ದೇವರು

ಗೊಮ್ಮಟೇಶ್ವರರಿಗೆ ಚಡ್ಡಿ ಹೋಲಿಸಲು ಹೊರಟಿದ್ದ ಆದಿ ಪ್ರಭುವಿಗೆ ಜ್ಞಾನೋದಯವಾಗಿ ಕ್ಷಮಾಪಣೆ.

ಗೊಮ್ಮಟೇಶ್ವರರಿಗೆ ಚಡ್ಡಿ ಹೋಲಿಸಲು
ಹೊರಟಿದ್ದ ಆದಿ ಪ್ರಭುವಿಗೆ ಜ್ಞಾನೋದಯವಾಗಿ ಕ್ಷಮಾಪಣೆ.

 

 

ರಾಜ್ಯದ ವಿವಿಧ ಸ್ಥಳಗಳಲ್ಲಿರುವ ಗೊಮ್ಮಟೇಶ್ವರ ಮೂರ್ತಿಗಳಿಗೆ ಚಡ್ಡಿ ಹಾಕಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದ್ದಿದ್ದ ಪತ್ರಕರ್ತ ಪ್ರಭು ಆದಿ ಇಂದು ಶ್ರವಣಬೆಳಗೊಳ ಕ್ಷೇತ್ರಕ್ಕೆ ಪ್ರಭು ಭೇಟಿ ನೀಡಿ ಜೈನ ಮುನಿ ಶ್ರೀ 108 ಚಂದ್ರಪ್ರಭ ಸಾಗರ ಅವರ ಬಳಿ ಕ್ಷಮೆ ಕೇಳಿ ತನ್ನ ತಪ್ಪು ಒಪ್ಪಿಕೊಂಡು ಸಮಸ್ತ ಜೈನ ಸಮಾಜದವರಲ್ಲಿ ಕ್ಷಮೆಯಾಚಿಸಿದ್ದಾರೆ.

ಈ ವಿಡಿಯೋ ನೋಡಿ:

 

ಏನಿದು ಘಟನೆ:

ರಾಜ್ಯದ ವಿವಿಧ ಸ್ಥಳಗಳಲ್ಲಿರುವ ಗೊಮ್ಮಟೇಶ್ವರ ಮೂರ್ತಿಗಳಿಗೆ ಚಡ್ಡಿ ಹಾಕಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆಯಲಾಗಿದೆ. ಗೊಮ್ಮಟೇಶ್ವರ ಅರ್ಥತ್ ಬಾಹುಬಲಿಯ ಮೂರ್ತಿಯನ್ನು ಬೆತ್ತಲೆಯಾಗಿ ನೋಡುವುದಕ್ಕೆ ಮುಜುಗರವಾಗುತ್ತಿದೆ ಹಾಗಾಗಿ ಶ್ರವಬೆಳಗೋಳ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿರುವ ಗೊಮ್ಮಟೇಶ್ವರನ ಮೂರ್ತಿಗೆ ಬಟ್ಟೆ ಹಾಕಿಸಿ ಎಂದು ಆದಿ ಪ್ರಭು ಎಂಬ ಪತ್ರಕರ್ತ ಹೊಸ ಕ್ಯಾತೆ ತೆಗೆದಿದ್ದರು.

ಬಾಹುಬಲಿ 9ನೇ ಶತಮಾನದಲ್ಲಿ ದಿಗಂಬರರಾಗಿದ್ದರು ಹಾಗಂತ ಈಗಲೂ ಕೂಡ ಗೊಮ್ಮಟೇಶ್ವರನನ್ನು ದಿಗಂಬರನಾಗಿ ನೋಡೋದಕ್ಕೆ ಆಗೋದಿಲ್ಲ, ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಮೂರ್ತಿಯ ಬಗ್ಗೆ ಕೇಳಿದಾಗ ವಿವರಣೆ ಕೇಳಿದರೆ ಬಾಹುಬಲಿಯ ಬಗ್ಗೆ ಹೇಳೋದಕ್ಕೆ ನಿಜಕ್ಕೂ ನಾಚಿಕೆಯಾಗುತ್ತದೆ ಹಾಗಾಗಿ ಗೊಮ್ಮಟೇಶ್ವರನ ಮೂರ್ತಿಗೆ ಬಟ್ಟೆ ಹಾಕುವ ಕಾರ್ಯವನ್ನು ಕೈಗೊಳ್ಳಿ ಎಂದು ಆದಿ ಪ್ರಭು ಎಂಬ ಪತ್ರಕರ್ತ ಹೇಳಿಕೊಂಡಿದ್ದು ಬಹಿರಂಗವಾಗಿಯೇ ಸಿಎಂ ಸಿದ್ದರಾಮಯ್ಯನವರಿಗೆ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೂ ಈ ಪತ್ರ ಬರೆದು ಬಟ್ಟೆ ಹಾಕುವಂತೆ ಪತ್ರವನ್ನು ಬರೆದಿದ್ದರು.

9ನೇ ಶತಮಾನದಲ್ಲಿ ಧರ್ಮಗುರು ಬಾಹುಬಲಿಯವರು ತೆಗೆದುಕೊಂಡಂತ ನಿರ್ಧಾರವು ಅವರಿಗೆ ಸರಿ ಅನಿಸಿರಬಹುದು. ಕನಿಷ್ಠ ಗೊಮಟೇಶ್ವರನ ಮಾನವನ್ನು ಮುಚ್ಚಲು ಚಡ್ಡಿಯಾದರೂ ಹಾಕಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top