ತಿಂಡಿ ತೀರ್ಥ

ದಕ್ಷಿಣ ಭಾರತದ ಸಂಕ್ರಾಂತಿ ವಿಶೇಷ ಅಡುಗೆ ಸಿಹಿ ಪೊಂಗಲ್‌, ಖಾರ ಪೊಂಗಲ್ ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ದಕ್ಷಿಣ ಭಾರತದ ಸಂಕ್ರಾಂತಿ ವಿಶೇಷ ಅಡುಗೆ ಸಿಹಿ ಪೊಂಗಲ್‌, ಖಾರ ಪೊಂಗಲ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು

* ಅರ್ಧ ಕಪ್‌ ಅಕ್ಕಿ

* 1/2 ಕಪ್‌ ಹೆಸರು ಬೇಳೆ

* 1/2 ಕಪ್‌ ಬೆಲ್ಲ

* ಅರ್ಧ ಚಮಚ ಏಲಕ್ಕಿ

* ಚಿಟಿಕೆಯಷ್ಟು ತಿನ್ನುವ ಕರ್ಪೂರ

* 2-3 ಚಮಚ ತುಪ್ಪ

* 1 ಚಮಚ ಒಣದ್ರಾಕ್ಷಿ,

* 5-6 ಗೋಡಂಬಿ

* 2 ಲವಂಗ

* ತೆಂಗಿನಕಾಯಿ ಚಿಕ್ಕದಾಗಿ ಕತ್ತರಿಸಿದ್ದು 1/4 ಕಪ್‌ (ಕಡ್ಡಾಯವಲ್ಲ)

Related image

ಸಿಹಿ ಪೊಂಗಲ್ ಮಾಡುವ ವಿಧಾನ:

 1. ತಳ ದಪ್ಪವಿರುವ ಸ್ವಲ್ಪ ದೊಡ್ಡ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ 1 ಚಮಚ ತುಪ್ಪ ಹಾಕಿ ಅದರಲ್ಲಿ ತೊಳೆದ ಹೆಸರು ಬೇಳೆ ಹಾಕಿ, ಹೆಸರು ಬೇಳೆಯಿಂದ ಪರಿಮಳ ಬರುವವರೆಗೆ ಫ್ರೈ ಮಾಡಿ. ಈಗ ಅದೇ ಪಾತ್ರೆಗೆ ಅಕ್ಕಿಯನ್ನು ತೊಳೆದು ಹಾಕಿ ನಂತರ 3 ಕಪ್‌ ನೀರು ಹಾಕಿ ಅಕ್ಕಿ ಚೆನ್ನಾಗಿ ಬೇಯುವವರೆಗೆ ಬೇಯಿಸಿ (ಕುಕ್ಕರ್‌ನಲ್ಲಿ ಬೇಕಿದ್ದರೆ ಬೇಯಿಸಬಹುದು).
 2. ಮತ್ತೊಂದು ಪಾತ್ರೆಯಲ್ಲಿ ಬೆಲ್ಲದ ಪಾಕ ತಯಾರಿಸಿ.
 3. ಅನ್ನ ಮತ್ತು ಬೇಳೆ ಚೆನ್ನಾಗಿ ಬೆಂದ ಬಳಿಕ ಬೆಲ್ಲದ ಪಾಕವನ್ನು ಅನ್ನದ ಪಾತ್ರೆಗೆ ಸುರಿಯಿರಿ. ಏಲಕ್ಕಿ ಜಜ್ಜಿ ಹಾಕಿ. ಬೆಲ್ಲ ಮಿಶ್ರ ಮಾಡಿದ ಅನ್ನ ಕುದಿ ಬರಲಾರಂಭಿಸಿದಾಗ ಉರಿಯಿಂದ ಇಳಿಸಿ.
 4. ಇದೀಗ ಮತ್ತೊಂದು ಪ್ಯಾನ್‌ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಲವಂಗ ಹಾಕಿ ನಂತರ ಒಣ ದ್ರಾಕ್ಷಿ, ಗೋಡಂಬಿ, ಕರ್ಪೂರ ಹಾಕಿ 2 ನಿಮಿಷ ಫ್ರೈ ಮಾಡಿ ರೆಡಿ ಪೊಂಗಲ್‌ಗೆ ಹಾಕಿ, ನಂತರ ತೆಂಗಿನ ಕಾಯಿಯ ಚಿಕ್ಕ-ಚಿಕ್ಕ ತುಂಡುಗಳನ್ನು ತುಪ್ಪದಲ್ಲಿ ಹುರಿದು ಸೇರಿಸಿದರೆ ಸವಿಯಲು ಸಂಕ್ರಾಂತಿ ಪೊಂಗಲ್‌ ರೆಡಿ.

 

ಖಾರ ಪೊಂಗಲ್ ಮಾಡುವ ವಿಧಾನ:

ಬೇಕಾಗುವ ಸಾಮಗ್ರಿಗಳು:

 • ಹೆಸರುಬೇಳೆ- 1 ಕಪ್
 • ಅಕ್ಕಿ- 1 ಕಪ್
 • ಜೀರಿಗೆ – ಅರ್ಧ ಚಮಚ
 • ಕಾಳುಮೆಣಸು – ಅರ್ಧ ಚಮಚ
 • ಕರಿಬೇವಿನಸೊಪ್ಪು – ಸ್ವಲ್ಪ
 • ಹಸಿಮೆಣಸಿನಕಾಯಿ – 2 ರಿಂದ 3
 • ತುಪ್ಪ – 1 ಚಮಚ
 • ಅರಿಶಿನ- ಒಂದು ಚಿಟಿಕೆ
 • ಉಪ್ಪು – ರುಚಿಗೆ ತಕ್ಕಷ್ಟು
 • ಗೋಡಂಬಿ – 10

Image result for Sweet khara Pongal Recipe

ಮಾಡುವ ವಿಧಾನ:

* ಬೇಯಿಸಿದ ಅಕ್ಕಿ ಮತ್ತು ಹೆಸರುಬೇಳೆಯ ಉಳಿದ ಅರ್ಧ ಭಾಗದಲ್ಲಿ ಖಾರ ಪೊಂಗಲ್ ಮಾಡಿಕೊಳ್ಳಬಹುದು.

* ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಅದಕ್ಕೆ ಕರಿಬೇವಿನಸೊಪ್ಪು, ಜೀರಿಗೆ, ಕಾಳುಮೆಣಸು, ಅರಿಶಿನ, ಗೋಡಂಬಿ ಮತ್ತು ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ ಬಾಡಿಸಿ.

* ಇದನ್ನು ಬೇಯಿಸಿದ ಅಕ್ಕಿ ಮತ್ತು ಹೆಸರುಬೇಳೆಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ 5 ನಿಮಿಷ ಬೇಯಲು ಬಿಡಿ.

* ಕೊನೆಗೆ ಒಂದು ಚಮಚ ತುಪ್ಪ ಸೇರಿಸಿ ಒಲೆಯಿಂದ ಕೆಳಗಿಳಿಸಿದರೆ ಖಾರ ಪೊಂಗಲ್ ಸವಿಯಲು ಸಿದ್ಧ.

Comments

comments

Click to comment

Leave a Reply

Your email address will not be published. Required fields are marked *

To Top