ಸಮಾಚಾರ

ಬೆಂಗಳೂರಿನಲ್ಲಿ ನೂತನ ಕ್ಯಾಬ್ ಪ್ರಯಾಣ ದರ ನಿಗದಿ

ಬೆಂಗಳೂರಿನಲ್ಲಿ ನೂತನ ಕ್ಯಾಬ್ ಪ್ರಯಾಣ ದರ ನಿಗದಿ

 

 

ಸಣ್ಣ ಕಾರುಗಳಿಗೆ ಮೊದಲ 4km ಗೆ ಕನಿಷ್ಠ 44 ರೂ ಹಾಗು ಐಷಾರಾಮಿ ಕಾರುಗಳಿಗೆ ಮೊದಲ 4km ಗೆ 80 ರೂ ನಿಗದಿಮಾಡಿದ ರಾಜ್ಯಸರ್ಕಾರ ಆದೇಶ ಹೊರಡಿಸಿದೆ ನೂತನ ದರ ಪಟ್ಟಿಯ ಪ್ರಕಾರ ಸಿಲಿಕಾನ್ ಸಿಟಿಯ ಕ್ಯಾಬ್ ವ್ಯೆವಸ್ಥತೆ ಯ ಮತ್ತಷ್ಟು ಬದಲಾವಣೆ ಕಾಣಲಿದೆ ಎಂದು ಹೇಳಲಾಗಿದೆ.ಕಾರುಗಳ ಮಾರುಕಟ್ಟೆ ಬೆಲೆ ಆದರಿಸಿ ಕ್ಯಾಬ್ ಪ್ರಯಾಣ ದರವನ್ನು A , B , C ,D,ಈ ರೀತಿಯ ೪ ಮಾದರಿಯ ದರಗಳನ್ನು ನಿಗದಿತಪಡಿಸಲಾಗಿದೆ ,
ಸಣ್ಣ ಕಾರುಗಳು D ದರ್ಜೆಯಲ್ಲಿ ಬರುತ್ತಿದ್ದು ಅವುಗಳಿಗೆ ಕನಿಷ್ಠ 44 ರೂಪಾಯಿ ಮತ್ತು 16 ಲಕ್ಷಕ್ಕಿಂತ ಹೆಚ್ಚಿನ ಬೆಲೆಗಳ ಕಾರುಗಳಿಗೆ ಆ ದರ್ಜೆ ನೀಡಲಾಗಿದ್ದು ಅದಕ್ಕೆ ಕನಿಷ್ಠ 80 ರೂಪಾಯಿ ನಿಗದಿಪಡಿಸಲಾಗಿತ್ತು

 

ಟ್ಯಾಕ್ಸಿ ಗಳಿಗೆ ಕನಿಷ್ಠ ದರ ನಿಗದಿಪಡಿಸಿದ್ದರು ಕೂಡ ಟ್ಯಾಕ್ಸಿ ಕಂಪನಿ ಗಳು ಬಯಸಿದಷ್ಟು ಕಡಿಮೆ ದರ ವಿಧಿಸಬಹುದಾಗಿದೆ ಆದರೆ ಕನಿಷ್ಠ ದರಗಿಂತ ಹೆಚ್ಚು ದರ ವಿಧಿಸಬಾರದು ಎಂದು ಸರ್ಕಾರ ಹೇಳಿದೆ.

2013 ರ ಜೂನ್ ನಲ್ಲಿ ಕ್ಯಾಬ್ ದರಗಳ ಬಗ್ಗೆ ಪರಿಷಕರಣೆ ಮಾಡಲಾಗಿದ್ದು ಸಣ್ಣ ಮಾದರಿಗಳ ಕಾರುಗಳ ಗರಿಷ್ಠ ಪ್ರಯಾಣ ದರ 14 ರೂ .50 ಪೈಸೆ ಹಾಗು ಮಾಧ್ಯಮ ಮಾದರಿಗಳ ಕಾರುಗಳಿಗೆ 19ರೂ 50ಪೈಸೆ ದರ ಮಾಡಲಾಗಿತ್ತು ಈಗ ದರ ಪರಿಷ್ಕರಣೆ ಗೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದರ ಪರಿಷ್ಕರಣೆ ಮಾಡಿ ನಿಗದಿಪಡಿಸಿದೆ 4km ಒಳಗಿನ ಪ್ರಯಾಣಕ್ಕೆ ೪೪ ರೂಪಾಯಿ ನಿಗದಿ ಮಾಡಿರೋದ್ರಿಂದ ಕ್ಯಾಬ್ ಮಾಲೀಕರ ವರಮಾನಕ್ಕೆ ಬಾರಿ ಒಡೆತ ಬಿದ್ದಿದೆ.

 


ಈ ಮೊತ್ತದಲ್ಲಿ ಸೇವಾ ತೆರಿಗೆ ಕ್ಯಾಬ್ ಕಂಪನಿಗಳ ಕಮಿಷನ್ ಕಡಿತವಾಗಿ ಉಳಿಯುವುದು ಸಲ್ಪ ಹಣ ಮಾತ್ರ ಹಾಗಾಗಿ ಕನಿಷ್ಠ ದರವನ್ನು ಹೆಚ್ಚಿಸಬೇಕೆಂದು ಡ್ರೈವರ್ ಗಳು ಹೋರಾಟ ಮಾಡುತ್ತಿದ್ದಾರೆ.
ಇಂದಿನ ಪರಿಸ್ಥಿಯಲ್ಲಿ 4km ಪ್ರಯಾಣ ದರಕ್ಕೆ ಕನಿಷ್ಠ 44 ದರ ನಿಗದಿ ಮಾಡಿದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ , ಆದರೆ ನಂತರದ km ಗೆ ಗರಿಷ್ಠ ಹಾಗು ಕನಿಷ್ಠ ದರವನ್ನು ಕಾರುಗಳ ಮೊಲ್ಯಕ್ಕೆ ಏರಿಕೆ ಮಾಡಿರುವುದು ಸರಿಯಿಲ್ಲವೆಂದು ಗ್ರಾಹಕವೂರ್ವರು ಅಭಿಪ್ರಾಯಪಟ್ಟಿದ್ದಾರೆ.

 

 

ಜನವರಿ 9ರಿಂದಲೇ UBER ಹಾಗು OLA ಕಂಪನಿ ಗಳು 4km ವರೆಗಿನ ಪ್ರಯಾಣಕ್ಕೆ ಹಿಂದಿನ ದರಕ್ಕೆ ೮೦ ರೂಪಾಯಿ ದರ ವಸೂಲಿ ಮಾಡುತ್ತಿವೆ ಹೆಚ್ಚಿನ ಚಾಲಕರುಬಿಪ್ರಯಾಣಿಕರಿಂದ ಹಿಂದಿನ ದರದ ಹಾಗೆಯೆ ಹಣವನ್ನು ಪಡೆಯುತ್ತಿದ್ದಾರೆ.
ದರ ಪರಿಷ್ಕರಣೆಯಿಂದ UBER ಹಾಗು OLA ಕಂಪನಿ ಗಳಿಗೆಷ್ಟೇ ಲಾಭವಾಗಲಿದೆ. ಪ್ರತಿ km ಗೆ ಇಂತಿಷ್ಟು ಹಣ ನೀಡುವ ಒಪ್ಪಂದ ಮಾಡಿಕೊಂಡಿರುವ ನಮಗೆ ಈ ದರ ಪರಿಷ್ಕರಣೆಯ ಬಗ್ಗೆ ತೆಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ ಡ್ರೈವರ್ ಗಳು. ಪ್ರಯಾಣಿಕರಿಂದ ಟೂಲ್ ವಸೂಲಿ ಮಾಡಲು ಅನುಮತಿ ನೀಡಲು ಡ್ರೈವರ್ ಗಳಿಗೆ ಸಂತಹ ವಿಷಯವಾಗಿದೆ ಆದರೆ ಪ್ರಯಾಣಿಕರಿಗೆ ಪ್ರಯಾಣದ ದರ ಕಟ್ಟುವುದರ ಜೊತೆಗೆ ಟೂಲ್ ದರವನ್ನು ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದ್ದು ಪರಿಷ್ಕೃತ ದರದ ಪ್ರಕಾರ ಹಣ ಪಡೆಯುವ ಬಗ್ಗೆ ಟ್ಯಾಕ್ಸಿ ಚಾಲಕರು ಮತ್ತು ಪ್ರಯಾಣಿಕರಲ್ಲಿಯೂ ಗೊಂದಲವಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top