ದೇವರು

ಮನಮೋಹಕ ಶ್ರೀ ರೇವಣಸಿದ್ದೇಶ್ವರ ಬೆಟ್ಟದ ಒಂದು ನೋಟ.

ಮನಮೋಹಕ ಶ್ರೀ ರೇವಣಸಿದ್ದೇಶ್ವರ ಬೆಟ್ಟದ ಒಂದು ನೋಟ.

 

ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ರೇವಣಸಿದ್ದೇಶ್ವರ ಬೆಟ್ಟ ಶಿವ ಭಕ್ತರಿಗೆ ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ. ಒಂದು ದಿನದ ಪ್ರವಾಸಕ್ಕೆ ಈ ಬೆಟ್ಟ ಹೇಳಿ ಮಾಡಿದ ಜಾಗ. ರೇವಣಸಿದ್ದೇಶ್ವರ ಬೆಟ್ಟಕ್ಕೆ ಹೋಗುವ ದಾರಿ ತುಂಬಾ ಸರಳವಾಗಿದೆ ಬೆಟ್ಟದ ಬುಡದಿಂದ ತುದಿಯವರೆಗೂ ಕಲ್ಲಿನ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದೂ ಸುತ್ತಲೂ ಕಬ್ಬಿಣ ಸರಳುಗಳನ್ನು ಹಾಕಿರುವುದರಿಂದ ಬೆಟ್ಟ ಹತ್ತುವಾಗ ಬೀಳುವ ಭಯವಿರುವುದಿಲ್ಲ(ಇಳಿಯುವಾಗ ಕಲ್ಲು ಜಾರುವುದರಿಂದ ಸ್ವಲ್ಪ ಜೋಪಾನ).

 

ಬೆಟ್ಟದ ಮೇಲೆ 3 ದೇವಾಲಯಳು ಇದ್ದು ಮೇಲ್ಭಾಗದಲ್ಲಿ ರೇವಣಸಿದ್ದೇಶ್ವರ ಸ್ವಾಮಿಯ ದೇವಾಲಯವಿದೆ ಮಧ್ಯದಲ್ಲಿ ಭೀಮೇಶ್ವರಿಮತ್ತು ರೇಣುಕಾಂಬ ದೇವಸ್ಥಾನದ ಕೆಳಭಾಗದಲ್ಲಿದೆ. ದೇವಾಲಯಕ್ಕೆ ಪ್ರತಿನಿತ್ಯ ಪೂಜೆ ಪುರಸ್ಕಾರ ಇರುತ್ತೆ , ಸಾಕಷ್ಟು ಜನರು ಹಲವಾರು ಕಡೆಯಿಂದ ಆಗಮಿಸಿ ತಮ್ಮ ಕೋರಿಕೆ ಮತ್ತು ಈಡೇರಿಕೆಗಳನ್ನು ಬೇಡಿಕೊಳ್ಳುತ್ತಾರೆ , ಹಲವಾರು ಮದುವೆಗಳು ಇಲ್ಲಿ ನೆಡೆಯುತ್ತದೆ.

 

 

ಮಾನಸಿಕ ಖಿನ್ನತೆಗೆ ಒಳಗಾದವರು ಈ ಬೆಟ್ಟವನ್ನು ಹತ್ತಿದರೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದ್ದು ಮಕ್ಕಳಾಗದ ದಂಪತಿಗಳು ಬೆಟ್ಟದ ಮೇಲಿರುವ ಬಸವಣ್ಣನ ವಿಗ್ರಹಕ್ಕೆ ಪೂಜೆ ಮಾಡಿ ಕೊಳದ ಒಂದು ಬಿಂದಿಗೆ ನೀರನ್ನು ಮೈಮೇಲೆ ಸುರಿದುಕೊಂಡರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಭಕ್ತ ಸಮೂಹ ಹೊಂದಿದೆ. ಈ ಸ್ಥಳದ ಇನ್ನೊಂದು ವಿಶೇಷ.

 

 

ರೇವಣಸಿದ್ದೇಶ್ವರ ಬೆಟ್ಟಕ್ಕೆ ಬರಲು ದಾರಿ:
ಬೆಂಗಳೂರಿನಿಂದ ರಾಮನಗರಕ್ಕೆ ಬಂದು ರಾಮನಗರ ಕನಕಪುರ ರಸ್ತೆಯಲ್ಲಿ 13 ಕಿ.ಮೀ. ಚಲಿಸಿದರೆ ಅವೇರಳ್ಳಿ ಗೇಟ್ ಸಿಗುತ್ತದೆ. ಅಲ್ಲಿಂದ 2 ಕಿ.ಮೀ. ಮುಂದೆ ಸಾಗಿದರೆ ಸಿಗುವುದೇ ರೇವಣ ಸಿದ್ದೇಶ್ವರ ಬೆಟ್ಟ.ಇಲ್ಲಿಗೆ ಹೋಗಲು ಉತ್ತಮ ರಸ್ತೆ ಇದೆ. ಸಕಾಲಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಿಗುತ್ತವೆ. ಆಟೋಗಳು ಸಿಗುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top