ಕಿರುತೆರೆ

ಈ ವಿಷಯಕ್ಕೆ ನಿವೇದಿತಾಳನ್ನು ಹೊಗಳಿದ ಕಿಚ್ಚ ಸುದೀಪ್!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ ವಿಷಯಕ್ಕೆ ನಿವೇದಿತಾಳನ್ನು ಹೊಗಳಿದ ಕಿಚ್ಚ ಸುದೀಪ್!

 

 

ಬಿಗ್ ಬಾಸ್ ಕನ್ನಡ ಸೀಸನ್ 5 ಇನ್ನೇನು ಮುಗಿಯುವ ಹಂತ ತಲುಪಿದ್ದು ಇನ್ನು ಮೂರು ವಾರಗಳು ಮಾತ್ರ ಬಾಕಿ ಇದೆ. ಎಂದಿನಂತೆ ವರದ ಕಥೆ ಕಿಚ್ಚನ ಜೊತೆ ಎಪಿಸೋಡ್ ಆರಂಭಿಸಿದ ಕಿಚ್ಚ ಸುದೀಪ್ ಸ್ಪರ್ಧಿಗಳ ಕಾಲೇಜು ಮಾತುಕತೆ ನಡೆಸಿದರು. ಕೆಲವರ ತಪ್ಪುಗಳನ್ನು ತಿದ್ದಿ ಬುದ್ದಿ ಹೇಳಿದರು, ಕೆಲವರ ಕೆಲಸಗಳನ್ನು ಮೆಚ್ಚಿಕೊಂಡು ಅಂಥವರನ್ನು ಹೊಗಳಿದರು. ಅದೇರೀತಿ ನಿವೇದಿತಾ ಗೌಡ ಅವರನ್ನು ಕೂಡ ಸುದೀಪ್ ಹೊಗಳಿದರು.

 

 

ಕಳೆದ ವಾರ ದಿವಾಕರ್ ಮನೆಯಿಂದ ಅವರ ಪತ್ನಿ ಮಮತಾ ಬಿಗ್ ಬಾಸ್ ಮನೆಯೊಳಕ್ಕೆ ಬಂದಿದ್ದರು, ದಿವಾಕರ್ ಪತ್ನಿ ಮನೆ ಒಳಗೆ ಇರುವ ಕಾಲವನ್ನು ನಿವೇದಿತಾಳಿಗೆ ನೀಡಲಾಗಿದ್ದ ಟಾಸ್ಕ್ ನಿರ್ಧಾರ ಮಾಡಿತ್ತು , ಅದರಂತಯೇ ನಿವೇದಿತಾ ಏತದ ಮೇಲೆ ಇರಿಸಲಾದ ಮಡಕೆಯನ್ನು ತನ್ನ ಕಾಲಿನ ಸಹಾಯದಿಂದ ಬ್ಯಾಲೆನ್ಸ್ ಮಾಡಬೇಕಿತ್ತು , ಒಂದು ವೇಳೆ ಮಡಕೆ ಕೆಳಗೆ ಬಿದ್ದರೆ ದಿವಾಕರ್ ಪತ್ನಿ ಮನೆಯೊಳಗೇ ಇರುವ ಸಮಯ ಮುಕ್ತಾಯವಾಗುತ್ತಿತ್ತು .

 

 

 

ಈ ಟಾಸ್ಕ್ ಅನ್ನು ಅದ್ಭುತವಾಗಿ ಮಾಡಿದ ನಿವೇದಿತಾ ಸುದೀಪ್ ಕಡೆಯಿಂದ ಮೆಚ್ಚುಗೆ ಪಡೆದುಕೊಂಡರು. “ನೀವು ಈ ಟಾಸ್ಕ್ ನಲ್ಲಿ ಬೇರೆ ಯಾವ ಸ್ಪರ್ಧಿಯು ಮಾಡದ ಕೆಲಸವನ್ನು ಮಾಡಿದ್ದೀರಿ, ನೀವು ಏತದ ಮೇಲಿಂದ ಮಡಿಕೆಯನ್ನು ಬೀಳಿಸಲೇ ಇಲ್ಲ ಬದಲಾಗಿ ಸಮಯ ಮುಗಿದುಹೋಯಿತು ತುಂಬಾ ಚನ್ನಾಗಿ ಟಾಸ್ಕ್ ಮಾಡುದ್ರಿ. ಇಷ್ಟು ಚನ್ನಾಗಿ ಮಾಡ್ತೀರಾ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಆದರೆ, ಎಲ್ಲರೂ ಆಶ್ಚರ್ಯ ಪಡುವಂತೆ ನೀವು 30 ನಿಮಿಷಗಳವರೆಗೆ ಮಡಿಕೆ ಒಡೆಯದಂತೆ ನೋಡಿಕೊಂಡ್ರಿ.” ಎಂದು ಸುದೀಪ್ ನಿವೇದಿತಾಳನ್ನು ಹೊಗಳಿದರು.

 

 

 

 

Comments

comments

Click to comment

Leave a Reply

Your email address will not be published. Required fields are marked *

To Top