ಕರ್ನಾಟಕ

“ಕನ್ನಡಿಗರನ್ನು ಹರಾಮಿಗಳು” ಎಂದು ನಿಂದಿಸಿದ ಗೋವಾ ಸಚಿವ. 

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕನ್ನಡಿಗರನ್ನು”ಹರಾಮಿಗಳು” ಎಂದು ನಿಂದಿಸಿದ ಗೋವಾ ಸಚಿವ. 

 

ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದೊಂದಿಗೆ ಊಸರವಳ್ಳಿ ಆಟವಾಡುತ್ತಿರುವ ಗೋವಾ ಬಿಜೆಪಿ ಸರ್ಕಾರ ಡಬಲ್ ಗೇಂ ಆಡುತ್ತಿದೆ. ಒಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರೊಂದಿಗೆ ಗೋವಾ ಸಿಎಂ ಮಹದಾಯಿ ಮಾತನಾಡಿದ್ದೇನೆ ಎಂದು ಹೇಳಿದರೆ ಮತ್ತೊಂದೆಡೆ ಗೋವಾ ಜಲ ಸಂಪನ್ಮೂಲ ಸಚಿವರು ನೀರು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಈಗ ಗೋವಾದ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲ್ಯೇಕರ್‌ ವರ್ತನೆ ಹದ್ದುಮೀರಿದ್ದು ಅವಾಚ್ಯ ಪದ ಬಳಸಿ ಕನ್ನಡಿಗರನ್ನು ನಿಂದಿಸಿದ್ದಾನೆ.

ನೆನ್ನೆ ಪೊಲೀಸ್ ಭದ್ರತೆಯಲ್ಲಿ ಕಳಸಾ-ಬಂಡೂರಿ ನಾಲೆ ನಿರ್ಮಾಣದ ಕಣಕುಂಬಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಪಾಲ್ಯೇಕರ್‌ ಅವರು “ಕರ್ನಾಟಕದ ಹರಾಮಿಗಳು ಏನು ಬೇಕಾದ್ರೂ ಮಾಡ್ತಾರೆ, ಅವರು ನಮ್ಮನ್ನು ಏನ್ ಬೇಕಾದ್ರೂ ಮಾಡ್ತಾರೆ ಹೀಗಾಗಿ ನಾನು ನಮ್ಮ ರಾಜ್ಯದ ಪೋಲೀಸರ ಭದ್ರತೆಯೊಂದಿಗೆ ಕರ್ನಾಟಕಕ್ಕೆ ಬಂದಿದ್ದೆ. ಕನ್ನಡಿಗರು ಹರಾಮಿಗಳು”’ ಎಂದು ಕನ್ನಡಿಗರನ್ನು ಜರಿದಿದ್ದಾರೆ.

 

 alt=

 

 

ಗೋವಾ ಸಚಿಯ ಕನ್ನಡಿಗರನ್ನು ಕೀಳು ಮಟ್ಟದ ಪದದಿಂದ ಜರಿದಿರುವುದಕ್ಕೆ ಕನ್ನಡಿಗರು ಕೋಪಗೊಂಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಆತನ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು ಕರ್ನಾಟಕದಲ್ಲಿರುವ ಬಿಜೆಪಿ ನಾಯಕರು ತಮಗೆ ಸ್ವಾಭಿಮಾನವಿದ್ದರೆ ರಾಜ್ಯದ ಜನರ ಪರವಾಗಿ ಧ್ವನಿ ಎತ್ತಲಿ ಎಂಬ ಮಾತುಗಳು ಕೇಳಿಬರುತ್ತಿದೆ. ಕರ್ನಾಟಕದ ಗಡಿಭಾಗದೊಳಗೆ ಕಳ್ಳನಂತೆ ಕದ್ದುಮುಚ್ಚಿ ಬಂದಿರುವ ಗೋವಾ ಮಂತ್ರಿಯೇ ದೊಡ್ಡ ಕಳ್ಳ ಅವನೇ ದೊಡ್ಡ ಹರಾಮಿ ಇವನ ವಿರುದ್ಧವೇ ಕೇಸ್ ಹಾಕಿ ಬಂಧಿಸಬೇಕು ಎಂದು ಹಲವು ಸಂಘಟನೆಗಳು ಆಗ್ರಹಿಸಿದ್ದಾರೆ.

 

 

Comments

comments

Click to comment

Leave a Reply

Your email address will not be published. Required fields are marked *

To Top