ಮನೋರಂಜನೆ

ಚಮಕ್ ನಂತರ ಸುನಿಯ ಮುಂದಿನ ‘ಬಜಾರ್’ ಚಿತ್ರಕ್ಕೆ ಚಾಲನೆ:  ಪುನೀತ್ ಕೈಯಿಂದ ಟೀಸರ್ ಬಿಡುಗಡೆ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚಮಕ್ ನಂತರ ಸುನಿಯ ಮುಂದಿನ ‘ಬಜಾರ್’ ಚಿತ್ರಕ್ಕೆ ಚಾಲನೆ:  ಪುನೀತ್ ಕೈಯಿಂದ ಟೀಸರ್ ಬಿಡುಗಡೆ.

 

 

ಚಮಕ್ ಚಿತ್ರದ ಗೆಲುವಿನ ಖುಷಿಯಲ್ಲಿ ತೇಲಾಡುತ್ತಿರುವ ಸ್ಯಾಂಡಲ್ ವುಡ್’ನ ಮೋಸ್ಟ್ ಟ್ಯಾಲೆಂಟೆಡ್ ಡೈರೆಕ್ಟರ್ ಸಿಂಪಲ್ ಸುನಿಯ ಬಜಾರು ಈಗ ಜೋರಾಗಿ ನಡೆಯುತ್ತಿದೆ. ಸ್ಯಾಂಡಲ್ ವುಡ್ ಸಿನಿ ರಸಿಕರಿಗೆ ಡಿಸೈನ್ ಡಿಸೈನ್ ಸಿನಿಮಾಗಳನ್ನು ಮಾಡಿ ಉಣ ಬಡಿಸುತ್ತಿರುವ ಸುನಿ ತಮ್ಮ ಮುಂದಿನ ಚಿತ್ರದಲ್ಲಿ ಹೊಸ ನಟನನ್ನು ಪರಿಚಯಿಸುವ ಪ್ಲಾನ್ ಹಾಕಿಕೊಂಡಿದ್ದಾರೆ. ಇನ್ನು ಈ ಚಿತ್ರದ ಟೀಸರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಲಿದ್ದಾರೆ.

 

 

ತಮ್ಮ ಮುಂದಿನ ಚಿತ್ರಕ್ಕೆ ‘ಬಜಾರ್’ ಎಂದು ಟೈಟಲ್ ಫಿಕ್ಸ್ ಮಾಡಿರುವ ಸುನಿ ಧನ್ವೀರ್ ಗೌಡ ಎಂಬ ಯುವ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಧೈರ್ಯಮ್ ಚಿತ್ರದಲ್ಲಿ ಅಜಯ್ ರಾವ್ ಜೊತೆ ನಾಯಕಿಯಾಗಿ ಅಭಿನಯಿಸಿದ್ದ ಅದಿತಿ ಪ್ರಭು (ಸುದೀಪನಾ) ಈ ಚಿತ್ರದಲ್ಲಿ ಧನ್ವೀರ್ ಗೌಡಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೈಸೂರಿನಲ್ಲಿ ನಡೆಯುವ ಪಾರಿವಾಳದ ಜೂಜು ಮತ್ತು ಸ್ಪರ್ಧೆಯ ಸುತ್ತ ಚಿತ್ರಕತೆಯನ್ನು ಹೆಣೆದಿದ್ದಾರೆ ಸುನಿ.

 

 

ಉಳಿದಂತೆ ‘ಬಜಾರ್’ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದರೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಲಿದ್ದಾರಂತೆ. ಈ ಚಿತ್ರ ಇದೆ 15ರಂದು ಸಂಕ್ರಾಂತ್ರಿ ಹಬ್ಬದ ಪ್ರಯುಕ್ತ  ಸೆಟ್ಟೇರಲಿದ್ದು ಕಂಠೀರವ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಿದ್ದಾರೆ.

 

 

Comments

comments

Click to comment

Leave a Reply

Your email address will not be published. Required fields are marked *

To Top