News

ಸಾಮೂಹಿಕವಾಗಿ ತಮ್ಮ ತಲೆ ಬೋಳಿಸಿ ಕೂದಲನ್ನು ಮುಖ್ಯಮಂತ್ರಿ ಹಾಗು ಪ್ರಧಾನಿಗೆ ಕಳುಹಿಸಿದ ಶಿಕ್ಷಕಿಯರು: ಕಾರಣವೇನು ಗೊತ್ತಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಾಮೂಹಿಕವಾಗಿ ತಮ್ಮ ತಲೆ ಬೋಳಿಸಿ ಕೂದಲನ್ನು ಮುಖ್ಯಮಂತ್ರಿ ಹಾಗು ಪ್ರಧಾನಿಗೆ ಕಳುಹಿಸಿದ ಶಿಕ್ಷಕಿಯರು: ಕಾರಣವೇನು ಗೊತ್ತಾ?

 

ಮಧ್ಯಪ್ರದೇಶದ ಅರೆಕಾಲಿಕ ಶಿಕ್ಷಕಿಯರು ತಮ್ಮ ತಲೆಯನ್ನು ಬೋಳಿಸಿಕೊಳ್ಳುವುದರ ಮೂಲಕ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಸಮಾನ ವೇತನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಮಾಡಿರುವ ಶಿಕ್ಷಕಿಯರು ಬೋಳಿಸಿಕೊಂಡ ತಮ್ಮ ತಲೆಯ ಕೂದಲನ್ನು ಮಧ್ಯ ಪ್ರದೇಶದ ಮುಖ್ಯಮಂತ್ರಿ ಚೌಹಾಣ್ ಸಿಂಗ್ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿಸಲು ನಿರ್ಧರಿಸಿದ್ದಾರೆ.

 

 

ಮಧ್ಯಪ್ರದೇಶ್‌ ಆಜಾದ್‌ ಅಧ್ಯಾಪಕ್‌ ಸಂಘ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಅರೆಕಾಲಿಕ ಶಿಕ್ಷಕ-ಶಿಕ್ಷಕಿಯರು ಪಾಲ್ಗೊಂಡಿದ್ದು, ಅವರ ಕೆಲಸವನ್ನು ಖಾಯಂಗೊಳಿಸುವಂತೆ’ ಅಲ್ಲದೆ ವೇತನದಲ್ಲಿ ತಾರತಮ್ಯ ಹೋಗಲಾಡಿಸಿ ಸಮಾನ ವೇತನ ಜಾರಿಗೆ ತರುವಂತೆ ಮತ್ತು ವಿವಿಧ ರೀತಿಯ ಸವಲತ್ತುಗಳನ್ನು ತಮಗೂ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಕ ವರ್ಗ ಪ್ರತಿಭಟನೆ ನಡೆಸಿದೆ.

 

 

“ನಾವು ಯಾವ ಇಲಾಖೆಗೆ ಸೇರಿರುತ್ತೇವೆ ಎಂಬುದು ನಮಗೆ ಗೊತ್ತಿಲ್ಲ. ನಾವು ಸ್ಥಳೀಯ ಸಂಸ್ಥೆಗಳ ಉದ್ಯೋಗಿಗಳೆಂದು ಶಿಕ್ಷಣ ಇಲಾಖೆ ಹೇಳಿದೆ. ಸ್ಥಳೀಯ ಸಂಸ್ಥೆಗಳು ನಾವು ಶಿಕ್ಷಣ ಇಲಾಖೆಯ ನೌಕರರು ಎಂದು ಹೇಳುತ್ತಾರೆ. ಕಳೆದ ಕೆಲವು ವರ್ಷಗಳಿಂದ 2.88 ಲಕ್ಷ ತಾತ್ಕಾಲಿಕ ಶಿಕ್ಷಕರು ಈ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ ಹಾಗಾಗಿ ಪ್ರತಿಭಟನೆ ನಡೆಸುತ್ತಿದ್ದು ನಮ್ಮ ಬೇಡಿಕೆಗಳು ಈಡೇರದಿದ್ದರೆ ಇನ್ನಷ್ಟು ಉಗ್ರವಾಗಿ ರಾಜ್ಯಾದ್ಯಂತೆ ಪ್ರತಿಭಟನೆ ನಡೆಸುವುದಾಗಿ” ಪ್ರತಿಭಟನಾಕಾರರು ಹೇಳುತ್ತಾರೆ.

 

Comments

comments

Click to comment

Leave a Reply

Your email address will not be published. Required fields are marked *

To Top