ಸಮಾಚಾರ

ಪದ ಕುಸಿಯೇ…. ಪಾತಾಳವಿಹುದು ಮಂಕುತಿಮ್ಮ! ಇದು ಗುಂಡಿಗೆ ಗಟ್ಟಿ ಇರೋರಿಗೆ ಮಾತ್ರ

ಪದ ಕುಸಿಯೇ…. ಪಾತಾಳವಿಹುದು ಮಂಕುತಿಮ್ಮ! ಇದು ಗುಂಡಿಗೆ ಗಟ್ಟಿ ಇರೋರಿಗೆ ಮಾತ್ರ

ಪದ ಕುಸಿಯೇ…. ಪಾತಾಳವಿಹುದು ಮಂಕುತಿಮ್ಮ!

ರುದ್ರರಮಣೀಯ ದೃಶ್ಯವೆಂದರೆ ಕಾರಿನಲ್ಲಿ ಕೂತು… ಚಿಪ್ಸ್ ತಿನ್ನುತ್ತಾ.. ದೊಡ್ಡ ದೊಡ್ಡ ಪರ್ವತಗಳನ್ನು ಅವುಗಳ ಮೇಲಿನ ಕಾಡುಗಳನ್ನು ನೋಡುವುದಲ್ಲ. ಅಕ್ಷರಶಃ ಅದನ್ನು ಅನುಭವಿಸಬೇಕು. ಹಾಗೆ ‘ರುದ್ರಾನಂದ’ ಪಡೆಯಲು ಇಲ್ಲಿದೆ ಮಾಹಿತಿ…

12 ಇಂಚಿನ ಪುಟ್ಟಪಥವದು. ಸರಿಯುತ್ತಾ ಸಾಗಬೇಕು. ಹಿಡಿತಕ್ಕೆ ಚೈನ್ ಇದೆ. ಮೈಕೊರೆವ ಚಳಿಯಿದೆ. ದೃಷ್ಟಿಸಲು ರುದ್ರರಮಣೀಯ ದೃಶ್ಯಗಳಿದೆ. ಆಯತಪ್ಪಿದರೆ…..ಪಾತಾಳವಿದೆ! ‘ಹರಿ’ ಮಾಡಿದರೆ ‘ಬರಿ’ಯಾಗುವ ಅಪಾಯವಿದೆ.

 

 

ವಿಶ್ವದ ಅತ್ಯಂತ ಭೀಭತ್ಸ ಪ್ರವಾಸದ ಸಣ್ಣ ಝಲಕ್ ಇದು. ವಿವರ ಪೂರ್ಣಕೊಟ್ಟರೆ ಎದೆ ಧಸಕ್ ಎಂದೀತು.

ಕೆಳಗೆ ಅಂದು ಎಂದೋ ಕಟ್ಟಿದ ಹಲಗೆ. ಒಂದೊಂದು ಹೆಜ್ಜೆ ಇಟ್ಟಾಗಲೂ ಅದು ಮುರಿದು ಬೀಳುತ್ತದೆನೋ ಎನ್ನುವಂತೆ ಕಿರುಚುತ್ತದೆ. ಸೊಂಟಕ್ಕೆ ಬಲವಾದ ಹಗ್ಗ ಬಿಗಿದಿರುತ್ತಾರೆ. ಯುವಕರು, ಉತ್ಸಾಹಿಗಗಳಿಗೆ ಮಾತ್ರ ಇಲ್ಲಿ ಪ್ರವೇಶ. ಬಿಪಿ/ಶುಗರ್/ಮಾನಸಿಕ ವ್ಯಾಧಿಗಳಿದ್ದವರಿಗೆ ವೈದ್ಯರ ಪ್ರಮಾಣ ಪತ್ರ ಕಡ್ಡಾಯ. ಅಷ್ಟಾಗಿಯೂ ಆಯ ತಪ್ಪಿ ಪಾತಾಳ ಸೇರಿದವರಿಗೂ ಇಲ್ಲಿ ಲೆಕ್ಕ ಇಟ್ಟಿಲ್ಲ. ಅಪಾಯದಲ್ಲೇ ಆನಂದ-ಆನಂದವೇ ಇಲ್ಲಿ ಅಪಾಯ. ಆದರೂ ಉಪಾಯ ಮಾಡಿಕೊಂಡು ಬರುವ ಜನರಿಗೆ ಕೊರತೆಯಿಲ್ಲ. ಸಾವಿನಂಚಿನ ರೋಮಾಂಚನ ಎಲ್ಲರಿಗೂ ದಕ್ಕದು.

 

 

ಒಂದಪ ನೋಡುವ ಆಸೆ ಇದ್ದು, ಗುಂಡಿಗೆ ಗಟ್ಟಿಯಿದ್ದರೆ ಚೈನಾದೇಶದ ಶಾಂಘ್‍ಝೈ ಪ್ರಾಂತ್ಯದ ಹೌಸಾನ್ ಪರ್ವತ ಶ್ರೇಣಿಗೆ ತೆರಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top