ಸಾಧನೆ

ಮಗಳ ಹೆಸರಲ್ಲಿ 101 ಗಿಡಗಳನ್ನು ನೆಟ್ಟ ಪುಣೆ ದಂಪತಿ

ಮಗಳ ಹೆಸರಲ್ಲಿ 101 ಗಿಡಗಳನ್ನು ನೆಟ್ಟ ಪುಣೆ ದಂಪತಿ

ರಂಜಿತ್ ಮತ್ತು ನೇಹಾ ನಾಯ್ಕ್ ತಮ್ಮ ಒಂದೂವರೆ ತಿಂಗಳ ಹೆಣ್ಣು ಮಗು ಅಲಿಶಾಳ ನಾಮಕರಣ ಸಮಾರಂಭವನ್ನು ಅತ್ಯಂತ ವಿಭಿನ್ನವಾಗಿ ಆಚರಿಸಿದ್ದಾರೆ. ಅಷ್ಟೇ ಅಲ್ಲದೇ 50 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಹತ್ತಿರದ ಶಾಲೆಗೆ 50 ಗಿಡಗಳನ್ನು, ಗಿಡ ನೆಡುವ ಪರಿಕರಗಳನ್ನು ನೀಡಿದ್ದಾರೆ. ತಮ್ಮ ಸ್ನೇಹಿತರು, ಸ್ಥಳಿಯ ಆಡಳಿತ ಎಲ್ಲವನ್ನೂ ಒಗ್ಗೂಡಿಸಿ ಅವರು ಈ ಕಾರ್ಯ ಮಾಡಿದ್ದಾರೆ.

ಆಕೆಯ ಹೆಸರಲ್ಲಿ ಯವತ್‌ನ ಬುಲೇಶ್ವರ ದೇಗುಲ ಸಮೀಪದ ಮಲ್ಶಿರಾಸ್ ಗ್ರಾಮದಲ್ಲಿ 101 ಗಿಡಗಳನ್ನು ನೆಟ್ಟಿದ್ದಾರೆ. ಆ ಗಿಡಗಳೊಂದಿಗೆ ಆಕೆ ಬೆಳೆಯಬೇಕು ಎಂಬ ಮಹದಾಸೆ ಅವರದ್ದು.

ಈ ದಂಪತಿಗಳು ಅದ್ದೂರಿಯಾಗಿ ಮಾಡಬೇಕಾಗಿದ್ದ ಸಮಾರಂಭಮಾಡುವ ಬದಲಾಗಿ ಪರಿಸರದ ಸಂರಕ್ಷಣೆ ಮಾಡಲು ಮತ್ತು ಪರಿಸರದಲ್ಲಿ ಮರಗಿಡಗಳನ್ನು ಬೆಳಸಲು ಮತ್ತು ಇವುಗಳನ್ನು ಸಂರಕ್ಷಿಸಲು ಈ ನಾಮಕರಣ ಸಮಾರಂಭವನ್ನು ಅದ್ಧೂರಿಯಾಗಿ ಮಾಡದೆ 50 ಸಾವಿರ ರೂ ಖರ್ಚು ಮಾಡಿ ಸ್ಥಳೀಯ ಹಳ್ಳಿಯ ಶಾಲೆಯ ವಿದ್ಯಾರ್ಥಿಗಳಿಗೆ 51 ಗಿಡಗಳನ್ನು ನೀಡಿ, ಸ್ನೇಹಿತರ ಮತ್ತು ಕುಟುಂಬದ ಸದಸ್ಯರೊಂದಿಗೆ ಪುಣೆನಿಂದ 55 ಕಿ.ಮೀ ದೂರದಲ್ಲಿರುವ ಹಳ್ಳಿಯಲ್ಲಿ ಮಾವು, ಬಿದಿರು, ತೆಂಗಿನಕಾಯಿ, ಆಲದಗಿಡ, ಅಂಜೂರದ ಗಿಡ, ಹುಣಿಸೇಗಿಡಗಳನ್ನು ನೆಟ್ಟಿದ್ದಾರೆ ಹಾಗೂ ಈ ಗಿಡಗಳಿಗೆ ಸಂರಕ್ಷಿಸಲು ಗಿಡಗಳ ಸುತ್ತ ಬೇಲಿಯನ್ನು ಕೂಡ ಹಾಕಿದ್ದಾರೆ. ಈ ಕಾರ್ಯ ಮುಗಿದ ನಂತರ ಒಂದು ಕೇಕ್ ಕತ್ತರಿಸಿ ಮಗುವಿನ ಹೊಸ ಹೆಸರನ್ನು -ಆಲಿಶಾ-  ಎಂದು ನಾಮ ಕರಣ ಮಾಡಿ ಸಂಭ್ರಮದಿಂದ ಆಚರಿಸಿದ್ದಾರೆ.

ಪರಿಸರ ಮತ್ತು ಹೆಣ್ಣು ಮಗುವಿನ ರಕ್ಷಣೆ ಇಂದಿನ ಅನಿವಾರ್ಯ ಎಂಬುದನ್ನು ಸಾಫ್ಟ್‌ವೇರ್ ಎಂಜಿನಿಯರ್ ರಂಜಿತ್ ಮತ್ತು ಉಪನ್ಯಾಸಕಿ ನೇಹಾ ಎಲ್ಲರಿಗೂ ತಿಳಿಸಿಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top