಡಿ ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು .
ನಂತರ ಆಗಲೇ ಕಲಸಿ ಪಕ್ಕದಲ್ಲಿ ಇಟ್ಟುಕೊಂಡ ಮಿಶ್ರಣವನ್ನು ಚಿಕ್ಕ ಚಿಕ್ಕದಾಗಿ ನಿಮಗೆ ಬೇಕಾದ ಆಕಾರದಲ್ಲಿ ಮಾಡಿಕೊಂಡು ಬೋಂಡಾದ ಹಿಟ್ಟಿನಲ್ಲಿ ಇದನ್ನು ಮುಳುಗಿಸಿ ಬಿಸಿಯಾದ ಎಣ್ಣೆಯಲ್ಲಿ ಇದನ್ನು ಕರಿಯಬೇಕು .
ಹೀಗೆ ಮಶ್ರೂಮ್ ಬೋಂಡಾ ಮಾಡಿಕೊಂಡು ತಿನ್ನಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top