ಜ್ಯೋತಿಷ್ಯ

ಈ ವರ್ಷ 2018ರ ಮಕರ ಸಂಕ್ರಾಂತಿಯ ಫಲಾನುಫಲಗಳೇನು ತಿಳಿಯಿರಿ

ಈ ವರ್ಷ 2018ರ ಮಕರ ಸಂಕ್ರಾಂತಿಯ ಫಲಾನುಫಲಗಳೇನು ತಿಳಿಯಿರಿ

Image result for sankranthi habba

ಹೊಸ ವರ್ಷದ ಮೊದಲ ಹಬ್ಬ ಬಂದಿದೆ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ.  ಎಂದಿನಂತೆ ಎಷ್ಟೇ ಕಷ್ಟ-ನಷ್ಟಗಳಿರಲಿ ಹಬ್ಬದ ಹುರುಪು ಮಾತ್ರ ನಾವೆಲ್ಲರೂ ತಪ್ಪಿಸಿಕೊಳ್ಳುವ ಹಾಗೇನೇ ಇಲ್ಲ. ಇದು ನಮ್ಮ ಹಬ್ಬಗಳ ಮಹಿಮೆಯೆನ್ನಬಹುದು. ಈಗಾಗಲೇ ವರ್ಷ ಭವಿಷ್ಯದ ಬಗ್ಗೆ ತಿಳಿದುಕೊಳ್ಳುತ್ತಿರುವ ನೀವು ಈಗ ಸಂಕ್ರಾಂತಿಯಂದಿನಿಂದ ಆಗುವ ಚಿಕ್ಕಪುಟ್ಟ ಬದಲಾವಣೆಗಳನ್ನು ನಕ್ಷತ್ರ ಮತ್ತು ರಾಶಿಗಳ ಮೂಲಕ ತಿಳಿದುಕೊಂಡು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡಬಹುದು.

Image result for sankranthi habba

ಪ್ರತಿವರ್ಷವೂ ಈ ಹಬ್ಬವನ್ನು ಜನವರಿ 14ರಂದು ಆಚರಿಸುವುದು ಧಾರ್ಮಿಕ ನಂಬಿಕೆ. ಆದರೆ, ಈ ವರ್ಷ ಜನವರಿ 14ರ ಸಂಜೆ ಸೂರ್ಯಾತ್ಸಮದ ನಂತರ ಪ್ರದೋಷ ಕಾಲದ ಗೋಧೂಳಿ ಸಮಯದಲ್ಲಿ ಸಂಕ್ರಮಣ ಆರಂಭವಾಗುವುದರಿಂದ ಹಬ್ಬವನ್ನು ಆಚರಿಸಲು 14 ಇಲ್ಲವೆ 15 ದಿನಾಂಕಗಳ ಗೊಂದಲವಿದೆ. 2016 ಅಧಿಕ ವರ್ಷ ಆದ್ದರಿಂದ ಒಂದು ದಿನ ಗಣನೆಗೆ ತೆಗೆದುಕೊಂಡರೆ ಕಾಲಗಣನಾ ಶಾಸ್ತ್ರಜ್ಞರ ಪ್ರಕಾರ ಈ ಹಬ್ಬ ಒಂದು ದಿನ ಮುಂದೆ ಹೋಗುವುದು ಸಹಜ. ಅದರಲ್ಲೂ ಸಂಕ್ರಮಣ ರಾತ್ರಿ ಸಮಯದಲ್ಲಿ ಸಂಭವಿಸುವುದರಿಂದ ಸಾರಾಸಗಟಾಗಿ ಜನವರಿ 15 ದಿನಾಂಕವನ್ನು ಪರಿಗಣಿಸಬೇಕಾಗಿದೆ. ಇದರಿಂದ ಜನವರಿ 15 ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುವುದು ಸರ್ವ ಶ್ರೇಷ್ಠ.

Image result for sankranthi habba

ಮಕರ ಸಂಕ್ರಾಂತಿಯ ಫಲ:

ಈ ವರ್ಷ ಪುಷ್ಯ ಕೃಷ್ಣ ತ್ರಯೋದಶಿ ಭಾನುವಾರ 14ನೇ ಜನವರಿ 30ಘಟಿ, 51ವಿಘಟಿಯಲ್ಲಿ ಜ್ಯೇಷ್ಠಾ(ಮೂಲಾ) ನಕ್ಷ ತ್ರ, ವೃದ್ಧಿ(ಧೃವ) ಯೋಗ, ಗರಿಜೆ(ವಣಿಜೆ) ಕರಣ, ಕಟಕಲಗ್ನದಲ್ಲಿ ರವಿಯು ನಿರಯಣ ಮಕರರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂಕ್ರಾಂತಿ ಪುರುಷನ ಹೆಸರು ಘೋರಾ. ಮಕರ ಸಂಕ್ರಾಂತಿ ಫಲಗಳು 14ನೇ ಜನವರಿ 2018ರಿಂದ ಒಂದು ವರ್ಷಕಾಲ ನಡೆಯುತ್ತದೆ. ಜನರಲ್ಲಿ ಅಹಂಕಾರ, ದುರ್ಭಿಕ್ಷ , ವ್ಯಾಧಿ, ಚೋರಭಯ, ಪದಾರ್ಥಗಳಿಗೆ ಬೆಲೆ ಹೆಚ್ಚು ಮುಂತಾದ ಫಲಗಳು ಕಂಡುಬರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top