fbpx
ಮನೋರಂಜನೆ

ತಾವು ಕುಳಿತಿದ್ದ ವೇದಿಕೆಯನ್ನು ಗೋಮೂತ್ರ ಸಿಂಪಡಿಸಿ ಶುದ್ಧಿಗೊಳಿಸಿದವರಿಗೆ ತಿರುಗೇಟು ಕೊಟ್ಟ ಪ್ರಕಾಶ್ ರೈ.

ತಾವು ಕುಳಿತಿದ್ದ ವೇದಿಕೆಯನ್ನು ಗೋಮೂತ್ರ ಸಿಂಪಡಿಸಿ ಶುದ್ಧಿಗೊಳಿಸಿದವರಿಗೆ ತಿರುಗೇಟು ಕೊಟ್ಟ ಪ್ರಕಾಶ್ ರೈ.

 

 

ನಟ ಪ್ರಕಾಶ್‌ ರೈ ಶನಿವಾರ ಶಿರಸಿಯಲ್ಲಿ ಪಾಲ್ಗೊಂಡಿದ್ದ `ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಎನ್ನುವ ರಾಜ್ಯಮಟ್ಟದ ವಿಚಾರಗೋಷ್ಠಿ ಕಾರ್ಯಕ್ರಮದ ವೇದಿಕೆ ಹಾಗೂ ಮಠದ ಆವರಣವನ್ನು ಇಲ್ಲಿನ ಬಿಜೆಪಿ ಕಾರ್ಯಕರ್ತರು ಸೋಮವಾರ ಗೋಮೂತ್ರ ಸಿಂಪಡಿಸುವುದರ ಮೂಲಕ ಶುದ್ಧಗೊಳಿಸಿದ್ದರು. “ಹಿಂದೂ ಧರ್ಮದವರು ಗೋವನ್ನು ಪೂಜನೀಯ ಸ್ಥಾನದಲ್ಲಿ ಆರಾಧಿಸುತ್ತಾರೆ. ಗೋಮಾಂಸ ತಿನ್ನುವ ಹಾಗೂ ಹಿಂದೂ ದೇವತೆಗಳನ್ನು ಅವಮಾನ ಮಾಡುವ ವ್ಯಕ್ತಿಗಳ ಆಗಮನದಿಂದ ಇಡೀ ಶಿರಸಿ ನಗರವೇ ಅಪವಿತ್ರವಾದಂತಾಗಿದೆ. ಇಂತಹ ಸೋಗಲಾಡಿ ಎಡಬಿಡಂಗಿ ಬುದ್ಧಿಜೀವಿ ಪ್ರಕಾಶ್ ರೈ ಅವರನ್ನು ಹಿಂದೂ ಸಮಾಜ ಯಾವತ್ತಿಗೂ ಕ್ಷಮಿಸುವುದಿಲ್ಲ. ಹಿಂದೂ ಧರ್ಮಕ್ಕೆ ಅವರ ಅವಶ್ಯಕತೆಯಿಲ್ಲ, ಈ ಹಿನ್ನಲೆಯಲ್ಲಿ ಈ ಧಾರ್ಮಿಕ ಕ್ಷೇತ್ರವನ್ನು ಗೋಮೂತ್ರ ಸಿಂಪಡಿಸುವುದರ ಮೂಲಕ ಶುದ್ಧಗೊಳಿಸಲಾಯಿತು’ ಎಂದು ಬಿಜೆಪಿ ಯುವ ಮೋರ್ಚಾದ ನಗರದ ಘಟಕದ ಅಧ್ಯಕ್ಷ ವಿಶಾಲ್‌ ಮರಾಠೆ ಹೇಳಿದ್ದರು.

 

 

ತಾವು ಕುಳಿತಿದ್ದ ವೇದಿಕೆಯನ್ನು ಗೋಮೂತ್ರ ಸಿಂಪಡಿಸಿ ಶುದ್ಧಿಗೊಳಿಸಿದ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶ್ ರೈ ಗೋಮೂತ್ರ ಸಿಂಪಡಿಸಿದ ಕಾರ್ಯಕರ್ತರನ್ನು ವ್ಯಂಗ್ಯಮಾಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿರುವ ರೈ “ನಾನು ಶಿರಸಿ ಪಟ್ಟಣದಲ್ಲಿ ಭಾಗವಹಿಸಿ ಮಾತನಾಡಿದ ವೇದಿಕೆಯನ್ನು ಕೆಲ ಬಿಜೆಪಿ ಕಾರ್ಯಕರ್ತರು ಹಸುವಿನ ಮೂತ್ರವನ್ನು(ದೈವಿಕ ಗೋಮೂತ್ರ) ಚಿಮುಕಿಸುವ ಮೂಲಕ ಸ್ವಚ್ಛಗೊಳಿಸಿ, ಶುದ್ಧೀಕರಿಸುತ್ತಿದ್ದಾರೆ… ನಾನು ಎಲ್ಲಿಗೇ ಹೋದರು ಅಲ್ಲಿಗೆ ಬಂದು ಈ ಶುದ್ಧೀಕರಣ ಮತ್ತು ಸ್ವಚ್ಛತೆ ಸೇವೆಯನ್ನು ನೀವು ಮುಂದುವರಿಸುತ್ತೀರಾ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

 

 

ಕಳೆದ ಜ. 13ರಂದು ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದ ಪ್ರಕಾಶ್‌ ರೈ, ಸಂವಿಧಾನ ಬದಲಾಯಿಸುವ ಬಗ್ಗೆಮಾತನಾಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹರಿಹಾಯ್ದಿದ್ದರು. ಸಂಘ ಪರಿವಾರ ಪ್ರತಿಪಾದಿಸುವ ಹಿಂದುತ್ವವನ್ನು ಟೀಕಿಸಿದ್ದರು. ಇದು ಸಹಜವಾಗಿಯೇ ಸಂಘ ಪರಿವಾರ ಹಾಗೂ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕಾರಣಕ್ಕಾಗಿ ಪ್ರಕಾಶ್ ಕುಳಿತಿದ್ದ ವೇದಿಕೆಯ ಆವರಣವನ್ನು ಗಂಜಲದಿಂದ ಸಿಂಪಡಿಸಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top