fbpx
ಸಮಾಚಾರ

ಕನ್ಯೆಯ ಮೈಗೆ ಕಾರ್‍ಮ್ಯಾಟ್ – ‘ತುಂಡು ಬಟ್ಟೆ ಸಾಕೂ ನನ್ನ ಮಾನಾ ಮುಚ್ಚೋಕೇ…’

ಕನ್ಯೆಯ ಮೈಗೆ ಕಾರ್‍ಮ್ಯಾಟ್ – ‘ತುಂಡು ಬಟ್ಟೆ ಸಾಕೂ ನನ್ನ ಮಾನಾ ಮುಚ್ಚೋಕೇ…’

ಕನ್ಯೆಯ ಮೈಗೆ ಕಾರ್‍ಮ್ಯಾಟ್

‘ತುಂಡು ಬಟ್ಟೆ ಸಾಕೂ ನನ್ನ ಮಾನಾ ಮುಚ್ಚೋಕೇ…’ ಎಂದು ಡಾ. ವಿಷ್ಣುವರ್ಧನ್ ಹಾಡು ಹೇಳಿ 3 ದಶಕಗಳಾಯಿತು. ಇದೀಗ ಈ ಮಿಟುಕಲಾಡಿ ‘ಕಾರ್ ಮ್ಯಾಟು ಸಾಕೂ… ನನ್ನ ಮಾನಾ ಮುಚ್ಚೋಕೇ..!’ ಎಂದು ಹಾಡಬಹುದು.

ಕಾರ್ ಮ್ಯಾಟ್ ಸುತ್ತಿಕೊಂಡು ತನ್ನ ಮಾನ ಮುಚ್ಚಿಕೊಳ್ಳುತ್ತಾಳಾ?

 

 

ಇಲ್ಲ. ಕಾರ್‍ಮ್ಯಾಟ್ ಮಾದರಿಯ ಬಟ್ಟೆಯಿದು.

ಥೂ ಅದೇನು ಚಂದವಿಲ್ಲ ಅಲ್ವಾ?

 

 

ಇಲ್ಲಾ. ಇದೇ ಚಂದ/ಫ್ಯಾಷನ್ ಅಂತೆ. ‘ಅಂದ’ಹಾಗೆ ಈ ಕಾರ್‍ಮ್ಯಾಟ್ ಮಾದರಿಯ ಬಟ್ಟೆಯನ್ನು ಗುಣಮಟ್ಟದ ಕುರಿ ತೊಗಲಿನಿಂದ ಮಾಡಲಾಗಿದೆ. ನೋಡಲು ರೆಕ್ಸಿನ್‍ನಂತೆ ಕಂಡರೂ ಅದು ಮೇಷ, ಬಕರಗಳ ಚರ್ಮದಿಂದ ಆಧುನಿಕ ತಂತ್ರಜ್ಞಾನದಲ್ಲಿ ಹೊಸೆಯಲಾಗಿದೆ. ಈ ಮ್ಯಾಟ್ ಬೆಲೆ 1,700 ($,2300) ಪೌಂಡ್‍ಗಳು.

ಬ್ಯಾಲೆನ್ಸಿಯಾಗ ಎಂಬ ಹೆಸರಿನ ಈ ಬಟ್ಟೆಗಳನ್ನು ಬಡವರು ಬ್ಯಾಲೆನ್ಸ್ ಮಾಡುವುದು ತುಸು ಕಷ್ಟವೇ ಆಗಬಹುದು. ಅಮೆರಿಕ/ಇಂಗ್ಲೆಂಡ್‍ಗಳಲ್ಲಿ ಲಭ್ಯ. ಅಪ್‍ಡೇಟ್ ಅಮ್ಮಾಯಿಗಳಿಗೆ ಇದು ಬಹಳ ಸೊಗಸಂತೆ.

 

 

ಇದನ್ನು ಧರಿಸದಿದ್ದರೆ ಇನ್ನೂ ಸೊಗಸೆಂದು ಜೊಲ್ಲು ಸುರಿಸುವ ಪಡ್ಡೆಗಳು ಹೇಳಬಹುದು. ಕೆಲವು ಕಾಮಿಡಿ ಕಾಮಣ್ಣಗಳು ರೋಮಾಂಚನಗೊಂಡು ಗಂಡಸರಿಗೂ ರೂಪಿಸಿಕೊಡಿ ಎಂದು ಕೇಳಿದರೆ?

ಬೇಡ. ಗಂಡಿನ ‘ತುಂಡು’ ಮುಚ್ಚಲು ಡೋರ್‍ಮ್ಯಾಟೇ ಸಾಕು! ಎಂದು ಅಮೆರಿಕನ್ ಕಂಪೆನಿಯ ಮಂದಿ ಹೇಳಿದ್ದು ಶುದ್ಧ ಸುಳ್ಳಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top