ದೇವರು

ಗತ ವೈಭವ ಸಾರುವ ಗಳಗನಾಥ ದೇವಾಲಯದ ಮಹಿಮೆಯ ಬಗ್ಗೆ ಒಮ್ಮೆ ಓದಿ..

ಗತ ವೈಭವ ಸಾರುವ ಗಳಗನಾಥ ದೇವಾಲಯದ ಮಹಿಮೆಯ ಬಗ್ಗೆ ಒಮ್ಮೆ ಓದಿ..

 

 

 

ಗಳಗನಾಥ (ಹಾವೇರಿ ಜಿಲ್ಲೆ): ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗುತ್ತಲ ಸಮೀಪದ ಗಳಗನಾಥ ಗ್ರಾಮದ ಗಳಗೇಶ್ವರ ದೇವಸ್ಥಾನ. ವರದಾ ಮತ್ತು ತುಂಗಭದ್ರಾ ನದಿಗಳ ಸಂಗಮಸ್ಥಳದಲ್ಲಿರುವ ಸುಂದರ ತಾಣ.. ಧಾರ್ಮಿಕ ಹಾಗೂ ಐತಿಹಾಸಿಕ ಎರಡೂ ಹಿನ್ನೆಲೆ ಹೊಂದಿರುವ ಕ್ಷೇತ್ರ ಗಳಗನಾಥ.

 

 

ಗಳಗೇಶ್ವರ ದೇವಾಲಯ:

ಈ ದೇವಾಲಯ ಹಾವೇರಿಯಿಂದ 40 ಕಿ.ಮೀ ದೂರದಲ್ಲಿದ್ದು ಗಳಗೇಶ್ವರ ದೇವಸ್ಥಾನದಿಂದ ಈ ಸ್ಥಳಕ್ಕೆ ಗಳಗನಾಥ ಎಂಬ ಹೆಸರು ಬಂದಿದೆ. ಈ ದೇವಾಲಯವನ್ನು ಗಳಗೇಶ್ವರ ಮುನಿ ಸ್ಥಾಪಿಸಿದರೆಂದು ಹೇಳಲಾಗಿದೆ. ಈ ದೇವಾಲಯ 28ಮೀ. ಉದ್ದ 14ಮೀ ಅಗಲವಿದೆ. ಇದರ ಮೇಲ್ಚಾವಣಿಯನ್ನು ನಾಲ್ಕು ಸುಂದರವಾದ ಸ್ತಂಭಗಳು ಅಂದವಾಗಿ ಎತ್ತಿ ಹಿಡಿದಿವೆ. ದೇವಾಲಯದ ಸುತ್ತಲೂ ಗೋಡೆಯ ಮೇಲೆ ಪೌರಾಣಿಕ ಕಥೆಗಳನ್ನು ಕೆತ್ತಲಾಗಿದೆ. ಗರ್ಭಗೃಹದ ಬಾಗಿಲು 12 ಅಡಿ ಎತ್ತರವು ಹಾಗೂ ಆಕರ್ಷಕವೂ ಆಗಿದೆ. ಇದರಲ್ಲಿ ತ್ರಿಶಾಖ ಪಟ್ಟಗಳನ್ನು ಕಂಡರಿಸಿದ್ದಾರೆ. ಬಾಗಿಲದ ಲಲಾಟಬಿಂಬದಲ್ಲಿ ಹಲವಾರು ಬಿಡಿಶಿಲ್ಪ ಗಳನ್ನು ಕೆತ್ತಿದ್ದಾರೆ. ಬಿಡಿ ಶಿಲ್ಪಗಳಾದ ಆದಿಶಕ್ತಿ ಪಾರ್ವತಿಯ ವಿವಿಧ ಭಂಗಿಯ ಶಿಲ್ಪಗಳು, ಜಟಧಾರಿ ಶಿವನಶಿಲ್ಪ, ವಿಷ್ಣು ಮತ್ತು ವರಾಹಮೂರ್ತಿ ಶಿಲ್ಪಗಳಿವೆ.

 

 

ಈ ದೇವಾಲಯದ ಕಟ್ಟಡದ ವೈಶಿಷ್ಟ್ಯವೆಂದರೆ ಇದರ ಅಡಿಪಾಯ. ಇದರ ಆಕಾರ ಪಿರಿಮಿಡ್ನಂತಿದೆ. ನದಿಯ ನೆರೆಹಾವಳಿಯಿಂದ ಈ ದೇವಾಲಯವನ್ನು ರಕ್ಷಿಸಲು ಗೋಡೆಗಳನ್ನು ಕಟ್ಟಲಾಗಿದೆ. ಇಲ್ಲಿ ಒಂದು ಹನುಮಂತದೇವರ ಗುಡಿಯೂ ಇದೆ. ಈ ಊರಲ್ಲಿ ಕಲ್ಯಾಣ ಚಾಳುಕ್ಯರ ಆರು ಶಾಸನಗಳು ದೊರೆತಿವೆ. ಹೊಯ್ಸಳ ವಿಷ್ಣುವರ್ಧನ ಇಲ್ಲಿಂದ ದಾನಮಾಡಿದ ಸಂಗತಿ ತಿಳಿದುಬರುತ್ತದೆ. ಈ ಗ್ರಾಮದ ಸಮೀಪದಲ್ಲಿ ಅನೇಕ ಬೃಹತ್ ಶಿಲಾ ಸಮಾದಿsಗಳು ಬೆಳಕಿಗೆ ಬಂದಿವೆ. ಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ಗಳಗನಾಥರು ಈ ಸ್ಥಳದವರು.

ಹೋಗುವ ಮಾರ್ಗ:
ಹಾವೇರಿಯಿಂದ 43 ಕಿ.ಮೀ ಅಂತರದಲ್ಲಿ ಗಳಗನಾಥ ಇದ್ದು ರಾಣೆಬೆನ್ನೂರಿನಿಂದ ಗುತ್ತಲಕ್ಕೆ ಬಂದು ಅಲ್ಲಿಂದ 13 ಕಿ.ಮೀ ದೂರ ಕ್ರಮಿಸಿದರೆ ಗಳಗನಾಥ ಸಿಗುತ್ತದೆ. ಇಲ್ಲದಿದ್ದರೆ ಹಾವೇರಿಗೆ ಬಂದು ಅಲ್ಲಿಂದ ಗುತ್ತಲ ಮಾರ್ಗವಾಗಿ ಬರಬಹುದು. ಬೆಂಗಳೂರಿನಿಂದ ಬರುವವರು ಹಾವೇರಿಗೆ ಬಂದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top