ಸಾಧನೆ

ಮಕ್ಕಳ ಶಾಲೆಗೆ ಕಳುಹಿಸಲು ಬೆಟ್ಟ ಕೊರೆದು ಸುಲಭದಾರಿ ನಿರ್ಮಾಣ ಮಾಡಿದ ತಂದೆ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮಕ್ಕಳ ಶಾಲೆಗೆ ಕಳುಹಿಸಲು ಬೆಟ್ಟ ಕೊರೆದು ಸುಲಭದಾರಿ ನಿರ್ಮಾಣ ಮಾಡಿದ ತಂದೆ!

ಒಡಿಶಾದ ವ್ಯಕ್ತಿಯೋರ್ವ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಟ್ಟ ಕೊರೆದು ರಸ್ತೆ ಮಾಡಿ ಇದೀಗ ವ್ಯಾಪಕ ಸುದ್ದಿಯಾಗಿದೆ.

Image result for Odisha: Jalandar Nayak a resident of Kandhamal carves out an 8 km road from a mountain to connect his Gumsahi village to Phulbani city so that his children can go to school without facing problems

ಒಡಿಶಾದ ಕಂದಮಾಲ್ ಜಿಲ್ಲೆಯ ಜಲಂಧರ್ ನಾಯಕ್ ಇದೀಗ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಬೆಟ್ಟ ಕೊರೆದು ಬರೊಬ್ಬರಿ 8 ಕಿ.ಮೀ ರಸ್ತೆ ನಿರ್ಮಿಸಿ ಸಾಧನೆ ಮಾಡಿದ್ದಾನೆ. ಕಂದಮಾಲ್ ಜಿಲ್ಲೆಯ ಗುಮ್ಸಾಹಿ ಎಂಬ ಕುಗ್ರಾಮದಲ್ಲಿ ಜಲಂಧರ್ ನಾಯಕು ಕುಟುಂಬವಿದ್ದು, ಆತನ ಮಕ್ಕಳು ಶಾಲೆಗೆ ತೆರಳಲು ಸೂಕ್ತ ರಸ್ತೆ ಸೌಲಭ್ಯವಿಲ್ಲ. ಸಮೀಪದ ಫುಲ್ಬಾನಿ ಟೌನ್ ನಲ್ಲಿರುವ ಶಾಲೆಗೆ ತೆರಳಲು ಮಕ್ಕಳು ಬೆಟ್ಟಗುಡ್ಡಗಳನ್ನು ಹತ್ತಿಳಿಯಬೇಕಿತ್ತು ಅದಕ್ಕಾಗಿಯೇ ಜಲಂಧರ್ ಬೆಟ್ಟವನ್ನು ಕೊರೆದು ಮಕ್ಕಳು ಶಾಲೆಗೆ ಹೋಗಲು ಸುಲಭದಾರಿ ನಿರ್ಮಾಣ ಮಾಡಿದ್ದಾನೆ.

Image result for Odisha: Jalandar Nayak a resident of Kandhamal carves out an 8 km road from a mountain to connect his Gumsahi village to Phulbani city so that his children can go to school without facing problems

45 ವರ್ಷ ವಯಸ್ಸಿನ ಜಲಂಧರ್ ನಾಯಕ್ ಎಂಬಾತ ಒಂದು ತರಕಾರಿ ಮಾರಾಟಗಾರನಾಗಿದ್ದು, ಎರಡು ವರ್ಷಗಳಿಂದ ಪ್ರತಿ ದಿನ 8 ಗಂಟೆಗಳ ತನ್ನ ಮಕ್ಕಳಿಗಾಗಿ ವ್ಯಾಪರ ಬಿಟ್ಟು ಕಾಲ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದಾನೆ. ತನ್ನ ಗ್ರಾಮದ ಗುಮ್ಸಾಹಿ ಯನ್ನು ಒಡಿಶಾದ ಕಂಧಮಾಲ್ನ ಫುಲ್ಬಾನಿ ಪಟ್ಟಣದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವುದಕ್ಕೆ  ಹಾಗೂ ತನ್ನ ಮಕ್ಕಳಿಗಾಗಿ  ಈ  ಮಾರ್ಗವನ್ನು ನಿರ್ಮಿಸಿದ್ದಾನೆ.

Image result for Odisha: Jalandar Nayak a resident of Kandhamal carves out an 8 km road from a mountain to connect his Gumsahi village to Phulbani city so that his children can go to school without facing problems

ಗುಮ್ಸಾಹಿ ಗ್ರಾಮದಲ್ಲಿ ಕೇವಲ ಜಲಂಧರ್ ನಾಯಕ್ ಕುಟುಂಬ ಮಾತ್ರ ವಾಸವಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಈ ಗ್ರಾಮದಲ್ಲಿ ಹಲವಾರು  ಕುಟುಂಬಗಳು ಇದ್ದವು ಆದರೆ ಇಲ್ಲಿ ಜೀವನಮಾಡಲಾಗದೇ ಹಲವಾರು ಕುಟುಂಬಗಳು ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದವು.

ಮಕ್ಕಳ ಸಂಕಷ್ಟವನ್ನು ಅರಿತಿದ್ದ ಜಲಂಧರ್ ನಾಯಕ್ ತನ್ನ ಗುಮ್ಸಾಹಿ ಗ್ರಾಮದಿಂದ ಫುಲ್ಬಾನಿ ಟೌನ್ ಗೆ ಸಂಪರ್ಕ ಕಲ್ಪಿಸಲು ಅಡ್ಡವಾಗಿ ಇದ್ದ ಬೆಟ್ಟದಲ್ಲಿ ರಸ್ತೆಕೊರೆಯಲು ಆರಂಭಿಸಿದ್ದನಂತೆ. ಕಳೆದೆರಡು ವರ್ಷಗಳ ಹಿಂದೆ ಜಲಂಧರ್ ನಾಯಕ್ ಏಕಾಂಗಿಯಾಗಿ ರಸ್ತೆ ತೋಡಲು ಆರಂಭಿಸಿದ್ದು, ಇದೀಗ ಗುಮ್ಸಾಹಿ ಗ್ರಾಮಕ್ಕೆ ರಸ್ತೆ ನಿರ್ಮಾಣವಾಗಿದೆ. ಜಲಂಧರ್ ನಾಯಕ್ ಪ್ರತೀ ನಿತ್ಯ ಸುಮಾರು 8 ಗಂಟೆಗಳ ಕಾಲ ಸತತವಾಗಿ 2 ವರ್ಷ ರಸ್ತೆ ಅಗೆದು ಇದೀಗ ಸುಮಾರು 8.ಕಿ,ಮೀ ರಸ್ತೆ ನಿರ್ಮಾಣ ಮಾಡಿದ್ದಾನೆ. ಮುಂದಿನ ಮೂರು ವರ್ಷಗಳಲ್ಲಿ ಮತ್ತೊಂದು 7 ಕಿ.ಮೀ. ರಸ್ತೆ ಕೊರೆದು ಸುಲಭದಾರಿ ನಿರ್ಮಾಣ ಮಾಡುವುದಾಗಿ ಗುರಿ ಹೊಂದಿದ್ದೆನೇ ಎಂದು ಹೇಳಿದ್ದಾನೆ.

Image result for Odisha: Jalandar Nayak a resident of Kandhamal carves out an 8 km road from a mountain to connect his Gumsahi village to Phulbani city so that his children can go to school without facing problems

ಇದೀಗ ಜಲಂಧರ್ ನಾಯಕ್ ರಸ್ತೆ ನಿರ್ಮಾಣ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸ್ಥಳೀಯ ಜಿಲ್ಲಾ ಆಡಳಿತ ಜಲಂಧರ್ ನಾಯಕ್ ಅವರಿಗೆ ಬೇಕಾದ ಎಲ್ಲ ನೆರವನ್ನೂ ನೀಡಲು ಸಿದ್ಧ ಎಂದು ಹೇಳಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಡಿಒ ಅಧಿಕಾರಿ ಎಸ್ ಕೆ ಜೆನಾ ಗುಮ್ಸಾಹಿ ಗ್ರಾಮಕ್ಕೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸುವುದಾಗಿ ಹೇಳಿದ್ದಾರೆ.

Comments

comments

Click to comment

Leave a Reply

Your email address will not be published. Required fields are marked *

To Top