ಕಿರುತೆರೆ

ಬಿಗ್ ಬಾಸ್ ಮನೆಯೊಳಕ್ಕೆ ಸರ್ಪ್ರೈಸ್ ಎಂಟ್ರಿಕೊಟ್ರು ಕಿಚ್ಚ ಸುದೀಪ್!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಿಗ್ ಬಾಸ್ ಮನೆಯೊಳಕ್ಕೆ ಸರ್ಪ್ರೈಸ್ ಎಂಟ್ರಿಕೊಟ್ರು ಕಿಚ್ಚ ಸುದೀಪ್!

 

 

ಬಿಗ್ ಬಾಸ್ ಕನ್ನಡ ಸೀಸನ್ 5 ಇನ್ನೇನು ಮುಗಿಯುವ ಹಂತ ತಲುಪಿದ್ದು ಕೊನೆ ವಾರಗಳಲ್ಲಿ ವೀಕ್ಷಕರಿಗೆ ಮತ್ತು ಸ್ಪರ್ಧಿಗಳಿಗೆ ಸಕತ್ ಸರ್ಪ್ರೈಸ್ ನೀಡಲಾಗುತ್ತಿದೆ. ಕಳೆದ ವಾರ ಸ್ವತಃ ಕಿಚ್ಚ ಸುದೀಪ್ ಅವರೇ ಅಡುಗೆ ಭಟ್ಟನ ವೇಷದಲ್ಲಿ ಮುಖಕ್ಕೆ ಮಾಸ್ಕ್ ಹಾಕೊಂಡು ಬಿಗ್’ಬಾಸ್ ಮನೆಗೆ ಹೋಗಿ ಸ್ಪರ್ಧಿಗಳನ್ನು ಯಾಮಾರಿಸಿ ಬಂದಿದ್ದರು. ಈಗ ಮತ್ತೊಮ್ಮೆ ಬಿಗ್ ಬಾಸ್ ಮನೆಯೊಳಕ್ಕೆ ಕಾಲಿಟ್ಟಿದ್ದಾರೆ.

 

 

ಬಿಗ್ ಬಾಸ್ ಸೀಸನ್ 5 ಕೇವಲ ಇನ್ನು ಮೂರು ವಾರಗಳು ಮಾತ್ರ ಬಾಕಿ ಇದೆ. ಈ ಹಂತದಲ್ಲಿ ಇಷ್ಟು ದಿನ ತಮ್ಮ ಫ್ಯಾಮಿಲಿಯವರನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಸ್ವಲ್ಪ ಮಟ್ಟಿಗೆ ಚೈತನ್ಯ ನೀಡುವ ಸಲುವಾಗಿ ಕಳೆದ ವಾರ ಒಬ್ಬೊಬ್ಬ ಸ್ಪರ್ಧಿಯ ಕುಟುಂಬದಿಂದ ಬಿಗ್ ಬಾಸ್ ಮನೆಗೆ ಕರೆಸಲಾಗಿತ್ತು. ಹಾಗೆಯೇ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳನ್ನು ನೇರವಾಗಿ ಭೇಟಿ ಮಾಡಿದ್ದಾರೆ.

 

 

ಮನೆಯ ಸದಸ್ಯರನ್ನೆಲ್ಲಾ ಮೆನ್ ಡೋರ್’ನ ಬಳಿ ಕೆರೆದು ಬಿಗ್ ಬಾಸ್ ಸೂಚನೆಯನ್ನು ನೀಡುವಾಗ ಸುದೀಪ್ ಸ್ಟೋರೂಮ್ ನಿಂದ ಬಿಗ್ ಬಾಸ್ ಮನೆಯೊಳಕ್ಕೆ ಪ್ರವೇಶ ಮಾಡುತ್ತಾರೆ. ಸುದೀಪ್ ರನ್ನು ನೋಡಿದ ಸ್ಪರ್ಧಿಗಳು ಎದ್ನೋ ಬಿದ್ನೋ ಅಂತ ಸುದೀಪ್ ಕಡೆಗೆ ಓಡಿಬರುತ್ತಾರೆ ಆದರೆ ಬಾಗಿಲುಗಳೆಲ್ಲಾ ಬಂಧ್ ಆಗಿರುತ್ತವೆ. ಇವಿಷ್ಟು ಚಾನೆಲ್ ನವರು ಬಿಟ್ಟಿರುವ ಪ್ರೋಮೋದ ಅಂಶಗಳು ಕಿಚ್ಚನ ಬಿಗ್ ಬಾಸ್ ಮನೆಯ ಪ್ರವೇಶದ ಗಳಿಗೆಯನ್ನು ಇಂದಿನ ಸೂಪರ್ ಸಂಡೆ ವಿಥ್ ಸುದೀಪ್ ಸಂಚಿಕೆಯಲ್ಲಿ ನೋಡಿ.

 

 

 

Comments

comments

Click to comment

Leave a Reply

Your email address will not be published. Required fields are marked *

To Top