fbpx
ಸಮಾಚಾರ

84ರಲ್ಲೂ 24ರ ತಾಕತ್ತಿನ ತಾತ

84ರಲ್ಲೂ 24ರ ತಾಕತ್ತಿನ ತಾತ

ಜಿಮ್ ಆರಿಂಗ್‍ಟನ್‍ಗೆ 84ರ ವಯಸ್ಸು. ತಾಕತ್ತಿನ ವಿಷಯದಲ್ಲಿ 24. ಸಕ್ಕತ್ ಕಟ್ಟು ಮಸ್ತಾದ ಆಳು ಈ ಅಜ್ಜ. ಜಗತ್ತಿನ ಅತಿ ಹಿರಿಯ ದೇಹದಾಢ್ರ್ಯ ಪಟು ಎಂಬ ಕಿರೀಟ ಈ ಅಜ್ಜನಿಗಿದೆ. ಈ ಮುಕುಟ ಇಟ್ಟಿದ್ದು ಗಿನ್ನೀಸ್‍ನ ಮಂದಿ! ಹೀಗಾಗಿ ಅಜ್ಜನ ಕಿಮ್ಮತ್ತು ಲೋಕದ ತುಂಬ ಹಬ್ಬಿದೆ. ಅಷ್ಟೇ ಅಲ್ಲದೆ ಸುಮಾರು 62 ಸ್ಪರ್ಧೆಗಳಲ್ಲಿ ಭಾಗವಹಿಸಿ 20ಕ್ಕೂ ಹೆಚ್ಚು ಬಾರಿ ಗೆದ್ದು ಬಂದಿದ್ದಾನೆ ಈ ಅಜ್ಜ.

 

 

ನಿತ್ಯ ವ್ಯಾಯಮ ಮಾಡುವ ಈ ಅಜ್ಜನಿಗೆ ಬಾಲ್ಯದಲ್ಲಿಯೇ ಉತ್ತಮ ದೇಹದಾಡ್ಯ ಹೊಂದಬೇಕೆಂಬ ಆಸೆಯಿತು. ತನ್ನ 14ನೇ ವಯಸ್ಸಿಗೆ ಈತ ‘ಫೀಲ್ಡಿ’ಗಿಳಿದು ಕಸರತ್ತು ಆರಂಭಿಸಿದ. ಆಗ ಶುರುವಾಗಿದ್ದು ಇಂದಿಗೂ ನಿಂತಿಲ್ಲ.

 

 

3ಮಕ್ಕಳ ತಂದೆಯಾಗಿದ್ದಾನೆ. ಮೊಮ್ಮಕ್ಕಳು ಹಲವರಿದ್ದಾರೆ. ಎಲ್ಲರಿಗೂ ಆರಿಂಗ್ ಟನ್ ಅಜ್ಜ ಫೇವರಿಟ್. ಊಟ, ತಿಂಡಿವಿಷಯದಲ್ಲಿ ಅಚ್ಚುಕಟ್ಟು. ವ್ಯಾಯಾಮದಲ್ಲಿ ಕಟ್ಟುನಿಟ್ಟು. ಶ್ರವಣ ಸಮಸ್ಯೆಯಿಲ್ಲ. ದೃಷ್ಟಿ ದೋಷವೂ ಇಲ್ಲದ ಆರಿಂಗ್‍ಟನ್ ಅಮೆರಿಕದ ಕ್ಯಾಲಿಫೊರ್ನಿಯದಲ್ಲಿದ್ದಾನೆ.

 

 

ವಯಸ್ಸಾಗುತ್ತಾ ಹೋದಂತೆ ಮುಪ್ಪು ಅಡರುವುದು ಸಹಜ. ಮೂಳೆ ಸವೆತ ಆರಂಭವಾಗಬಹುದು. ಆದರೆ ಮಾಂಸಖಂಡಗಳಿಗೆ ತೊಂದರೆಯಿಲ್ಲ. ವ್ಯಾಯಾಮ ಮಾಡಿ ಎನ್ನುತ್ತಾರೆ ವೈದ್ಯರು. ಆರಿಂಗ್‍ಟನ್ ಅಜ್ಜನ್ನ ಮಾದರಿಯಾಗಿಸಿಕೊಂಡು ಕಸರತ್ತು ಮಾಡಿ… ಏಳಿ ಬೇಗ…!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top