fbpx
ಹೆಚ್ಚಿನ

ಕೊಹ್ಲಿ ವಿರುದ್ಧ ಸಿಡಿದೆದ್ದ ಸೆಹ್ವಾಗ್, 3 ನೇ ಟೆಸ್ಟನಲ್ಲಿ ಕೊಹ್ಲಿಯನ್ನೇ ಡ್ರಾಪ್ ಮಾಡಬೇಕಾಗುತ್ತೆ

ಕೊಹ್ಲಿ ವಿರುದ್ಧ ಸಿಡಿದೆದ್ದ ಸೆಹ್ವಾಗ್, 3 ನೇ ಟೆಸ್ಟನಲ್ಲಿ
ಕೊಹ್ಲಿಯನ್ನೇ ಡ್ರಾಪ್ ಮಾಡಬೇಕಾಗುತ್ತೆ.

ಭಾರತದ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಭುನೇಶ್ವರ ಕುಮಾರ್ ಅವರನ್ನು ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶನಿವಾರ ಕೈಬಿಟ್ಟಿದ್ದಕ್ಕಾಗಿ ಟೀಕಿಸಿದ್ದಾರೆ. ಕೊಹ್ಲಿ ಮೊದಲನೇ ಪಂದ್ಯದಲ್ಲಿ ಆಡಿದ ಆಟಗಾರರಲ್ಲಿ 2 ನೇ ಪಂದ್ಯಕ್ಕೆ ಕೆಲವು ಬದಲಾವಣೆಗಳನ್ನು ಮಾಡಿದ್ದರು. ಶಿಖರ್ ಧವನ್ ಅವರ ಸ್ಥಾನಕ್ಕೆ ಕೆಎಲ್ ರಾಹುಲ್, ಭುವನೇಶ್ವರ ಸ್ಥಾನಕ್ಕೆ ಇಶಾಂತ್ ಶರ್ಮಾ ಮತ್ತು ಗಾಯಗೊಂಡಿದ್ದ ವೃದ್ಧಿಮಾನ್ ಸಹಾ ಬದಲಿಗೆ ಪಾರ್ಥಿವ್ ಪಟೇಲ್  ಆಡಿದ್ದರು. ಧವನ್ ಮತ್ತು ಭುವನೇಶ್ವರ ಇಬ್ಬರು ಆಟಗಾರರನ್ನು ಕೊಹ್ಲಿ ಹೊರಗುಳಿಸಿರುವುದು ಸೆಹ್ವಾಗ್ ಅಸಮಾಧಾನಕ್ಕೆ ಕಾರಣವಾಗಿದೆ.

 

 

ವಿರಾಟ್ ಕೊಹ್ಲಿ ಅವರು ಕೇವಲ ಒಂದು ಟೆಸ್ಟ್ ವಿಫಲತೆಗಾಗಿ ಶಿಖರ್ ಧವನ್ ಅವರನ್ನು ಹೊರಗುಳಿಸಿದರು, ಯಾವುದೇ ಕಾರಣವೂ ಇಲ್ಲದೆ ಭುವನೇಶ್ವರರನ್ನು ಹೊರಗುಳಿಸಿದರು,
ಒಂದು ವೇಳೆ ಸೆಂಚುರಿಯನ್ ನಡೆಯುತ್ತಿರುವ 2 ನೇ ಟೆಸ್ಟ್ ನಲ್ಲಿ ಕೊಹ್ಲಿ ವಿಫಲರಾದರೆ ಜೊಹಾನ್ಸ್ಬರ್ಗ್ನಲ್ಲಿ ನಡೆಯುವ ಮೂರನೇ ಟೆಸ್ಟ್ನಲ್ಲಿ ಕೊಹ್ಲಿ ಸ್ವತಃ ತಮ್ಮನ್ನು ಕೈಬಿಡಬೇಕು ಎಂದು ಹೇಳಿದ್ದಾರೆ.

 

 

ಕೇಪ್ ಟೌನ್ನ ನ್ಯೂಲ್ಯಾಂಡ್ಸ್ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಆರು ವಿಕೆಟ್ಗಳನ್ನು ಗಳಿಸಿದ್ದ ಭುವನೇಶ್ವರ್ . ಮೊದಲ ಇನ್ನಿಂಗ್ಸ್ ನಲ್ಲಿ ಭುವನೇಶ್ವರ ಅವರ ಮೊದಲ ಸ್ಥಾನದಲ್ಲಿದ್ದರು. ಭುವನೇಶ್ವರ್ ಅವರು ಕೆಳ ಹಂತದಲ್ಲಿ ಬ್ಯಾಟ್ಸಮನ್ ಗಳಿಗೆ ಹೆಚ್ಚು ಒತ್ತಡ ಹೇರಿದ್ದರು.. ಭಾರತವು ಪಂದ್ಯದಲ್ಲಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತ್ತು ಎರಡನೇ ಇನ್ನಿಂಗ್ಸ್ನಲ್ಲಿ 209 ರನ್ಗಳ ಗುರಿ ಇತ್ತು. ಭುವನೇಶ್ವರ್ ಅವರು ಎಂಟನೇ ವಿಕೆಟ್ಗೆ 49 ರನ್ ಕಲೆ ಹಾಕಿದರು. ಭುವನೇಶ್ವರ್ ಅವರ ಬಗ್ಗೆ ಮಾತನಾಡುತ್ತಾ, “ಭುವನೇಶ್ವರ್ ಹೊರಗುಳಿಸಿರುವುದು ಸರಿಯಾದ ನಿರ್ಧಾರವಲ್ಲ, ವಿರಾಟ್ ಕೊಹ್ಲಿ ಭುವನೇಶ್ವರ ಕುಮಾರ್ ಅವರ ಆತ್ಮ ವಿಶ್ವಾಸವನ್ನು ಘಾಸಿಗೊಳಿಸಿದ್ದಾರೆ ಎಂದು ಸೆಹ್ವಾಗ್ ನುಡಿದರು”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top