fbpx
ಹೆಚ್ಚಿನ

ಸುಂದರ ‘ಮೈಕಾಂತಿ’ಗೆ ನಮ್ಮ ಎಣ್ಣೆ, ಲೋಷನ್‍ಗಳನ್ನು ಬಳಸಿ ಅನ್ನುವ ಬದಲು ಇನ್ಮುಂದೆ ಹೀಗೂ ಹೇಳ್ಬಹುದು

ಸುಂದರ ‘ಮೈಕಾಂತಿ’ಗೆ ನಮ್ಮ ಎಣ್ಣೆ, ಲೋಷನ್‍ಗಳನ್ನು ಬಳಸಿ ಅನ್ನುವ ಬದಲು ಇನ್ಮುಂದೆ ಹೀಗೂ ಹೇಳ್ಬಹುದು

ಸ್ವಯಂಪ್ರಕಾಶ

 

 

ನಿಮ್ಮ ಸುಂದರ ‘ಮೈಕಾಂತಿ’ಗೆ ನಮ್ಮ ಎಣ್ಣೆ, ಲೋಷನ್‍ಗಳನ್ನು ಬಳಸಿ ಎಂದು ನಿತ್ಯ ನೂರಾರು ಕಂಪೆನಿಗಳು ಜಾಹೀರಾತು ನೀಡುತ್ತವೆ. ಆದರೆ ಅದೆಲ್ಲಕ್ಕಿಂತಲೂ ಮಿಗಿಲಾದುದೆಂದರೆ ನಾರ್ತ್‍ಸ್ಟಾರ್! ಇದನ್ನು ಚರ್ಮದೊಳಗೆ ಇಳಿಬಿಟ್ಕೊಂಡರೆ ಕತ್ತಲಲ್ಲೂ ಮಿಂಚಬಹುದು…!

ಮೂವರು ಜೈವಿಕ ಬೇಧಕರ (Biohackers) ಸಂಶೋಧನೆ ಇದು. ಸಣ್ಣ ನಾಣ್ಯವೊಂದರ ಅಗಲವಿರುವ ವಿಶೇಷ ಎಲ್‍ಇಡಿ ಬಿಲ್ಲೆಗೆ ‘ನಾರ್ತ್ ಸ್ಟಾರ್’ ಎಂದು ನಾಮಕರಣ ಮಾಡಿದ್ದಾರೆ. ಕೈ, ತೋಳು, ಮುಂಗೈಗಳ ಚರ್ಮದೊಳಗೆ ಇಳಿಸುತ್ತಾರೆ. ಶರೀರದ ಶಾಖಕ್ಕೆ ಮತ್ತು ಜೊತೆಗೆ ನೀಡುವ ಆಯಸ್ಕಾಂತವನ್ನು ಬಳಸಿದರೆ 3 ವೋಲ್ಟ್‍ಗಳ ಬ್ಯಾಟರಿ ಚಾಲೂ ಆಗಿ, 10 ಕ್ಷಣ ಎಲ್‍ಇಡಿ ಬೆಳಗುತ್ತದೆ. ಬೆಳಕು ಬೇಕೆನಿಸಿದಾಗಲೆಲ್ಲಾ ಹೀಗೆ ಮಾಡಬಹುದು.

ತಡೆ ರಹಿತ ವಿದ್ಯುತ್ ಸಾಧ್ಯವೇ?

 

 

ಗೊತ್ತಿಲ್ಲ… ಆದರೆ 10 ಕ್ಷಣದಲ್ಲಿ ಕ್ಯಾಂಡಲ್ ಹುಡುಕಿಕೊಳ್ಳಲು, ಅಥವಾ ಟಾರ್ಚ್ ಹುಡುಕಿ ಆನ್ ಮಾಡಲು ಸಹಕಾರಿಯಾಗಲಿದೆ. ಜರ್ಮನ್ನರ ಈ ಅವಿಷ್ಕಾರವಿದು. ಅಲ್ಲಿನವರಿಗೆ ಇದು ಎಷ್ಟು ಉಪಯೋಗವೋ ತಿಳಿಯದು. ಕೈಕೊಡುವ ವಿದ್ಯುತ್ ಇರುವ ನಮ್ಮ ರಾಜ್ಯಕ್ಕೆ ಹೆಚ್ಚಿನ ಅಗತ್ಯವಿದೆ.

 

 

ಇದರಿಂದ ಚರ್ಮಕ್ಕಾಗಲಿ, ಶರೀರಕ್ಕಾಗಲಿ ಅಡ್ಡಪರಿಣಾಮಗಳಿಲ್ಲವೇ? ಚರ್ಮ ಸುಲಿದು ಅದರೊಳಗೆ ಇದನ್ನು ಪೋಣಿಸಿದಾಗ ಸಹಜವಾಗಿಯೇ ನೋವು-ಬಾವು ಇರಲಿದೆ. ನಂತರ ತೊಂದರೆ ಇಲ್ಲವಂತೆ.

ದುಡ್ಡುಕೊಟ್ಟು ನೋವು ತಿನ್ನುವ ದರ್ದೆಕೆ?

ಆ…ದುಡ್ಡುಕೊಟ್ಟು ಅಚ್ಚೆ ಹಾಕಿಸಿಕೊಳ್ಳುವುದು ಎಷ್ಟು ಆನಂದವೋ ಅಷ್ಟೇ ಪರಮಾನಂದ ನೀಡಲಿದೆ ಈ ‘ನಾರ್ತ್ ಸ್ಟಾರ್’!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top