ಮನೋರಂಜನೆ

ದಿ ವಿಲನ್ ಚಿತ್ರದ ಬಗ್ಗೆ ನಿರ್ದೇಶಕ ಪ್ರೇಮ್ ಹೇಳಿದ್ದೇನು ಗೋತ್ತಾ ?

ದಿ ವಿಲನ್ ಚಿತ್ರದ ಬಗ್ಗೆ ನಿರ್ದೇಶಕ ಪ್ರೇಮ್ ಹೇಳಿದ್ದೇನು ಗೋತ್ತಾ ?

 

 

 

ಕಳೆದ ವರ್ಷ ದಿ ವಿಲನ್ ಚಿತ್ರವನ್ನು ಬಿಡುಗಡೆ ಮಾಡವುದಾಗಿ ಹೇಳಿದ್ದರು ಆದರೆ ಯಾರು ನಂಬಿರಲಿಲ್ಲ ಯಾಕಂದರೆ ಪ್ರೇಮ್ ಚಿತ್ರ ಯಾವಾಗಲೂ ತಡವಾಗೋದೇ ಈಗಿನ ಪ್ರಕಾರ ದಿ ವಿಲನ್ ಚಿತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತೆ ಅಂತೇ, ಆದರೆ ಇಷ್ಟೊಂದು ತಡವಾಗಬಹುದು ಅಂತ ಊಹಿಸಿರಲಿಲ್ಲ ರಿಲೀಸ್ ಗೆ ಸುಮಾರು ಇನ್ನು 8 ತಿಂಗಳು ಕಾಯಬೇಕಂತೆ.

 

ದಿ ವಿಲನ್ ಚಿತ್ರ ಯಾಕೆ ಇಷ್ಟೊಂದು ತಡವಾಗಿ ಬರುತ್ತೆ ಅಂತ ಎಲ್ಲರಲ್ಲೂ ಈ ಒಂದು ಆತಂಕ ಇದ್ದೆ ಇರುತ್ತೆ. ಆದರೆ ಪ್ರೇಮ್ ಅವರನ್ನ ಕೇಳಿದರೆ ಸಾಕಷ್ಟು ಕಾರಣಗಳಿವೆ ಎನ್ನುತ್ತಾರೆ . ದಿ ವಿಲನ್ ಬಗ್ಗೆ ಹೇಳುವುದಾದರೆ ಇದು ಇಬ್ಬರು ಬಿಗ್ ಸ್ಟಾರ್ ಗಳ ಚಿತ್ರ .ಅಷ್ಟೇ ಅಲ್ಲ ದೊಡ್ಡ ಕಾನ್ಸೆಪ್ಟ್ ಇರುವ ಚಿತ್ರ, ದೊಡ್ಡ ತಾರಾಬಳಗವಿದೆ , ವಿಭಿನ್ನ ಗೆಟಪ್ ಸಾಕಷ್ಟು ಲೊಕೇಶನ್ ಗಳಿವೆ ಇದೆಲ್ಲರದ ಜೊತೆಗೆ ದಿ ವಿಲನ್ ತಡವಾಗಲು ಮತ್ತೊಂದು ಕಾರಣವೆಂದರೆ ನಾಯಕಿ ಅಮಿ ಜಾಕ್ಸನ್ ಅವ್ರ ವೀಸಾ ಸಮಸ್ಯೆ ಸುಮಾರು 3 ತಿಂಗಳು ನಾಯಕಿಯಿಂದ ತಡವಾಯಿತು ವೀಸಾ ಸಮಸ್ಯೆ ಹಾಗೂ ಅವರ ತಮಿಳು ಸಿನೆಮಾಕ್ಕಾಗಿ ನಮ್ಮ ಸಿನೆಮಾವನ್ನು ಮುಂದೆ ಹಾಕಬೇಕಿತ್ತು ಎಂದು ಹೇಳತ್ತಾರೆ ಪ್ರೇಮ್ .

ಹಾಗಾದರೆ ಚಿತ್ರ ಯಾವಾಗ ಮುಗಿಯುತ್ತೆ ಮತ್ತೆ ತೆರೆಗೆ ಬರುತ್ತೆ ಅಂತ ಈಗಲೇ ಹೇಳ್ಹೋದು ತುಂಬಾ ಕಷ್ಟ ಎನ್ನುವ ಉತ್ತರ ಅವರಿಂದ ಬರುತಿದೆ .ನಾವು ಅಂದು ಕೊಂಡಂತೆ ಆಗಿದ್ದರೆ ಇಷ್ಟುವತ್ತಿಗೆ ಸಿನಿಮಾದ ಟೀಸರ್ ಬಿಡುಗಡೆ ಆಗಬೇಕಿತ್ತು ಆದರೆ ಗ್ರಾಫಿಕ್ಸ್ ಕೆಲಸಗಳು ನಿಧಾನವಾದ ಕಾರಣ ಟೀಸರ್ ಇನ್ನು ಬಿಡುಗಡೆ ಆಗಿಲ್ಲ ಎಲ್ಲವೂ ಗ್ರಾಫಿಕ್ಸ್ ಮೇಲೆ ನಿಂತಿವೆ ಅದು ಯಾವಾಗ ನಮ್ಮ ಕೈಯಿಗೆ ಸಿಗುತ್ತೋ ಅದರ ಮೇಲೆ ಚಿತ್ರ ಬಿಡುಗಡೆಯ ದಿನಾಂಕ ನಿರ್ಧಾರವಾಗುತ್ತೆ ಅಂತ್ತಾರೆ ಪ್ರೇಮ್ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top