ಕ್ರೀಡೆ

ಎರಡನೇ ಟೆಸ್ಟ್: 2ನೇ ದಿನ: ರನ್ ಗಳಿಸಲು ಭಾರತ ಪರದಾಟ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಎರಡನೇ ಟೆಸ್ಟ್: 2ನೇ ದಿನ: ರನ್ ಗಳಿಸಲು ಭಾರತ ಪರದಾಟ.

 

 

ಸೆಂಚೂರಿಯನ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ಎರಡನೇ ದಿನದ ಆಟದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡು ತಂಡಗಳೂ ಸಮಬಲದ ಹೋರಾಟ ನಡೆಸಿವೆ. ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾದ 5 ವಿಕೆಟ್ ನಷ್ಟಕ್ಕೆ 183 ರನ್ ಪೇರಿಸಿದೆ. ವಿರಾಟ್ ಕೊಹ್ಲಿ (85) ಮತ್ತು ಹಾರ್ದಿಕ್ ಪಾಂಡ್ಯ (11) ಕ್ರೀಸ್ನಲ್ಲಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 335 ರನ್ ಗಳಿಗೆ ಆಲೌಟ್ ಆಗಿದೆ. ಆಫ್ರಿಕಾ ಪರ ಎಲ್ಗರ್ 31, ಮಾರ್ಕ್ ರಾಮ್ 94, ಆಶೀಂ ಹಾಮ್ಲಾ 82, ಡುಪ್ಲೇಸಿಸ್ 63 ರನ್ ಗಳಿಸಿದ್ದಾರೆ. ಭಾರತ ಪರ ಆರ್ ಅಶ್ವಿನ್ 4, ಇಶಾಂತ್ ಶರ್ಮಾ 3 ಮತ್ತು ಮೊಹಮ್ಮದ್ ಶಮಿ 1 ವಿಕೆಟ್ ಪಡೆದಿದ್ದಾರೆ.

 

 

ನಂತರ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಕನ್ನಡಿಗ ಕೆ.ಎಲ್ ರಾಹುಲ್ ಕೇವಲ 10 ರನ್ ಗಳಿಗೆ ನಿರ್ಗಮಿಸಿದರೆ ನಂತರ ಬಂಡ ಚೇತೇಶ್ವರ್ ಪೂಜಾರ ಗೋಲ್ಡನ್ ಡಕ್ ಸುತ್ತಿದರು. ಒಟ್ಟಾರೆ ವಿರಾಟ್ ಕೊಹ್ಲಿ 85 ಮತ್ತು ಮುರುಳಿ ವಿಜಯ್ 46 ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 183 ರನ್ ಪೇರಿಸಿದೆ.

ಸಂಕ್ಷಿಪ್ತ ಸ್ಕೋರ್:

ದ.ಆಫ್ರಿಕಾ ಮೊದಲ ಇನ್ನಿಂಗ್ಸ್ 335
ಮರ್ಕ್ರಾಮ್: 94
ಹಾಶೀಮ್ ಆಮ್ಲಾ 82
ಡಿಯನ್ ಎಲ್ಗರ್: 31

ಅಶ್ವಿನ್:113/4
ಇಶಾಂತ್ ಶರ್ಮ:46/3

ಭಾರತ ಮೊದಲ ಇನ್ನಿಂಗ್ಸ್ (ಎರಡನೇ ದಿನದಾಟದ ಅಂತ್ಯಕ್ಕೆ) :ಐದು ವಿಕೆಟ್ ನಷ್ಟಕ್ಕೆ 185
ವಿರಾಟ್ ಕೊಹ್ಲಿ 85
ಮುರುಳಿ ವಿಜಯ್ 46

 

 

Comments

comments

Click to comment

Leave a Reply

Your email address will not be published. Required fields are marked *

To Top