fbpx
ಹೆಚ್ಚಿನ

‘ಎದೆಹಾಲಿನ ದಾನ ಮಹಾದಾನ’ 6.5 ಲೀಟರ್‍ಗಳಷ್ಟು ಹಾಲು ಹಿಂಡುತ್ತಾಳೆ ಈಕೆ ಯಾಕೆ ಹೀಗೆ ..

‘ಎದೆಹಾಲಿನ ದಾನ ಮಹಾದಾನ’ 6.5 ಲೀಟರ್‍ಗಳಷ್ಟು ಹಾಲು ಹಿಂಡುತ್ತಾಳೆ ಈಕೆ ಯಾಕೆ ಹೀಗೆ ..

ಕ್ಷೀರದಾನಿ

 

 

ಈ ಅಪ್‍ಡೇಟೆಡ್ ಅಮ್ಮಾಯಿ ದಿನಕ್ಕೆ 6.5 ಲೀಟರ್‍ಗಳಷ್ಟು ಹಾಲು ಹಿಂಡುತ್ತಾಳೆ. ಕಳೆದ 5 ವರ್ಷಗಳಿಂದಲೂ ಇವಳಿಗೆ ಇದೇ ಕಾಯಕ. ನಿತ್ಯ 5 ತಾಸು ಹಾಲು ಹಿಂಡಲೇ ಮೀಸಲು. ಸಂಗ್ರಹಿಸಿದ ಹಾಲನ್ನು ಫ್ರೀಜರ್‍ನಲ್ಲಿಟ್ಟು ಕಾಪಾಡುತ್ತಾಳೆ. ಬೇಡಿ ಬರುವವರಿಗೆ ನೀಡುತ್ತಾಳೆ. ಸುಮಾರು 2.5 ಟನ್‍ಗಳಷ್ಟು ಹಾಲನ್ನು ದಾನ ಮಾಡಿದ್ದಾಳೆ.

ಇವಳು ಹಿಂಡುವುದು ಹಸು ಅಥವಾ ಎಮ್ಮೆ ಹಾಲೇ?

ಎರಡೂ ಅಲ್ಲ, ತನ್ನದೇ ಎದೆ ಹಾಲು! ಈಕೆ ಎರಡನೇ ಬಾರಿಗೆ ಗರ್ಭಧರಿಸಿದಾಗ ಕ್ಷೀರೋತ್ಪಾದನೆ ಶುರುವಾಯಿತು. ಅಂದಿನಿಂದ ಇವಳ ಹಾಲಿನ ದಾನವೂ ಆರಂಭವಾಗಿದೆ.

ನಿತ್ಯ 5 ತಾಸು ಹಿಂಡುತ್ತಾ ಕೂರುವುದು ಹಿಂಸೆಯಲ್ಲವೇ? ಎಂದರೆ ಇಲ್ಲ ಎನ್ನುತ್ತಾಳೆ. ಅಗತ್ಯವಿರುವ ಮಕ್ಕಳಿಗೆ ಇದನ್ನು ದಾನ ಮಾಡುವುದು ಹೆಚ್ಚಿನ ಆನಂದ ಎನ್ನುತ್ತಾಳೆ.

 

 

ವೈದ್ಯರು ಏನಂತಾರೆ?

ಹಾರ್ಮೋನ್‍ಗಳ ವೈಪರೀತ್ಯದಿಂದ ಒಮ್ಮೊಮ್ಮೆ ಹೀಗಾಗುತ್ತದೆ ಎನ್ನುತ್ತಾರೆ. 1 ಕೋಟಿ ಮಹಿಳೆಯರಲ್ಲಿ ಓರ್ವರಿಗೆ ಹೀಗಾಗುತ್ತದೆ. ಸೂಕ್ತ ಚಿಕಿತ್ಸೆ ಮಾಡಿಸಿಕೊಂಡರೆ ಇದನ್ನು ತಡೆಗಟ್ಟಬಹುದು. ಚಿಕಿತ್ಸೆ ಬೇಡವೆಂದರೆ ಕೆಲವೇ ವರ್ಷಗಳಲ್ಲಿ ತಾನಾಗೇ ಬತ್ತಿ ಹೋಗಲಿದೆ ಎನ್ನುವರಂತೆ. ಆದರೆ ಈ ಕ್ಷೀರದಾನಿಗೆ ಈ ಮದ್ದು ಬೇಡ-ಶಸ್ತ್ರಚಿಕಿತ್ಸೆಯೂ ಬೇಡವೆನ್ನುವಳು. ಬರುವಷ್ಟು ದಿನ ಹಾಲು ಹಿಂಡಿಕೊಡುತ್ತೇನೆ ಎನ್ನುತ್ತಾಳೆ ಹಾಲಿನಂತಹ ಮನದ ಈಕೆ.

‘ಎದೆಹಾಲಿನ ದಾನ ಮಹಾದಾನ’ ಎನ್ನುವ ಎಲಿಸಾಬೆತ್ ಆಂ್ಯಡರ್ ಸನ್ ಅಮೆರಿಕದ ಓರೆಗಾಂವ್‍ನಲ್ಲಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top