fbpx
ಹೆಚ್ಚಿನ

ಜುಲೈ 1ರಿಂದ ಆಧಾರ್‌ ದೃಢೀಕರಣಕ್ಕೆ ಫೇಶಿಯಲ್ ರೆಕಗ್ನಿಷನ್

ಜುಲೈ 1ರಿಂದ ಆಧಾರ್‌ ದೃಢೀಕರಣಕ್ಕೆ ಫೇಶಿಯಲ್ ರೆಕಗ್ನಿಷನ್

 

 

 

ಆಧಾರ್ ಬಳಕೆದಾರರಿಗೆ ಹೊಸ ದೃಡೀಕರಣ ಫೇಶಿಯಲ್ ರೆಕಗ್ನಿಷನ್(ಮುಖದ ಬಿಂಬ ಆಧಾರಿತ ಆಧಾರ್‌ ದೃಢೀಕರಣ ಕ್ರಮ) ಜಾರಿಗೆ ತರುವ ಬಗ್ಗೆ ಆಧಾರ ಪ್ರಾಧಿಕಾರ ನಿರ್ಣಯಿಸಿದ್ದು ಬರುವ ಜುಲೈ 1 ರಿಂದ ಜಾರಿಗೆ ತರಲಿದ್ದಾರೆ.

ಈ ಹೊಸ ಕ್ರಮವು ಹಿರಿಯ ವಯಸ್ಸಿನವರಿಗೆ ಸಹಾಯಕಾರಿಗಳಿವೆ. ಹಿರಿಯರು ಕೆಲವು ಸಾರಿ ಬೆರಳಚ್ಚು ದೃಢೀಕರಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದರು ಎನ್ನಲಾಗಿದೆ. ಫೇಶಿಯಲ್ ರೆಕಗ್ನಿಷನ್ ಈ ಸಮಸ್ಯೆಗೆ ಪರಿಹಾರ ನೀಡಲಿದೆ.

 

 

ಈಗಿನ ಧೃಡೀಕರಣದಲ್ಲಿ ನಾವು ಕೈ ಬೆರಳ ಅಚ್ಚು ಅಥವಾ ಕಣ್ಣಿನ ಬೊಂಬೆಯನ್ನು ಅಥವಾ ಮೊಬೈಲ್ ಓಟಿಪಿಯನ್ನು ಮಾತ್ರ ಬಳಸುತ್ತಿದ್ದೇವೆ. ಹೊಸದಾಗಿ ಬರುತ್ತಿರುವ ಫೇಶಿಯಲ್ ರೆಕಗ್ನಿಷನ್ ಎಲ್ಲರಿಗು ಹೆಚ್ಚಿನ ಅನುಕೂಲವಾಗಲಿದೆ.

ಕೆಲವು ದಿನಗಳ ಹಿಂದೆ ಆಧಾರ ಪ್ರಾಧಿಕಾರ 16 ಸಂಖ್ಯೆಯ ವರ್ಚುಯಲ್ ಆಧಾರ ಸಂಖ್ಯೆ ಜಾರಿಗೆ ತರುವುದಾಗಿ ಮಾಧ್ಯಮಕ್ಕೆ ತಿಳಿಸಿತ್ತು. ಆಧಾರ ಬಳಕೆದಾರರ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ.

ದೇಶದಲ್ಲಿ 100 ಕೋಟಿಗೂ ಅಧಿಕ ಆಧಾರ ಬಳಕೆದಾರರಿದ್ದು. ಇಂತಿದೆ ದಿನದಲ್ಲಿ ಪ್ರತಿಯೊಂದು ಸರ್ಕಾರಿ ಸೇವೆಗೆ ಆಧಾರ ಕಡ್ಡಾಯವಾಗಿದೆ.

 

ಕಳೆದ ತಿಂಗಳು ಏಜಂಟನೊಬ್ಬನಿಗೆ ಕೇವಲ 500 ರೂಪಾಯಿ ಹಣ ಪಾವತಿಸಿ ಲಾಗಿನ್ ಮತ್ತು ಪಾಸ್ ವರ್ಡ್ ಪಡೆದು ಯಾರದ್ದೇ ಆಧಾರ್ ಮಾಹಿತಿಯನ್ನು ಪಡೆಯಬಹುದು ಎಂದು ‘ದಿ ಟ್ರಬ್ಯೂನ್’ ಪತ್ರಿಕಾ ವರದಿಯೊಂದರ ನಂತರ ಈ ಸುರಕ್ಷಾ ಕ್ರಮ ಕೈಗೊಳ್ಳಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top