ಸಾಧನೆ

ಬಡವರ ಕಷ್ಟಕ್ಕೆ ಮಿಡಿದ ಬ್ಯಾಡ್ಮಿಟನ್ ತಾರೆ ಸಿಂಧು. KBC ಅಲ್ಲಿ ಗೆದ್ದಿದ್ದ 25 ಲಕ್ಷ ಕ್ಯಾನ್ಸರ್ ಆಸ್ಪತ್ರೆಗೆ ದಾನ.

ಬಡವರ ಕಷ್ಟಕ್ಕೆ ಮಿಡಿದ ಬ್ಯಾಡ್ಮಿಟನ್ ತಾರೆ ಸಿಂಧು.
KBC ಅಲ್ಲಿ ಗೆದ್ದಿದ್ದ 25 ಲಕ್ಷ ಕ್ಯಾನ್ಸರ್ ಆಸ್ಪತ್ರೆಗೆ ದಾನ.

 

 

ಬ್ಯಾಡ್ಮಿಟನ್ ತಾರೆ ಪಿವಿ ಸಿಂಧು ಜನಪ್ರಿಯ ಟಿವಿ ಕಾರ್ಯಕ್ರಮವಾದ ಕೌನ್ ಬನೇಗಾ ಕರೋಡಪತಿ ಯಲ್ಲಿ 25 ಲಕ್ಷ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಅವರು ಇಡೀ ಮೊತ್ತವನ್ನು ಹೈದರಾಬಾದ್ನಲ್ಲಿರುವ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಇದು ತೆಲುಗು ನಾಯಕ ಬಾಲಕೃಷ್ಣ ನೇತೃತ್ವದಲ್ಲಿ ನಡೆಯುವ ಆಸ್ಪತ್ರೆಯಾಗಿದೆ. ಸಿಂಧುರವರ ಈ ನಿರ್ಧಾರದಿಂದ ಅನೇಕ ರೋಗಿಗಳಿಗೆ ಉಚಿತ ಸೇವೆ ದೊರೆಯಲಿದ್ದು ಆಸತ್ರೆಯ ಆಡಳಿತ ವರ್ಗ ಕೃತಜ್ಞತೆ ಸಲ್ಲಿಸಿದ್ದಾರೆ.

 

 

ಈ ಮುಂಚೆಯೂ ಸಿಂಧು ರವರು ಹಲವೆಡೆ ದೇಣಿಕೆ ನೀಡಿದ್ದರು. ಆದರೆ ಎಲ್ಲಿಯೂ ಅವರು ಹೇಳಿಕೊಂಡಿರಲಿಲ್ಲ. ಅದು ಉತ್ತಮ ಆರಂಭವಾಗಿದೆ. ಬಾಲಕೃಷ್ಣ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಸಿಂಧು ರವರಿಂದ ಸ್ಪೂರ್ತಿ ಪಡೆದ ಅನೇಕರು ದೇಣಿಗೆ ನೀಡಲು ಮುಂದೆ ಬರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಬ್ಯಾಡ್ಮಿಟನ್ ನಲ್ಲಿ ಮಿಂಚುತ್ತಿರುವ ಸಿಂಧು ವಿಶ್ವದಲ್ಲಿ ಭಾರತದ ಕೀರ್ತಿ ಪತಾಕೆ ಹರಿಸುತ್ತಿದ್ದಾರೆ. ಬ್ಯಾಡ್ಮಿಂಟನ್‌ ತಾರೆ, ಪದ್ಮಶ್ರೀ ಪುರಷ್ಕೃತೆ, ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top