fbpx
ಉಪಯುಕ್ತ ಮಾಹಿತಿ

‘ಥೂ ಅವನೊಬ್ಬ ಭೂಮಿಗೆ ಭಾರ’ ಈ ಬೈಗುಳದಿಂದ ಪಾರಾಗಬೇಕಿದ್ದರೆ ಮೂನ್‍ವಾಕರ್ ಬೂಟುಗಳನ್ನು ಧರಿಸಬೇಕು!

‘ಥೂ ಅವನೊಬ್ಬ ಭೂಮಿಗೆ ಭಾರ’ ಈ ಬೈಗುಳದಿಂದ ಪಾರಾಗಬೇಕಿದ್ದರೆ ಮೂನ್‍ವಾಕರ್ ಬೂಟುಗಳನ್ನು ಧರಿಸಬೇಕು!

ನಡೆವಳಿಕೆ ಹಗುರ

‘ಥೂ ಅವನೊಬ್ಬ ಭೂಮಿಗೆ ಭಾರ’ ಎಂದು ಆಗಾಗ ಕೆಲವರನ್ನು ನಿಂದಿಸುತ್ತೇವೆ. ಅಂತಹವರು ಈ ಬೈಗುಳದಿಂದ ಪಾರಾಗಬೇಕಿದ್ದರೆ ಮೂನ್‍ವಾಕರ್ ಬೂಟುಗಳನ್ನು ಧರಿಸಬೇಕು!

ಏನದು ಮೂನ್‍ವಾಕರ್?

ಇದನ್ನು ಧರಿಸಿದಲ್ಲಿ ನಡೆಯುವ ಸ್ಪೀಡಿಗೆ ಓಡಿದಂತೆ, ಓಡುವ ವೇಗಕ್ಕೆ ನೆಗೆದಂತೆ, ನೆಗೆದರೆ ಹಾರಿದ ಅನುಭವವಾಗಲಿದೆಯಂತೆ. ಪವಾಡ ಅಲ್ಲ ವಿಜ್ಞಾನ. ಈ ಶೂಗಳಲ್ಲಿ ಮೂರು ಪದರಗಳಿದ್ದು ಇವುಗಳ ನಡುವೆ ವಿಶ್ವದ ಪ್ರಬಲ 12-13 ಅಯಸ್ಕಾಂತಗಳನ್ನು ವಿಶೇಷ ತಂತ್ರಜ್ಞಾನ ಬಳಸಿ ಈ ತಯಾರಿಸಲಾಗಿದೆ. ಇದನ್ನು ಧರಿಸಿದರೆ ಗುರುತ್ವಾಕರ್ಷಣೆ ತಗ್ಗಲಿದೆ. ನಡುಗೆ ಹಗುರವಾಗಲಿದೆ. ಚಂದ್ರನ ಮೇಲಿನ ಹೆಜ್ಜೆ ಇಟ್ಟಂತಾಗಲಿದೆ. ಸದ್ಯ ಅಮೆರಿಕದಲ್ಲಿ ಮಾತ್ರ ಲಭ್ಯ. ಬೆಲೆ 89ರಿಂದ 139 ಡಾಲರ್‍ಗಳು. ಧಾರಣೆ ಅಧಿಕ ಎನಿಸಿದರೂ ಹಗುರ ‘ನಡೆವಳಿಕೆ’ ಸಾಧ್ಯ ಎನ್ನುತ್ತದೆ ಕಂಪೆನಿ.

 

 

ಕಾಲಿಗೆ ಹಾಕಿಕೊಳ್ಳದೆ ಕೈಲಿ ಹಿಡಿದು ಹೋದರೆ ಏನಾದರೂ ಪ್ರಭಾವ ಬೀರಲಿದೆಯೇ?

ಖಂಡಿತ ಇಂತಹ ಐನಾತಿ ಪ್ರಶ್ನೆಗಳನ್ನು ಯಾರೂ ಕೇಳಿಲ್ಲ!

 

 

‘ಚಂದ್ರನಮೇಲಿನ ಅನುಭವಕ್ಕಿಂತಲೂ ಮಧುಚಂದ್ರದ ಅನುಭವವಾಗೋ…. ಶೂಗಳಿದ್ದರೆ ಚೆನ್ನಾ’ ಎಂಬ ನಮ್ಮ ಪಡ್ಡೆಗಳ ಮಾತು ಮೂನ್‍ವಾಕರ್ ತಯಾರಕರಿಗೆ ಕೇಳಿಸಿಲ್ಲ! ಅದು ಹಾಳಾಗಿ ಹೋಗಲಿ ಎಂದರೆ ಈ ಮೂನ್‍ವಾಕರ್ ಧರಿಸಿದವರನ್ನು ಮತ್ತೊಂದು ರೀತಿಯಲ್ಲಿ ನಿಂದಿಸುತ್ತಿದ್ದಾರೆ…

 

 

‘ಥೂ..ಅವನೊಬ್ಬ ಹಗುರ ನಡವಳಿಕೆಯವನು!’

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top