ವಿಶೇಷ

ದುಬಾರಿ ವಾಟರ್ ಫಿಲ್ಟರ್’ಗಳ ಈ ಕಾಲದಲ್ಲಿ ಕೇವಲ ಇಪ್ಪತ್ತು ರುಪಾಯಿಗೆ ನೂತನ ಫಿಲ್ಟರ್ ಕಂಡುಹಿಡಿದ ಕನ್ನಡಿಗ.

ದುಬಾರಿ ವಾಟರ್ ಫಿಲ್ಟರ್’ಗಳ ಈ ಕಾಲದಲ್ಲಿ ಕೇವಲ ಇಪ್ಪತ್ತು ರುಪಾಯಿಗೆ ನೂತನ ಫಿಲ್ಟರ್ ಕಂಡುಹಿಡಿದ ಕನ್ನಡಿಗ.

 

 

ಗ್ರಾಮೀಣ ಪ್ರದೇಶಗಳಲ್ಲಿ ಜನರು ಕುಡಿಯುವ ನೀರನ್ನು ಫಿಲ್ಟರ್ ಮಾಡಲು ಸಾಮನ್ಯವಾಗಿ ಆಸಕ್ತಿಯನ್ನು ಹೊಂದಿರೋದಿಲ್ಲ. ಕಲುಷಿತ ನೀರನ್ನು ಕುಡಿದ ನಂತರ ಅನೊರೋಗ್ಯಕ್ಕೆ ತುತ್ತಾಗಿರುವ ಎಷ್ಟೋ
ಹಳ್ಳಿ ವಿದ್ಯಾರ್ಥಿಗಳನ್ನು ನಾವು ಮಾಧ್ಯಮಗಳಲ್ಲಿ ನೋಡಿರುತ್ತೇವೆ. ಕಲುಷಿತ ನೀರನ್ನು ಸೇವನೆ ಮಾಡುವುದರಿಂದ ಚರ್ಮದ ಕಾಯಿಲೆಗಳು, ವಾಕರಿಕೆ, ತಲೆತಿರುಗುವಿಕೆ ಮತ್ತು ವಾಂತಿಗೆ ಕಾರಣವಾಗಬಹುದು. ಆದರೆ ಇದೀಗ, ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ವ್ಯವಸ್ಥೆ ಮಾಡಲು ಕಡಿಮೆ ವೆಚ್ಚದ ಪರಿಣಾಮಕಾರಿ, ಪರಿಸರ-ಸ್ನೇಹಿ ಫಿಲ್ಟರ್ ವೊಂದನ್ನು ಅಭಿವೃದ್ಧಿಪಡಿಸಲಾಗಿದೆ.

 

 

ಬೆಳಗಾವಿಯ “ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ”ದಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ನಿರಂಜನ್​ಗೆ ಈ ವಾಟರ್ ಪ್ಯೂರಿಫೈಯರನ್ನು ಕಂಡು ಹಿಡಿಡಿದ್ದು “ನಮ್ಮ ಮನೆಯ ಹತ್ತಿರ ಹುಡುಗರು ಮೈದಾನದಲ್ಲಿ ಆಟವಾಡಿದ ನಂತರ ಅಲ್ಲಿನ ಗಲೀಜು ನೀರನ್ನು ಕುಡಿಯುತ್ತಿದ್ದರು ಅದರಿಂದ ಕೆಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದುದನ್ನು ನಾನು ಗಮನಿಸಿದ್ದೆ. ಆಗಲೇ ನನಗೆ ಈ ಪ್ಯೂರಿಫೈಯರ್ ಕಂಡುಹಿಡಿಬೇಕು ಎನಿಸಿದ್ದು. ಇದು ಗ್ರಾಮೀಣ ಪ್ರದೇಶದವರಿಗೆ ಮತ್ತು ಬಡವರಿಗೆ ಅನುಕೂಲವಾಗುತ್ತದೆ.” ಎಂದು ಹೇಳುತ್ತಾರೆ.

 

 

ಈತ ತನ್ನ ಸಂಶೋಧಿತ ಫಿಲ್ಟರ್ ಗೆ ನಿರ್ನಾಲ್ ಎಂದು ಹೆಸರಿಟ್ಟಿದ್ದು ಇದರ ಬೆಲೆ ಕೇವಲ ಇಪ್ಪತ್ತು ರೂಪಾಯಿಗಳು. ಈ ಫಿಲ್ಟರ್ ಅನ್ನು ವಾಟರ್ ಬಾಟೆಲ್’ನ ಬಾಯಿಗೆ ಹಾಕಿ ನೀರನ್ನು ಕುಡಿಯಬೇಕು. 2016ರಿಂದ ಈ ವರೆಗೂ 8000 ಯುನಿಟ್​​ಗಳಷ್ಟು ಮಾರಾಟವಾಗಿವೆ. ಸರ್ಕಾರಿ ಶಾಲೆ, ಅನಾಥಾಲಯ, ಸೇನೆಗಳಿಗೆ ಮಾರಾಟ ಮಾಡಿದ್ದಾರೆ. ವಿದೇಶಗಳಲ್ಲೂ ಬಹು ಬೇಡಿಕೆಯನ್ನು ಹೊಂದಿರುವ ಈ ಫಿಲ್ಟರ್ ಅನ್ನು ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದಲ್ಲಿ ರಾಜ್ಯಾದ್ಯಂತ ಇರುವ ಮಕ್ಕಳಿಗೆ ತಲುಪಿಸುವ ಇರಾದೆಯನ್ನು ಹೊಂದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top