ಮನೋರಂಜನೆ

ತಮಿಳುನಾಡಿನಲ್ಲೂ ಮ್ಯಾಜಿಕ್ ಮಾಡಿತು ಕೆಜಿಎಫ್ ಟೀಸರ್!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತಮಿಳುನಾಡಿನಲ್ಲೂ ಮ್ಯಾಜಿಕ್ ಮಾಡಿತು ಕೆಜಿಎಫ್ ಟೀಸರ್!

 

 

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ನಿರೀಕ್ಷಿತ ಕೆಜಿಎಫ್ ಚಿತ್ರದ ಟೀಸರ್ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲೂ ಮೋಡಿ ಮಾಡಿದೆ. ಹೌದು ಇತೀಚಿಕೆ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದ ಯಶ್ ತಮ್ಮ ಅಭಿಮಾನಿಗಳಿಗೆ ಬರ್ತಡೇ ಗಿಫ್ಟ್ ಆಗಿ ಕೆಜಿಎಫ್ ಚಿತ್ರದ ಚಿಕ್ಕ ಟೀಸರ್’ವೊಂದನ್ನು ರಿಲೀಸ್ ಮಾಡಲಾಗಿತ್ತು. ಈ ಟೀಸರ್ ಯೂಟ್ಯೂಬ್ ನಲ್ಲಿ ದಾಖಲೆಯ ಸಂಖ್ಯೆಯಲ್ಲಿ ವೀಕ್ಷಣೆಗಳನ್ನು ಗಳಿಸಿತ್ತು ಈಗ ಹೊರ ರಾಜ್ಯಗಳಲ್ಲೂ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

 

 alt=

 

ಕೆಜಿಎಫ್ ಚಿತ್ರ ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿದ್ದು ಕೆಜಿಎಫ್ ಚಿತ್ರದ ಟೀಸರ್ ನೋಡಿ ಖುಷಿಪಟ್ಟ ತಮಿಳುನಾಡಿನ ಯಶ್ ಅಭಿಮಾನಿಗಳು ಕೇಕ್ ಕತ್ತರಿಸಿ ಯಶ್ ಹುಟ್ಟುಹಬ್ಬದಂದು ಸಂಭ್ರಮ ಪಟ್ಟಿದ್ದಾರೆ. ತಮಿಳು ನಾಡಿನಲ್ಲಿ ಕೆಜಿಎಫ್ ಚಿತ್ರದ ಟೀಸರ್ ಸಂಭ್ರಮಾಚರಣೆಯ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿವೆ. ದಿನೇ ದಿನೇ ಕೆಜಿಎಫ್ ಚಿತ್ರಕ್ಕೆ ಕ್ರೇಜ್ ಹೆಚ್ಚುತ್ತಿದ್ದು ಯಾವಾಗ ಚಿತ್ರವನ್ನು ಕಣ್ತುಂಬಿಕೊಳ್ಳುತ್ತೇವೋ ಎಂದು ಚಿತ್ರ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

 

 

 alt=

ಬಾರಿ ನಿರೀಕ್ಷೆ ಹುಟ್ಟಿಹಾಕಿರುವ ಕೆಜಿಎಫ್ ಚಿತ್ರವನ್ನ ಉಗ್ರಂ ಚಿತ್ರದ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ಶ್ರೀನಿಧಿ ಶೆಟ್ಟಿ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ವಿಜಯ್ ಕಿರಂಗದೂರ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತ ಮತ್ತು ಭುವನ್ ಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ 1970ರ ದಶಕದ ಕಥೆಯಿದ್ದು ಚಿತ್ರ ಎರಡು ಪಾರ್ಟ್ ಗಳಲ್ಲಿ ಬರಲಿದೆ.

 

 alt=

Comments

comments

Click to comment

Leave a Reply

Your email address will not be published. Required fields are marked *

To Top