fbpx
ಹೆಚ್ಚಿನ

ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಮನನೊಂದು ಅಭಿಮಾನಿಯೊಬ್ಬ ಸೀಮೆಎಣ್ಣೆ ಸುರಿದು ಆತ್ಮಹತ್ಯೆ

ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಮನನೊಂದು ಅಭಿಮಾನಿಯೊಬ್ಬ ಸೀಮೆಎಣ್ಣೆ ಸುರಿದು ಆತ್ಮಹತ್ಯೆ

 

ಕಳೆದ ತಿಂಗಳಷ್ಟೇ ವಿರಾಟ್ ಕೊಹ್ಲಿ ಹಾಗು ಅನುಷ್ಕಾ ದಂಪತಿಗಳ ಮದುವೆ ಇಟಲಿಯಲ್ಲಿ ಭರ್ಜರಿಯಾಗಿ ನಡೆದಿದ್ದು. ಮದುವೆಯ ನಂತರ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಆಡುತ್ತಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಮನನೊಂದ ಅಪ್ಪಟ ಅಭಿಮಾನಿಯೊಬ್ಬ ಸೀಮೆಣ್ಣೆಯನ್ನು ಮೈ ತುಂಬಾ ಸುರಿದುಕೊಂಡು ಬೆಂಕಿಯನ್ನು ಹಚ್ಚಿಕೊಂಡಿದ್ದಾನೆ. ಕೂಡಲೇ ಆಸತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

 

 

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯಾಟದಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನ ಕಂಡ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಮಧ್ಯಪ್ರದೇಶದ ರತ್ಲಂ ಎಂಬ 65 ವರ್ಷದ ರೈಲ್ವೇ ನಿವೃತ್ತ ನೌಕರ ಇಂಥ ದುರಂತ ತಂದುಕೊಂಡಿದ್ದಾನೆ. ಈ ರತ್ಲಂ ಮೊದಲಿನಿಂದಲೂ ಅಪ್ಪಟ ಕ್ರಿಕೆಟ್ ಪ್ರೇಮಿಯಾಗಿದ್ದಾನೆ. ವಿರಾಟ್ ಕೊಹ್ಲಿ ಪ್ರವರ್ಧಮಾನಕ್ಕೆ ಬಂದ ನಂತರ ಕೊಹ್ಲಿ ಅಪ್ಪಟ ಅಭಿಮಾನಿಯಾಗಿದ್ದ ಎನ್ನಲಾಗಿದೆ. ಕೊಹ್ಲಿ ಬಗ್ಗೆ ಯಾರೇ ಕೆಟ್ಟದಾಗಿ ಮಾತಾಡಿದರು ಅವರ ವಿರುದ್ಧ ಸಿಡಿದೇಳುತ್ತಿದ್ದ ಎನ್ನಲಾಗಿದೆ. ಘಟನೆಯ ಸಂಭಂದ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ಕ್ರಿಕೆಟ್ ಆಟದ ಮೇಲಿರುವ ಹುಚ್ಚು ಅಭಿಮಾನದಿಂದ ನಾವು ಆತುರದಿಂದ ಇಂತಹ ನಿರ್ಧಾರ ತೆಗೆದುಕೊಳ್ಳಬಾರದು. ಕ್ರಿಕೆಟ್ ಕೇವಲ ಮನರಂಜನೆಯ ಆಟವಾಗಿದ್ದು ನಮ್ಮ ಜೀವನ ಬಹಳ ಅಮೂಲ್ಯವಾಗಿದೆ.

 

 

ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಸಿವಿಲ್ ಸರ್ಜನ್ ಆನಂದ ಚಾಂದಲೇಖರ್ ಮಾತನಾಡಿದ್ದು, “ಒಬ್ಬ ವ್ಯಕ್ತಿಯು ಹಿರಿಯರಾಗಿದ್ದರೆ, ಅವನು ಅಥವಾ ಅವಳು ಕಡಿಮೆ ಸುಟ್ಟ ಗಾಯಗಳಿಂದ ಕೂಡಾ ಸಾಯಬಹುದು” ಎಂದು ಅವರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top