fbpx
ಹೆಚ್ಚಿನ

ನಮ್ಮ ಸಾವನ್ನು ನಾವೇ ಆಚರಿಸುವ ವಿಚಿತ್ರ ಹಬ್ಬ ಒಂದಿದೆ ಅಂದ್ರೆ ನಂಬಲೇ ಬೇಕು

ನಮ್ಮ ಸಾವನ್ನು ನಾವೇ ಆಚರಿಸುವ ವಿಚಿತ್ರ ಹಬ್ಬ ಒಂದಿದೆ ಅಂದ್ರೆ ನಂಬಲೇ ಬೇಕು

 

ಸಾವಿನ ಸಂಭ್ರಮ!

ನಮ್ಮ ನಿಧನವನ್ನು ನಾವೇ ಸಂಭ್ರಮಿಸುವ ವಿಶೇಷ ಹಬ್ಬದ ಆಚರಣೆಯಿದು.

 

 

‘ಮಹಾಲಯ ಅಮಾವಾಸ್ಯೆ ದೂರ ಇರುವ ಈ ಸಂದರ್ಭದಲ್ಲಿ ಇದೇನ್ರೀ ಅನಿಷ್ಠಾ?!’

ಇಲ್ರೀ… ‘Try-before-you-die’ – ‘ಸಾಯುವ ಮುನ್ನ-ಪ್ರಯತ್ನಿಸಿ’ ಎಂಬ ನಿಧನದಾಟವಿದು. ಅಲಿಯಾಸ್ ಹಬ್ಬ.

ಬದುಕಿದ್ದವರ ಬೊಂಬೆಗಳನ್ನು ಅಥವಾ ಚಿತ್ರಗಳನ್ನು ಶವಪೆಟ್ಟಿಯಲ್ಲಿಟ್ಟು, ಹೂವಿನ ಹಾರ ಹಾಕಿಸುತ್ತಾರೆ. ಗಂಧ ಕಡ್ಡಿಯಿಂದ ಪೂಜಿಸುವಂತೆ ಸೂಚಿಸುತ್ತಾರೆ. ದೀಪಕ್ಕಾಗಿ ಕ್ಯಾಂಡಲ್ ಹಚ್ಚುವಂತೆ ಹೇಳುತ್ತಾರೆ. ಬಂಧುಗಳ ಆದಿಯಾಗಿ ಎಲ್ಲರೂ ಕಣ್ಣೀರು ಸುರಿಸಿ, ಸಾವನ್ನು ಸ್ವಾಗತಿಸುವಂತೆ ಸೂಚಿಸುತ್ತಾರೆ…! ‘ಸತ್ತ’ಂತೆ ನಟಿಸುವವÀನ ಪರವಾಗಿ ಆಗಮಿಸಿದ್ದ ಎಲ್ಲ ಅತಿಥಿಗಳು ಮಾಡುತ್ತಾರೆ. ಅಸುನೀಗಿದವನ ಗುಣ ಗಾನ ಮಾಡುತ್ತಾರೆ.

ಎದೆ ಎದೆ ಬಡಿದುಕೊಂಡು ಅಳುತ್ತಾರೆ ಅಲ್ವಾ?

 

 

ಛೇ ಛೇ… ಇದೇನು ತಮಿಳುನಾಡು ಅಲ್ಲಾ ರೀ ಹಾಗೆಲ್ಲಾ ಮಾಡಲು… ಮುಂದೆ ಓದಿ…ಸುಮಾರು ಒಂದು ತಾಸು ಈ ಡ್ರಾಮ ನಡೆಯುತ್ತದೆ. ಬದುಕಿದ್ದಾಗಲೇ ಸೂತಕದ ಮಾತುಗಳನ್ನು ಕೇಳುವುದರಿಂದ ಅದೇನು ಸುಖವಿದೆಯೋ ತಿಳಿಯದು. ಆದರೂ ಈ ಉತ್ಸವಕ್ಕೆ ಜಪಾನಿಯರು ಸು(ಶು)ಖಾಸ್ತು ಎನ್ನುತ್ತಾರೆ. ದಿನೇ ದಿನೇ ಈ ಆಚರಣೆ ಪ್ರಸಿದ್ಧಿಗೆ ಬರುತ್ತಿದೆ.

ಜಪಾನೀಯರಿನ್ನೂ ಸಾಯೋದ್ರಲ್ಲೇ ಇದ್ದಾರೆ. ನಾವು ಬದುಕಿದ್ದಂತೇ ಘಠಶ್ರಾದ್ಧಾವನ್ನೂ ಮಾಡಿಕೊಳ್ಳುತ್ತೇವೆ. ಅಂದರೆ ತಿಥಿ ಕೂಡ ಮಾಡಿ ಮುಗಿಸುತ್ತೇವೆ. ಹಾಗೆ ತಿಥಿ ಮಾಡಿಸಿಕೊಂಡವನಿಗೆ ಸಕಲ ಧಾರ್ಮಿಕ ಆಚರಣೆಗಳಿಂದಲೂ ದೂರ ಇರಿಸುತ್ತೇವೆ.

ಅಂದರೆ ನಿಧನದ ವಿಷಯದಲ್ಲಿ ಭಾರತೀಯರು ನಿಧಾನ ಮಾಡಿಲ್ಲ. ಸಾಕಷ್ಟು ಮುಂದಿದ್ದೇವೆ ತಾನೆ?

ಹೌದು. ನಮ್ಮದು ಟ್ರಾಜಿಡಿ ಆದರೆ ಜಪಾನೀಯರದ್ದು ಕಾಮಿಡಿ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top