fbpx
ಸಮಾಚಾರ

ಮಾತುಂಗಾ ಪರಿಪೂರ್ಣ ಮಹಿಳಾ ರೈಲ್ವೇ ಸ್ಟೇಷನ್ – ಕಾಮಣ್ಣರನ್ನು ಠಾಣೆಗೆ ವರ್ಗಾಯಿಸಿ ಅಲ್ಲಿ ಏರೋಪ್ಲೇನ್ ಹತ್ತಿಸುತ್ತಾರೆ!

ಮಾತುಂಗಾ ಪರಿಪೂರ್ಣ ಮಹಿಳಾ ರೈಲ್ವೇ ಸ್ಟೇಷನ್ – ಕಾಮಣ್ಣರನ್ನು ಠಾಣೆಗೆ ವರ್ಗಾಯಿಸಿ ಅಲ್ಲಿ ಏರೋಪ್ಲೇನ್ ಹತ್ತಿಸುತ್ತಾರೆ!

ಮಾತುಂಗಾ ಪರಿಪೂರ್ಣ ಮಹಿಳಾ ರೈಲ್ವೇ ಸ್ಟೇಷನ್

ನಮ್ಮ ರಾಜ್ಯದಲ್ಲಿ ಹಲವು ಮಹಿಳಾ ಪೋಲೀಸ್ ಸ್ಟೇಷನ್ ಗಳಿರಬಹುದು. ಅದೇ ರೀತಿ ಮಹಿಳೆಯರೇ ನಿರ್ವಹಣೆ ಮಾಡುತ್ತಿರುವ ಬ್ಯಾಂಕ್‍ಗಳಿವೆ. ಆದರೆ ಮಹಿಳೆಯರೇ ನಿರ್ವಹಣೆ ಮಾಡುತ್ತಿರುವ ರೈಲ್ವೇಸ್ಟೇಷನ್ ನಮ್ಮಲ್ಲಿ ಮಾತ್ರವಲ್ಲದೆ ದೇಶದಲ್ಲೇ ಇಲ್ಲ. ಆ ಕೊರತೆಯನ್ನು ನೀಗಿಸಲು 2017ರ ಜುಲೈನಲ್ಲಿ ಕನಸು ಕಾಣಲಾಯಿತು.

 

 

ಕೇಂದ್ರೀಯ ರೈಲ್ವೆ ವಿಭಾಗದ ಡಿ.ಕೆ.ಶರ್ಮಾ ಅವರ ಪರಿಕಲ್ಪನೆಯಿದು. ಅದೀಗ ಸಾಕಾರವಾಗಿದೆ. ಇದೇ 2018ನೇ ಜನವರಿ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿದೆ. ಲಿಮ್ಕಾ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್‍ಗೂ ಈ ರೈಲ್ವೇ ಸ್ಟೇಷನ್ ದಾಖಲಾಗಿದೆ. ಮ್ಯಾನೇಜರ್ ಆಗಿ ಮಮತಾ ಕುಲಕರ್ಣಿ ಕಾರ್ಯನಿರ್ವಹಿಸುತ್ತಿದ್ದಾರೆ. 17 ಮಹಿಳಾ ಸಿಬ್ಬಂದಿ ಇಲ್ಲಿನ ಹಣಕಾಸು ವ್ಯವಹಾರಗಳ ನೋಡಿಕೊಳ್ಳುತ್ತಿದ್ದಾರೆ. ರೈಲ್ವೇ ಆರಕ್ಷಕ ಪಡೆಯ 6 ಸಿಬ್ಬಂದಿ ಸೇರಿ ಒಟ್ಟು 41 ಮಹಿಳಾ ಸಿಬ್ಬಂದಿಗಳು ಮಹಿಳಾ ರೈಲ್ವೇ ಸ್ಟೇಷನ್‍ಗೆ ಕೊಡುಗೆ ನೀಡುತ್ತಿದ್ದಾರೆ.

ಪುರುಷರಿಗಿಂತಲೂ ಮಹಿಳೆ ಯಾವುದೇ ವಿಭಾಗದಲ್ಲೂ ಕಮ್ಮಿಯಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಆದರೆ ಆಲ್ ವುಮನ್ ರೈಲ್ವೇ ಸ್ಟೇಷನ್ ಮಾತ್ರ ಇದರಿಂದ ದೂರ ಉಳಿದಿತ್ತು. ಈಗ ಎಲ್ಲವೂ ಸಾಕಾರವಾಗಿದೆ.

 

 

ಹೌದು? ಇಲ್ಲಿಗೆ ಕಾಮಣ್ಣಗಳ ಪ್ರವೇಶಕ್ಕೆ ಅವಕಾಶವಿದೆಯಾ?

ಇದೆ. ಆದರೆ ಚೇಷ್ಟೆ ಮಾಡಿದರೆ ಗೊತ್ತಲ್ಲಾ? ಹಿಡಿದು ರುಬ್ಬಿ ಬಿಡುತ್ತಾರೆ. ಮಹಿಳೆಯರೇ ತಾನೆ ರುಬ್ಬುವುದು ಎಂದು ಜೊಲ್ಲು ಸುರಿಸಿಕೊಂಡು ತೆರಳುವ ಐನಾತಿ ಕಾಮಣ್ಣರನ್ನು ಗಂಡುಗಳಿರುವ ಠಾಣೆಗೆ ವರ್ಗಾಯಿಸಿ ಅಲ್ಲಿ ಏರೋಪ್ಲೇನ್ ಹತ್ತಿಸುತ್ತಾರೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top