ಮನೋರಂಜನೆ

ಮಾತು ಬಾರದ ಮೂಕ ಸ್ಥಿತಿಯಲ್ಲಿ ‘ಶ್’ ಚಿತ್ರದ ನಾಯಕ ಕುಮಾರ್ ಗೋವಿಂದ್..

ಮಾತು ಬಾರದ ಮೂಕ ಸ್ಥಿತಿಯಲ್ಲಿ ‘ಶ್’ ಚಿತ್ರದ ನಾಯಕ ಕುಮಾರ್ ಗೋವಿಂದ್..

 

 

ಉಪೇಂದ್ರ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಶ್’ ಚಿತ್ರದ ನಾಯಕ ಕುಮಾರ್ ಗೋವಿಂದು ಈಗ ಮಾತು ಬಾರದ ಮೂಕನ ಸ್ಥಿತಿಯಲ್ಲಿದ್ದಾರೆ ಅಂದರೆ ಮೂಕನಾಗಿದ್ದಾರೆ. ಇದೇನಪ್ಪಾ ಕುಮಾರ್ ಗೋವಿಂದು ಅವರಿಗೆ ಏನಾಯ್ತು ಅಂತ ತಲೆಕೆಡಿಸ್ಕೊಬೇಡಿ ಅವರು ಮೂಕನಾಗಿರೋದು ರಿಯಲ್ ಲೈಫ್ ನಲ್ಲಿ ಅಲ್ಲ ಬದಲಾಗಿ ರೀಲ್ ಲೈಫ್ ನಲ್ಲಿ. ಹೌದು ಬರಗೂರು ರಾಮಚಂದ್ರಪ್ಪನವರ ನಿರ್ದೇಶನದಲ್ಲಿ ಮೂಡಿಬಂದಿರುವ ಮೂಕನಾಯಕ ಚಿತ್ರದಲ್ಲಿ ಕುಮಾರ್ ಗೋವಿಂದು ಮಾತುಬಾರದ ಮೂಕ ಚಿತ್ರ ಕಲಾವಿದನ ಪಾತ್ರವನ್ನು ಮಾಡಿದ್ದಾರೆ.

 

 

ಈ ಚಿತ್ರದಲ್ಲಿ ಕುಮಾರ್ ಗೋವಿಂದು ಅವರೊಂದಿಗೆ ಸ್ಪರ್ಶ ರೇಖ, ಶೀತಲ್ ಶೆಟ್ಟಿ, ಸುಂದರ್ ರಾಜ್, ವೆಂಕಟರಾಜು ಮುಂತಾದವರು ಅಭಿನಯಿಸಿದ್ದಾರೆ. ಸೆನ್ಸಾರ್‌ ಸಹ ಆಗಿದ್ದು, “ಯು’ ಪ್ರಮಾಣ ಪತ್ರ ಸಿಕ್ಕಿದೆ. ದೊಡ್ಡ ಗ್ಯಾಪ್ ನಂತರ ತೆರೆಮೇಲೆ ಬರುತ್ತಿರುವ ಕುಮಾರ್ ಗೋವಿಂದ್ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಕ್ಕನ ಆಶ್ರಯದಲ್ಲಿ ಬದುಕುವ ಸೂರ್ಯ ಎಂಬ ಗ್ರಾಮೀಣ ಮೂಕ ಚಿತ್ರ ಕಲಾವಿದನ ಪಾತ್ರವನ್ನು ಕುಮಾರ್ ಗೋವಿಂದು ಮಾಡಿದ್ದಾರೆ.

“ಮೂಕನಾಯಕ’ ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪನವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ಗೀತೆಗಳನ್ನೂ ರಚಿಸಿದ್ದಾರೆ. ಈ ಚಿತ್ರವನ್ನು ಬಾಲರಾಜ್‌ ಎನ್ನುವವರು ನಿರ್ಮಿಸಿದ್ದು, ಡಾ. ಶಮಿತಾ ಮಲ್ನಾಡ್‌ ಸಂಗೀತ ಸಂಯೋಜನೆ ಮತ್ತು ನಾಗರಾಜ್‌ ಅದವಾನಿ ಛಾಯಾಗ್ರಹಣ ಮಾಡಿದ್ದಾರೆ. ಸುರೇಶ್‌ ಅರಸ್‌ ಅವರ ಸಂಕಲನ ಚಿತ್ರಕ್ಕಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top