ಉಪಯುಕ್ತ ಮಾಹಿತಿ

ಪೆಟ್ರೋಲ್’ಗೂ ಡೀಸಲ್’ಗೂ ಇರುವ ವ್ಯತ್ಯಾಸವೇನು ಗೊತ್ತಾ?

ಪೆಟ್ರೋಲ್’ಗೂ ಡೀಸಲ್’ಗೂ ಇರುವ ವ್ಯತ್ಯಾಸವೇನು ಗೊತ್ತಾ?

ಪೆಟ್ರೋಲ್ ಮತ್ತು ಡೀಸೆಲ್ ಗಳಿಗೆ ಇರುವ ವ್ಯತ್ಯಾಸ ಏನು ಅಂತ ನಿಮಗೆ ಗೊತ್ತಾ ?ಗೊತ್ತಿಲ ಅಂದ್ರೆ ಹೇಳ್ತಿವಿ ಕೇಳಿ . ಪೆಟ್ರೋಲ್,ಡೀಸೆಲ್ ಎರಡೂ ಇಂಧನಗಳೇ. ಪೆಟ್ರೋಲ್ ಬಂಕ್ ಗಳಲ್ಲಿ ಇದನ್ನು ಕೊಳ್ಳುತ್ತಾರೆ . ಇವೆರಡರ ಬೆಲೆ ಬೇರೆ ಬೇರೆ ಇರುತ್ತದೆ . ವಾಹನಗಳಲ್ಲಿ ಪೆಟ್ರೋಲ್ ನಿಂದ ಓಡುವ ವಾಹನಗಳು ಮತ್ತು ಡೀಸೆಲ್ ನಿಂದ ಓಡುವ ವಾಹನಗಳು ಎಂದು ಎರಡು ಬಗೆಯ ವಾಹನಗಳಿರುತ್ತವೆ .

 

 

ಪೆಟ್ರೋಲ್ ಮತ್ತು ಡೀಸೆಲ್ ಗಳೆಂದರೆ ಕಾರ್ಬನ್ ಸಂಯೋಜನಗಳು ,ಕೆಮಿಕಲ್ಸ್ ಅಂತಾನೂ ಹೇಳಬಹುದು . ಇವುಗಳಿಗೆ ಬೇರೆ ಬೇರೆ ರಾಸಾಯನಿಕ ಫಾರ್ಮುಲಾಗಳಿರುತ್ತವೆ . ಎರಡೂ ಇಂಧನಗಳನ್ನು ಒಂದೇ ವಾಹನದಲ್ಲಿ ಬಳಸಲು ಸಾಧ್ಯವಿಲ್ಲ . ಅವುಗಳಿಗಾಗಿ ತಯಾರಿಸಿದ ಇಂಜಿನ್ ಗಳಲ್ಲೇ ಇವುಗಳನ್ನು ಬಳಸಬೇಕು . ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳು ಬೇರೆ ಬೇರೆ ರೀತಿಯಾಗಿರುತ್ತವೆ . ಒಂದರ ಇಂಜಿನ್ ನಲ್ಲಿ ಮತ್ತೊಂದರ ಇಂಧನವನ್ನು ಬಳಸಲು ಸಾಧ್ಯವಿಲ್ಲ .

 

 

ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ಎರಡು ಪೆಟ್ರೋಲಿಯಂ ಕಚ್ಚಾತೈಲದಿಂದ ತಯಾರಿಸುಲಾಗುತ್ತದೆ . ಇವುಗಳನ್ನು ಬೇರೆ ಬೇರೆ ಉಷ್ಣತೆಯಲ್ಲಿ ಬಿಸಿ ಮಾಡುತ್ತಾರೆ . ಇದನ್ನು ಡಸ್ಟ್ರಿನಶನ್ ಎಂದು ಕರೆಯುತ್ತಾರೆ . ಬೇರೆ ಬೇರೆ ಉಷ್ಣತೆಯಲ್ಲಿ ಪೆಟ್ರೋಲಿಯಂ ಅನ್ನು ಬಿಸಿ ಮಾಡಿದರೆ ಪೆಟ್ರೋಲ್ ಮತ್ತು ಡೀಸೆಲ್ ಎಂಬ ಉಪ ಉತ್ಪನ್ನಗಳಾಗಿ ಬರುತ್ತವೆ . ಪೆಟ್ರೋಲಿಯಂ ಕಚ್ಚಾತೈಲವನ್ನು 35 ರಿಂದ 200 ಡಿಗ್ರಿಸೆಂಟಿಗ್ರೇಡ್ ತನಕ ಬಿಸಿ ಮಾಡಿದರೆ ಪೆಟ್ರೋಲ್ ತಯಾರಾಗುತ್ತದೆ . 250 ರಿಂದ 350 ಸೆಂಟಿಗ್ರೇಡ್ ಉಷ್ಣತೆಯಲ್ಲಿ ಪೆಟ್ರೋಲಿಯಂ ಅನ್ನು ಬಿಸಿ ಮಾಡುವುದರಿಂದ ಡೀಸೆಲ್ ಬರುತ್ತದೆ . ಡೀಸೆಲ್ ಗಳಿಗಿಂತಲೂ ಪೆಟ್ರೋಲ್ ಬೇಗನೆ ಆವಿಯಾಗುವ ಗುಣವನ್ನು ಹೊಂದಿದೆ . ಆದರೆ ಡೀಸೆಲ್ ಅಷ್ಟು ಸುಲಭವಾಗಿ ಅವಿ ಆಗುವುದಿಲ್ಲ . ಡೀಸೆಲ್ ನಿಂದ ಹೆಚ್ಚು ಶಕ್ತಿ ಉತ್ಪತ್ತಿ ಆಗುತ್ತದೆ . ಅದಕ್ಕಾಗಿ ಇದನ್ನು ಭಾರಿ ವಾಹನಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ . ಪೆಟ್ರೋಲ್ ಕಡಿಮೆ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ . ಆ ಶಕ್ತಿ ದ್ವಿಚಕ್ರ ವಾಹನಗಳಿಗೆ ಸಾಕಾಗುತ್ತದೆ . ಡೀಸೆಲ್ ವಾಹನಗಳು ಹೆಚ್ಚು ಮೈಲೇಜ್ ಕೊಡುತ್ತವೆ . ಇಂಜಿನ್ ವೇಗವಾಗಿ ಕೆಲಸ ಮಾಡುತ್ತದೆ . ಪೆಟ್ರೋಲ್ ವಾಹನಗಳು ಅಷ್ಟಾಗಿ ಮೈಲೇಜ್ ಕೊಡುವುದಿಲ್ಲ .

 

 

ಕಚ್ಚಾತೈಲ ವನ್ನು 190 ರಿಂದ 250 ಡಿಗ್ರಿಗಳ ನಡುವೆ ಕಾಯಿಸುವುದರಿಂದ ಪ್ಯಾರಾಫಿಮ್ ಎಂಬ ಇನ್ನೊಂದು ಉತ್ಪನ್ನ ಬರುತ್ತದೆ . ಇದನ್ನು ವಿಮಾನ,ಹೆಲಿಕ್ಯಾಪ್ಟರ್, ರಾಕೆಟ್ ಗಳಲ್ಲಿ ಬಳಸುತ್ತಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top