fbpx
ಹೆಚ್ಚಿನ

ಗಂಡಸರ ಗಡ್ಡದಲ್ಲಿ ‘ಹೇನೇನೂ’ ಹುಟ್ಟೋದಿಲ್ಲ ಅನ್ನೋ ಮಾತನ್ನು ಸುಳ್ಳು ಮಾಡಿ ಬಾತು ಕೋಳಿಗೆ ಜನ್ಮ ಕೊಟ್ಟ ಕಥೆ

ಗಂಡಸರ ಗಡ್ಡದಲ್ಲಿ ‘ಹೇನೇನೂ’ ಹುಟ್ಟೋದಿಲ್ಲ ಅನ್ನೋ ಮಾತನ್ನು ಸುಳ್ಳು ಮಾಡಿ ಬಾತು ಕೋಳಿಗೆ ಜನ್ಮ ಕೊಟ್ಟ ಕಥೆ

ಕ್ಯಾ ‘ಬಾತ್’ ಹೇ…!

 

 

ಗಂಡಸರ ಗಡ್ಡದಲ್ಲಿ ‘ಹೇನೇನೂ’ ಹುಟ್ಟೋದಿಲ್ಲ ಅನ್ನೋ ಮಾತನ್ನು ಸುಳ್ಳು ಮಾಡಿದ್ದಾನೆ….ಇಂತಹ ಉಪದ್ರವಿ ಕೀಟಗಳ ಬದಲು ಸರಿಯಾಗಿ ಬಾತು ಕೋಳಿಗೆ ಜನ್ಮ ನೀಡಿದ್ದಾನೆ.

ಮೊಟ್ಟೆ ಮೇಲೆ ಕೂತು ಕಾವು ನೀಡಿ ಕೋಳಿ ಮಾಡಿದನಾ?

 

 

 

ಇಲ್ಲ! ತನ್ನ ಗಡ್ಡವನ್ನೇ ಕೋಳಿ ಗೂಡಿನಂತೆ ಮಾಡಿ ಅಲ್ಲಿಯೇ ಜೋಪಾನ ಮಾಡಿ ಬಾತು ಕೋಳಿಗೆ ಜೀವ ಬರುವಂತೆ ಮಾಡಿದ್ದಾನೆ.

ಗಡ್ಡದಲ್ಲಿ ಬಾತು ಕೋಳಿಗಳ ಮೊಟ್ಟೆ ಇರಿಸಿಕೊಂಡ. ಆರಂಭದಲ್ಲಿ 1-2 ಹಾಳಾಯಿತು. ದೃತಿಗೆಡದೆ ಮುಂದುವರೆಸಿದ. ನಿರೀಕ್ಷೆ ಫಲ ನೀಡಿತು. ಬಾತೊಂದು ಜನ್ಮ ತಳೆದು ಹೊರಗೆ ಬಂದು ತಲೆ ಏರಿತು. ಬಾತಿಗೆ ಈತನೇ ‘ದಾತ’.

 

 

ಕೇಳಲು ಇದು ಸುಲಭ ಎನಿಸುತ್ತದೆ. ಗಡ್ಡದಲ್ಲಿಯೇ ಕೋಳಿ ಮೊಟ್ಟೆ ಇರಿಸಿಕೊಂಡು ಜೀವ ನೀಡುವುದು ಹುಡುಗಾಟದ ಕೆಲಸವಲ್ಲ. ಪ್ರಸವ ವೇದನೆಯಷ್ಟು ಕಷ್ಟವಾಗದಿರಬಹುದು. ಆದರೆ ಅಷ್ಟೇ ಜೋಪಾನವಾಗಿ ಆರೈಕೆ ಮಾಡಬೇಕು.

ಆ ವಿಷಯದಲ್ಲಿ ಅಮೆರಿಕದ ಓಹಿಯೊ ನಿವಾಸಿ ಹಿರೊ ಬ್ರಿಯಾನ್ ಡಾಸ್ ಅತ್ಯಂತ ನಾಜೂಕಿನ ಮನುಷ್ಯ. ಈತ ಬಾತಿಗೆ ಜನ್ಮ ನೀಡಿದಾಗ… ನೋಡ್ತಾಯಿರಿ… ಇದು ಹೆಚ್ಚು ಕಾಲ ಬದುಕದು ಎಂದು ಕೆಲವರು ಭವಿಷ್ಯ ನುಡಿದಿದ್ದರು. ಆದರೆ ಅದೆಲ್ಲವೂ ಹುಸಿಯಾಗಿ… ವರ್ಷ ಎರಡು ಉರುಳಿದೆ. ಬಾತು ಕೋಳಿ ಅಸು ನೀಗಿಲ್ಲ. ಈತನ ಗಡ್ಡ, ತಲೆ, ಮುಖದ ಮೇಲೆಲ್ಲಾ ಈ ಕೋಳಿ ಅಡ್ಡಾಡುತ್ತದೆ. ಹೇಳಿ ಕೇಳಿ ಅಪ್ಪ ಅಲ್ವಾ? ಈತನೂ ಅದಕ್ಕೆ ಸಲುಗೆ ನೀಡಿದ್ದಾನೆ.

 

 

 

ಅನಿಲ್‍ಕಪೂರ್-ಮಾಧುರಿ ದೀಕ್ಷಿತ್ ಜೋಡಿ ಈ ಸಂಗತಿಯನ್ನು ಕಂಡಿದ್ದರೆ ಡಕ್ ಡಕ್, ಕರ್‍ನೇ ಲಗಾ…’ಎಂದು ಹಾಡುತ್ತಿದ್ದರೋ ಏನೋ…?!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top