ಆರೋಗ್ಯ

ನೀವು ತಂದಿರೋ ಅಕ್ಕಿ ಪ್ಲಾಸ್ಟಿಕ್ಕೋ ಅಥವಾ ನಿಜವಾದ್ದೋ ಅಂತ ಈ ವಿಧಾನದಿಂದ ಖಚಿತ ಪಡಿಸಿಕೊಳ್ಳಿ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನೀವು ತಂದಿರೋ ಅಕ್ಕಿ ಪ್ಲಾಸ್ಟಿಕ್ಕೋ ಅಥವಾ ನಿಜವಾದ್ದೋ ಅಂತ ಈ ವಿಧಾನದಿಂದ ಖಚಿತ ಪಡಿಸಿಕೊಳ್ಳಿ.

 

 

ಇತ್ತೀಚಿಗೆ ಜನರಲ್ಲಿ ಭಾರಿ ಆತಂಕ ಹುಟ್ಟಿಕೊಳ್ಳಲು ಕಾರಣವಾಗಿರುವ ಪ್ಲಾಸ್ಟಿಕ್ ಅಕ್ಕಿ ಮತ್ತು ಪ್ಲಾಸ್ಟಿಕ್ ಮೊಟ್ಟೆ ಕಲಬೆರಕೆ ವಿಷಯವಾಗಿ ಅನೇಕ ಚರ್ಚೆಗಳು ಸೋಷಿಯಲ್ ಮೀಡಿಯಾಗಳಲ್ಲಿ ನಡೆಯುತ್ತಲೇ ಇವೆ. ವಾಸ್ತವವಾಗಿ, ಸಮಸ್ಯೆ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ ಆದರೆ ಸಿಂಗಾಪುರ್, ಇಂಡೋನೇಶಿಯಾ ಮತ್ತು ಶ್ರೀಲಂಕಾ ದೇಶಗಳಲ್ಲಿ ಕೂಡ ಈ ಪ್ಲಾಸ್ಟಿಕ್ ಅಕ್ಕಿಯ ಸಮಸ್ಯೆ ಹರಡಿದೆ. ಪ್ಲಾಸ್ಟಿಕ್ ಅಕ್ಕಿಯನ್ನು ರಾಸಾಯನಿಕಗಳಿಂದ ಮಾಡಲಾಗಿದ್ದು ನೋಡುವುದಕ್ಕೆ ಥೇಟ್ ನಿಜವಾದ ಅಕ್ಕಿಯಂತೆ ಕಾಣುತ್ತದೆ ಇದನ್ನು ಸೇವಿಸಿದರೆ ಅರೋಗ್ಯ ಅಧೋ ಗತಿ. ಬಳಷ್ಟು ಮಂದಿ ಇದೀಗ ಪ್ಲಾಸ್ಟಿಕ್‌ ಅಕ್ಕಿಯನ್ನು ಕಂಡು ಹಿಡಿಯುವ ನಾನಾ ವಿಧಾನ ಅನುಸರಿಸುತ್ತಿದ್ದಾರೆ. ಹಾಗಾಗಿ ನೀವು ತಂದಿರೋ ಅಕ್ಕಿ ಪ್ಲಾಸ್ಟಿಕ್ಕೋ ಅಥವಾ ನಿಜವಾದ್ದೋ ಅಂತ ಈ ವಿಧಾನದಿಂದ ಖಚಿತ ಪಡಿಸಿಕೊಳ್ಳಿ.

 

 

1. ಬಿಸಿ ಎಣ್ಣೆಯ ಪರೀಕ್ಷೆ:
ಅಕ್ಕಿಯ ಮೇಲೆ ಸ್ವಲ್ಪ ಕಾಯಿಸಿದ ಬಿಸಿ ಎಣ್ಣೆಯನ್ನು ಸ್ವಲ್ಪ ಹಾಕಿ. ಒಂದು ವೇಳೆ ಅಕ್ಕಿ ಪ್ಲಾಸ್ಟಿಕ್ ಆಗಿದ್ದರೆ ಅದು ಕರಗುತ್ತದೆ ಕರಾಗದಿದ್ದರೆ ಅದು ನಿಜವಾದ ಅಕ್ಕಿ ಎಂದು ತಿಳಿದುಕೊಳ್ಳಿ.

2.ಸುಡುವ ಪರೀಕ್ಷೆ:
ನಿಮ್ಮಲಿರುವ ಅಕ್ಕಿಗೆ ಸ್ವಲ್ಪ ಬೆಂಕಿ ತಗುಲಿಸಿ ಅದು ಪ್ಲಾಸ್ಟಿಕ್ ಅಕ್ಕಿ ಆಗಿದ್ದರೆ ಸುಟ್ಟುಹೋಗಿ ಸೀದುಹೋದ ವಾಸನೆ ಬರುತ್ತದೆ.

3. ಅಕ್ಕಿಯನ್ನು ಬೇಯಿಸಿ ನೋಡಿ:
ಅಕ್ಕಿಯನ್ನು ಬೇಯಿಸಿ ನೋಡಿ ಆಗ ಅಕ್ಕಿ ಮೆತ್ತಗಾಗದೆ ಅಕ್ಕಿಯ ಮೇಲ್ಪದರ ಗಟ್ಟಿಯಾಗಿದ್ದರೆ ಅದು ಪ್ಲಾಸ್ಟಿಕ್ ಅಕ್ಕಿಯೆಂದು ತಿಳಿಯಬೇಕು.

4. ನೀರಿನ ಟೆಸ್ಟ್ .
ಅಕ್ಕಿಯನ್ನು ನೀರಿನಲ್ಲಿ ಹಾಕಿ ಕೆಲ ಸಮಯದ ನಂತರ ಅಕ್ಕಿ ನೀರಿನಲ್ಲಿ ತೇಲಿದರೆ ಅದು ಪ್ಲಾಸ್ಟಿಕ್ ಅಕ್ಕಿಯಾಗಿರುತ್ತದೆ.

5. ಕೊಳೆತಿನಿಯ ವಾಸನೆ:
ಅಕ್ಕಿಯನ್ನು ಬೇಯಿಸಿ ಒಂದು ಪ್ಲಾಸ್ಟಿ ಡಬ್ಬಿಯೊಳಕ್ಕೆ ಹಾಕಿ ಮುಚ್ಚಿಡಿ ಎರಡು ದಿನಗಳ ನಂತರವೂ ಅದಕ್ಕೆ ಕೊಳೆತಿನಿಯ ವಾಸನೆ ಬರದಿದ್ದರೆ ಅದು ಪ್ಲಾಸ್ಟಿಕ್ ಅಕ್ಕಿಯೇ ಆಗಿರುತ್ತದೆ.

 

 

Comments

comments

Click to comment

Leave a Reply

Your email address will not be published. Required fields are marked *

To Top