ದೇವರು

ಸಂಕ್ರಾಂತಿ ಹಬ್ಬದಲ್ಲಿ ಎಳ್ಳು ಬೆಲ್ಲ ಬೀರುವ ಮಹತ್ವ ಏನು ಗೊತ್ತಾ ತಿಳ್ಕೊಳ್ಳಿ ಸಂಪ್ರದಾಯದ ಮಹತ್ವ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಂಕ್ರಾಂತಿ ಹಬ್ಬದಲ್ಲಿ ಎಳ್ಳು ಬೆಲ್ಲ ಬೀರುವ ಮಹತ್ವ ಏನು  ?ಎಂದು ತಿಳಿದುಕೊಳ್ಳಿ.

 

 

ಸಂಕ್ರಾಂತಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವವಾದ ಸ್ಥಾನವಿದೆ. ಜಗದ ಅಧಿನಾಯಕ, ಗ್ರಹಗಳ ರಾಜ ಸೂರ್ಯ, ತನ್ನ ಪಥವನ್ನು ಬದಲಿಸುವ ಪರ್ವ ಕಾಲವನ್ನು ನಾವು ಸಂಕ್ರಾಂತಿ ಎಂದು ಕರೆಯುತ್ತೇವೆ.

ಹನ್ನೆರಡು ಸೌರಮಾನ ಮಾಸಗಳಲ್ಲಿ, ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯವರಿಗೆ ಸೂರ್ಯ ತನ್ನ ಪಥವನ್ನು ಬದಲಿಸುತ್ತಾನೆ. ಆದರೂ ಧನುರ್ ರಾಶಿಯಿಂದ ಮಕರ ರಾಶಿಗೆ ಸೂರ್ಯ ತನ್ನ ಪಥ ಬದಲಿಸುವ ಪರ್ವ ಕಾಲವನ್ನು ಮಕರ ಸಂಕ್ರಾಂತಿ ಎಂದು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಅದಕ್ಕೆ ಮುಖ್ಯ ಕಾರಣ ಮಕರ ಸಂಕ್ರಾಂತಿಯಿಂದ ಉತ್ತರಾಯಣದ ಪುಣ್ಯಕಾಲ ಆರಂಭವಾಗುತ್ತದೆ. ಅಷ್ಟೇ ಅಲ್ಲ ಮಕರ ಸಂಕ್ರಾಂತಿ ಎಂದರೆ ಸುಗ್ಗಿ ಕಾಲವೂ ಹೌದು. ವರ್ಷವೆಲ್ಲ ಬೆವರು ಸುರಿಸಿ ಬೆಳೆದ ಫಸಲು ರೈತನ ಕೈಗೆಟುಕುವ ಸಮಯ ಇದು. ಆದ್ದರಿಂದಲೇ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ, ಪ್ರತಿ ವರ್ಷ ಜನವರಿ  14 ಅಥವಾ 15 ನೇ ತಾರೀಕಿನಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.

ಸಂಕ್ರಾಂತಿ ವಿಶೇಷ ಎಳ್ಳು, ಬೆಲ್ಲ ಮನೆಯಲ್ಲಿ ಅದನ್ನು ತಯಾರಿಸಿ ಅಥವಾ ಖರೀದಿಸಿ ತಂದು ಸುತ್ತಲಿನ ಮಕ್ಕಳಿಗೆ ಎಳ್ಳು ಬೀರುವುದು, ಮತ್ತು ಸ್ನೇಹಿತರು ಸಂಬಂಧಿಕರೊಂದಿಗೆ ಶುಭಾಶಯ ಹಂಚಿಕೊಳ್ಳುವುದು ಸಂಕ್ರಾಂತಿ ಹಬ್ಬದ ಸಂಪ್ರದಾಯವಾಗಿದೆ .

 

 

ಸಂಕ್ರಾಂತಿ ಎಂದರೆ ಹೆಸರೇ ಸೂಚಿಸುವಂತೆ ಒಳಿತನ್ನು ಉಂಟು ಮಾಡುವಂತಹ, ಹೊಸ ಬದಲಾವಣೆ ತರುವಂತಹ ಧನಾತ್ಮಕ ಪರಿವರ್ತನೆಗೆ ನಾಂದಿ ಹಾಡುವ ಈ ಹಬ್ಬದಲ್ಲಿ ಸೂರ್ಯನನ್ನು ಆರಾಧಿಸಲಾಗುತ್ತದೆ. ಮೈ ಕೊರೆವ ಚಳಿಯಿಂದ ತತ್ತರಿಸಿ ಹೊಲ, ಗದ್ದೆಗಳ ಕೆಲಸಗಳತ್ತ ಮುಖ ಮಾಡಲು ಹಿಂಜರಿಯುತ್ತಿರುವ ಸೂರ್ಯನ  ಪ್ರಖರ ಕಿರಣಗಳು ಮೈಗೆ ಸೋಕಿ ಹೊಸ ಹುರುಪು ನೀಡುತ್ತದೆ.ಸಂಕ್ರಾಂತಿಯ ನಂತರ ಚಳಿಗಾಲ ಕೊಂಚ ಕೊಂಚವೇ ಕಡಿಮೆಯಾಗುತ್ತದೆ.

 

 ಶುಭ ಕಾರ್ಯಗಳಿಗೆ ನಾಂದಿ.

 

ಧನುರ್ಮಾಸದ ಸಮಯದಲ್ಲಿ ಹಿಂದೂ ಸಂಸ್ಕೃತಿಯಲ್ಲಿ ಯಾವ ಶುಭ ಕಾರ್ಯವನ್ನು ಮಾಡುವುದಿಲ್ಲ. ಆದರೆ ಮಕರ ಮಾಸ ಆರಂಭವಾಗುತ್ತಿದ್ದಂತೆಯೇ ಮತ್ತೆ ಮದುವೆ, ಮುಂಜಿಗಳು ಆಚರಣೆಗೆ ಆರಂಭವಾಗುತ್ತದೆ. ಕರ್ನಾಟಕದಾದ್ಯಂತ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೊಸ ಬಟ್ಟೆ ತೊಟ್ಟು, ಎಳ್ಳು, ಬೆಲ್ಲ ಸವಿಯುತ್ತ ಆಚರಿಸಲ್ಪಡುವ ಈ ಹಬ್ಬ ಹೆಂಗಳೆಯರಿಗೆ ಅಚ್ಚು ಮೆಚ್ಚು.  ಈ ಸಮಯದಲ್ಲಿ ಚಳಿ ಹೆಚ್ಚಾಗಿ ಇರುವುದರಿಂದ ದೇಹದ ಉಷ್ಣತೆಯನ್ನು ಹೆಚ್ಚಿಸಲು ಎಳ್ಳು ಮತ್ತು ಬೆಲ್ಲವನ್ನು ಸೇವಿಸುವುದು. ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದಲೇ ಎಳ್ಳು ಬೀರುವ ಶಾಸ್ತ್ರ ಮಾಡಲಾಗುತ್ತದೆ. ಇದರೊಟ್ಟಿಗೆ ಹುರಿಗಡಲೆ, ಕೊಬ್ಬರಿ , ಸಕ್ಕರೆ, ಅಚ್ಚುಗಳನ್ನು ಸೇರಿಸಿ ತಿನ್ನುವ ಪದ್ಧತಿ ರೂಢಿಯಲ್ಲಿದೆ. ಸುಗ್ಗಿಯ ಸಂಕೇತವಾಗಿ ಕಬ್ಬನ್ನು ಹಂಚಲಾಗುತ್ತದೆ.

 

 

ಗೋವುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವ ಸಂಪ್ರದಾಯವೂ ಕೆಲವಡೆ ಈಗಲೂ ಇದೆ. ಕಾಮಧೇನು ಎಂದು ಕರೆಯಲ್ಪಡುವ ರಾಸುಗಳಿಗೆ ಸಂಕ್ರಾಂತಿಯಂದು ವಿಶೇಷ ಗೌರವ ಸಿಗುವುದು. ಅವಿರತ ಕೆಲಸ ಮಾಡಿ ದಣಿದಿದ್ದ ರೈತರಿಗೂ, ಉಳುಮೆ ಮಾಡಿ ಸುಸ್ತಾದ ರಾಸುಗಳಿಗೂ ಕೆಲ ಹೊತ್ತು ಮನಸ್ಸನ್ನು ಸಂಭ್ರಮದಲ್ಲಿ ಕಾಲ ಕಳೆಯುವುದಕ್ಕಾಗಿ ವಿವಿಧ ಸ್ಪರ್ಧೆಗಳು, ಮನರಂಜನೆಯ ಕಾರ್ಯಕ್ರಮಗಳು ನಡೆಯುತ್ತದೆ.

 

 

ಈ ಹಬ್ಬಕ್ಕೂ ಎಳ್ಳಿಗೂ ನಿಕಟ ಸಂಬಂಧವಿದೆ. ಎಳ್ಳು, ಬೆಲ್ಲ, ಶೀತ, ವಾದದಿಂದ ಉಂಟಾಗುವ ಜಡ್ಡು ಆಲಸ್ಯಗಳನ್ನು ದೂರ ಮಾಡುವ ಮತ್ತು ಸ್ನೇಹ ,ದ್ರವ್ಯಗಳ ಹಂಚಿಕೆ ಸೇವನೆ. ದಾನ ಈ ಸಂಕ್ರಾಂತಿಯ ವೈಶಿಷ್ಟ್ಯ.

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ

Comments

comments

Click to comment

Leave a Reply

Your email address will not be published. Required fields are marked *

To Top