fbpx
ಹೆಚ್ಚಿನ

ತುಂಬಾ ಹಠ ಮಾಡುತ್ತಾ ಮೊಂಡುತನ ತೋರಿಸುವ ಮಕ್ಕಳನ್ನು ಸರಿಯಾದ ದಾರಿಗೆ ತರಲು ಶಾಸ್ತ್ರದ ಪ್ರಕಾರ ಹೀಗೆ ಮಾಡಿ

ತುಂಬಾ ಹಠ ಮಾಡುತ್ತಾ ಮೊಂಡುತನ ತೋರಿಸುವ ಮಕ್ಕಳನ್ನು ಸರಿಯಾದ ದಾರಿಗೆ ತರಲು ಶಾಸ್ತ್ರದ ಪ್ರಕಾರ ಹೀಗೆ ಮಾಡಿ

 

 

ಮೊ೦ಡುತನದಲ್ಲಿ ಎರಡು ವಿಧಗಳಿವೆ. ಸಕಾರಾತ್ಮಕ ಮೊಂಡುತನ ಮತ್ತು ನಕಾರಾತ್ಮಕ ಮೊಂಡುತನ. ಸಕಾರಾತ್ಮಕ ಮೊಂಡುತನ ಯಶಸ್ಸಿಗೆ ಕಾರಣವಾಗುತ್ತದೆ. ಆದರೆ ನಕಾರಾತ್ಮಕ ಮೊಂಡುತನ ಲಾಭಕರವಲ್ಲ, ಸಣ್ಣ ಸಣ್ಣ ವಿಷಯಕ್ಕೂ ಮೊಂಡುತನ ಮಾಡುವುದನ್ನು ನಕಾರಾತ್ಮಕ ಮೊಂಡುತನವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಈ ರೀತಿಯ ಮೊ೦ಡುತನವನ್ನು ಮಕ್ಕಳಲ್ಲಿ ಕಾಣಬಹುದಾಗಿದೆ.

ಮಂಗಳ ಗ್ರಹ ಹಾಗೂ ರಾಹು ಗ್ರಹಗಳು ಜಾತಕದಲ್ಲಿ ನೀಚ ಸ್ಥಾನದಲ್ಲಿದ್ದರೆ, ಮಕ್ಕಳು ಈ ರೀತಿ ಮೊಂಡುತನ ಮಾಡುತ್ತಾರೆಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಮಂಗಳ ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ ಆ ವ್ಯಕ್ತಿ ಇಪ್ಪತ್ತೆಂಟು ರಿಂದ ನಲವತ್ತೆಂಟು ವರ್ಷಗಳ ಕಾಲ ಕೆಟ್ಟ ಜೀವನ ನಡೆಸುತ್ತಾರೆ.

 

 

ಅದೇ ರಾಹು ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ, ಮನುಷ್ಯ ಮೂವತ್ತಾರು ವರ್ಷಗಳಿಂದ ಐವತ್ತೆರಡು ವರ್ಷಗಳ ಕಾಲ ಕೆಟ್ಟ ಜೀವನ ನಡೆಸಬೇಕಾಗುತ್ತದೆ.
ಮಂಗಳ ಗ್ರಹ ಹಾಗೂ ರಾಹು ಗ್ರಹ ನೀಚ ಸ್ಥಾನದಲ್ಲಿದ್ದರೆ ಅಥವಾ ಜಾತಕದಲ್ಲಿ ದುರ್ಬಲರಾಗಿದ್ದರೆ, ಮಕ್ಕಳು ಕೋಪ, ಹಠ, ಮೊಂಡುತನ ಗಲಾಟೆಯನ್ನು ಹೆಚ್ಚಾಗಿ ಮಾಡುತ್ತಾರೆ.
ಬೆಳ್ಳಿ ಮಕ್ಕಳನ್ನು ಶಾಂತಗೊಳಿಸಲು ನೆರವಾಗುತ್ತದೆ.ಬೆಳ್ಳಿಯ ಆಭರಣಗಳನ್ನು ಧರಿಸುವುದರಿಂದ, ಬೆಳ್ಳಿಯ ಲೋಟದಲ್ಲಿ ನೀರು ಕುಡಿಯುವುದರಿಂದ, ಮನಸ್ಸು ಶಾಂತವಾಗುತ್ತದೆ.
ಮಕ್ಕಳ ಮನಸ್ಸನ್ನು ಶಾಂತಗೊಳಿಸಲು ಹಾಲಿಗೆ ಅಶ್ವಗಂಧ ಬೆರೆಸಿ ಕುಡಿಸಬೇಕು.

 

 

ಮಕ್ಕಳು ಹಠವನ್ನು ಕಡಿಮೆ ಮಾಡಲು ಒಣದ್ರಾಕ್ಷಿ ಮತ್ತು ದಾಕ್ಷಿಯನ್ನು ನೀಡಬೇಕು. ಇದನ್ನು ಒಳ್ಳೆಯದೆಂದು ಪರಿಗಣಿಸಲಾಗಿದೆ.
ಗ್ಯಾಸ್ ಹಾಗೂ ಪಿತ್ತವನ್ನು ಹೆಚ್ಚಿಸುವ ಆಹಾರವನ್ನು ಮೊಂಡುತನ ಮಾಡುವ ಮಕ್ಕಳಿಗೆ ನೀಡಬಾರದು. ವಿಟಮಿನ್ ಹಾಗೂ ಖನಿಜಾಂಶಗಳು ಹೆಚ್ಚಿರುವ ಆಹಾರವನ್ನು ಮಕ್ಕಳಿಗೆ ನೀಡಬೇಕು.

ಸಕ್ಕರೆ ಹಾಗೂ ಉಪ್ಪು ಹೆಚ್ಚಿರುವ ಆಹಾರವನ್ನು ಎಂದು ಸಹ ಮೊಂಡುತನ ಮಾಡುವ ಮಕ್ಕಳಿಗೆ ನೀಡಬಾರದು. ಶ್ರೀಗಂಧ ಹಾಗೂ ಅರಿಶಿನದ ತಿಲಕವನ್ನು ಹಚ್ಚುವುದರಿಂದ ಮೊಂಡುತನ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top