ಮನೋರಂಜನೆ

ತಂದೆಯಂತೆಯೇ ಎಲ್ಲರೂ ಮೆಚ್ಚುವಂತ ಕೆಲಸ ಮಾಡುತ್ತಿರುವ ಶಂಕರ್ ನಾಗ್ ಮಗಳು.

ತಂದೆಯಂತೆಯೇ ಎಲ್ಲರೂ ಮೆಚ್ಚುವಂತ ಕೆಲಸ ಮಾಡುತ್ತಿರುವ ಶಂಕರ್ ನಾಗ್ ಮಗಳು.

 

 

ಕನ್ನಡ ಚಿತ್ರರಂಗದ ದಿಗ್ಗಜ ನಟ ಕರಾಟೆ ಕಿಂಗ್ ಶಂಕರ್ ನಾಗ್ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ತಮ್ಮ ಕ್ರಿಯಾಶೀಲ ಚಿತ್ರಗಳಿಂದ ಜನರ ಮನಸ್ಸನ್ನು ಕದ್ದಿದ್ದ ಶಂಕರ್ ನಾಗ್ ಈಗಲೂ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಇದ್ದಾರೆ ಎಂದರೆ ತಪ್ಪಾಗುವುದಿಲ್ಲ.. ಅಭಿಮಾನಿಗಳ ಪ್ರೀತಿಯ ಶಂಕ್ರಣ್ಣ ಅವರ ಮಗಳು ಕಾವ್ಯನಾಗ್ ಕೂಡ ತಂದೆಯ ರೀತಿಯಲ್ಲಿ ತನ್ನ ಕ್ರಿಯಾತ್ಮಕ ಕೆಲಸಗಳಿಂದ ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಕಾವ್ಯನಾಗ್ ಈಗ ಮಾಡುತ್ತಿರುವ ಕೆಲಸವಾದರೂ ಎನು? ಅಂತೀರಾ ಮುಂದೆ ಓದಿ.

 

 

ಸದ್ಯ ಕಾವ್ಯನಾಗ್ ತೆಂಗಿನೆಣ್ಣೆ ಉತ್ಪಾದನೆ ಮಾಡಿ ಮಾರಾಟ ಮಾಡ್ತಿದ್ದಾರೆ ! ಹೌದು, ಶಂಕರ್‌ನಾಗ್ ಮಗಳು ‘ಕೋಕೋನೆಸ್’ ಎಂಬ ಸಂಸ್ಥೆಯ ಮೂಲಕ ಪರಿಶುದ್ಧ ತೆಂಗಿನ ಹಾಲಿನ ಎಣ್ಣೆ(ವರ್ಜಿನ್ ಆಯಿಲ್)ಯನ್ನು ಸಂಶೋದಿಸುತ್ತಿದ್ದರೆ. ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ತಂದೆಯ ಜಮೀನಿನಲ್ಲಿ ರಾಸಾಯನಿಕ ರಹಿತ ಸೋಪ್ ಮತ್ತು ಎಣ್ಣೆಯನ್ನು ಉತ್ಪಾದನೆ ಮಾಡುವ ಕೊಕೊನೆಸ್ ಎಂಬ ಕಂಪನಿ ಹುಟ್ಟುಗಾಕಿ ಕೆಮಿಕಲ್ ಮುಕ್ತ ಸೋಪ್ ಮತ್ತು ಆಯಿಲ್ ಉತ್ಪಾದನೆ ಮಾಡಿ ಮಾರುತ್ತಿದಾರೆ.

ವೈಲ್ಡ್‌ಲೈಫ್ ಬಯಾಲಜಿ ವ್ಯಾಸಂಗ ಮಾಡಿರುವ ಕಾವ್ಯನಾಗ್ ಅವರಿಗೆ ಜೀವವಿಜ್ಞಾನ, ವನ್ಯಜೀವಿಗಳ ಬಗ್ಗೆ ಅಪಾರವಾದ ಜ್ಞಾನವಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ ಕಾವ್ಯನಾಗ್ ಜನರಲ್ಲಿ ವಿದೇಶಿ ಪ್ರಾಡಕ್ಟ್‌ಗಳ ಮೇಲಿನ ವ್ಯಾಮೋಹದಿಂದ ಹೊರಬರುವಂತೆ ಮಾಡಲು ದೇಶೀಯ ರಾಸಾಯನಿಕ ಮುಕ್ತ ತೆಂಗಿನ ಎಣ್ಣೆಯನ್ನು ಉತ್ಪಾದಿಸುವ ಕಂಪನಿಯನ್ನು ಶುರು ಮಾಡಿದ್ದಾರೆ. ಕೇವಲ ತೆಂಗಿನ ಎಣ್ಣೆ ಮಾತ್ರವಲ್ಲದೇ ತೆಂಗಿನ ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. “ನಮ್ಮಲ್ಲಿ ತೆಂಗು ಅಪಾರ ಪ್ರಮಾಣದಲ್ಲಿ ಲಾಭವಾಗಿದೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿಲ್ಲ ಹಾಗಾಗಿ ನಾವು ತೆಂಗನ್ನು ಸದುಪಯೋಗಪಡಿಸಿಕೊಳ್ಳುವ ದೃಷ್ಟಿಯಿಂದ ಈ ಸಂಸ್ಥೆ ಹುಟ್ಟಿಹಾಕಿದ್ದೇವೆ” ಎಂದು ಕಾವ್ಯನಾಗ್ ಹೇಳುತ್ತಾರೆ.

 

 

ವರ್ಜಿನ್ ಆಯಿಲ್(ತೆಂಗಿನ ಎಣ್ಣೆ) ಅಂದರೇನು?
ನಾವು ನೀವು ಅಡುಗೆಗೆ, ಕೂದಲಿಗೆ ಬಳಸೋದು ಕೊಬ್ಬರಿ ಎಣ್ಣೆ. ಅರ್ಜಿನ್ ಆಯಿಲ್ ಎಂದರೆ ತೆಂಗಿನ ಹಾಲಿನಿಂದ ತಯಾರು ಮಾಡಲಾಗುವ ಎಣ್ಣೆ.ತುರಿದ ತೆಂಗಿನ ಕಾಯಿಯನ್ನು ವಿವಿಧ ಹಂತಗಳಲ್ಲಿ ಸಂಸ್ಕರಿಸಿ ತೆಂಗಿನ ಹಾಲಿನ ಎಣ್ಣೆ ತಯಾರಿಸುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top