ಮನೋರಂಜನೆ

ಚುನಾವಣಾ ಸಮಯದಲ್ಲೇ ರಾಜಕೀಯದ ಧ್ವಜ ಹಿಡಿದ ಪ್ರಿಯಾಮಣಿ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚುನಾವಣಾ ಸಮಯದಲ್ಲೇ ರಾಜಕೀಯದ ಧ್ವಜ ಹಿಡಿದ ಪ್ರಿಯಾಮಣಿ.

 

 

ಟೈಟಲ್ ನೋಡಿ ನಟಿ ಪ್ರಿಯಾಮಣಿ ರಾಜಕೀಯ ಸೇರ್ಕೊಂಡರಾ ಅಂತಾ ಕನ್ಫ್ಯೂಸ್ ಆಯ್ತಾ? ಹೌದು ನಟಿ ಪ್ರಿಯಾಮಣಿ ಜನಶಕ್ತಿ ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರೆ.ಆದರೆ ಅದು ನಿಜ ಜೀವನದಲ್ಲಿ ಅಲ್ಲ ಬದಲಾಗಿ ಸಿನಿಮಾದಲ್ಲಿ. ಇತ್ತೀಚಿಕೆ ಜಯನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರಳವಾಗಿ ಮುಸ್ತಾಫ್ ರಾಜ್ ಅವರೊಂದಿಗೆ ವಿವಾಹವಾಗಿದ್ದ ಪ್ರಿಯಾಮಣಿ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ ಆಗ ಅವರು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

 

 

ಅಶೋಕ್ ಕಶ್ಯಪ್ ನಿರ್ದೇಶನದಲ್ಲಿ ‘ಧ್ವಜ’ ಶೀರ್ಷಿಕೆಯ ಚಿತ್ರ ಮೂಡಿಬರುತ್ತಿದ್ದು ಅದರಲ್ಲಿ ನಟಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಲಿದ್ದಾರೆ. ಇದು ರಾಜಕೀಯದ ಕಥಾಹಂದರ ಇರುವ ಥ್ರಿಲ್ಲರ್ ಸಿನಿಮಾವಾಗಿದ್ದು ಈಗಾಗಲೇ ಚಿತ್ರದ ಪೋಸ್ಟರ್ ಗಳು ಬಿಡುಗಡೆಯಾಗಿವೆ. ಚಿತ್ರದ ಪೋಸ್ಟರ್ ಗಳು ಗಮನ ಸೆಳೆಯುತ್ತಿದ್ದು ಚಿತ್ರದಲ್ಲಿ ಪ್ರಿಯಾಮಣಿ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಪೋಸ್ಟರ್ ಹೇಳುತ್ತಿದೆ.

ವಿಶೇಷ ಎಂದರೆ ಚಿತ್ರದಲ್ಲಿ ಪ್ರಿಯಾಮಣಿಯವರಿಗೂ ಫೈಟ್ ಸೀಕ್ವೆನ್ಸ್ ಇದ್ದು ಜಾಲಿ ಬಾಸ್ಟಿನ್ ಸಾಹಸ ಸಂಯೋಜನೆಯಲ್ಲಿ ವಿಭಿನ್ನವಾಗಿ ಚಿತ್ರಸಲಾಗಿದೆ. ಪ್ರಿಯಾಮಣಿಗೆ ಜೋಡಿಯಾಗಿ ಹೊಸ ಪ್ರತಿಭೆ ರವಿ ಎಂಬುವವರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಟಿ.ಎನ್ ಸೀತಾರಾಮ್, ತಬಲ ನಾಣಿ, ವೀಣಾ ಸುಂದರ್ ಕೂಡ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಂತೋಷ್ ನಾರಾಯಣ್ ಅವರ ಸಂಗೀತ ನಿರ್ದೇಶನ ಮಾಡುತ್ತಿದ್ದು ಮಂಜು ಮಾಂಡವ್ಯ ಅವರು ಸಂಭಾಷಣೆ ಬರೆದಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top