fbpx
ಹೆಚ್ಚಿನ

ನನ್ನನ್ನು ಎನ್ ಕೌಂಟರ್ ಮಾಡುವ ಪ್ರಯತ್ನ ನಡೆದಿದೆ.

ನನ್ನನ್ನು ಎನ್ ಕೌಂಟರ್ ಮಾಡುವ ಪ್ರಯತ್ನ ನಡೆದಿದೆ.

 

 

ಸೋಮವಾರ ಮಧ್ಯಾಹ್ನದಿಂದ ನಾಪತ್ತೆಯಾದ್ದ ವಿಶ್ವ ಹಿಂದೂ ಪರಿಷತ್ ಮುಖಂಡರಾಗಿರುವ ಪ್ರವೀಣ್ ತೊಗಾಡಿಯಾ ಅಹಮದಾಬಾದ್‍ನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ ಇವರನ್ನು ಆಸತ್ರೆಗೆ ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

ಅರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಖಂಡಿರುವ ಪ್ರವೀಣ್ ತೊಗಾಡಿಯಾ ಅವರು ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ನಾನು ಹಿಂದೂ ಪರವಾಗಿ ನಾನು ಧ್ವನಿಯನ್ನು ಎತ್ತಿದ್ದೆನೇ’, ‘ನನ್ನ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ’ ಎಂದರು. ನನ್ನನ್ನು ಎನ್ಕೌಂಟರ್ ಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಿದರು. ನಾನು ಕಾನೂನಿನ ಪಾಲನೆ ಮಾಡುತ್ತಿದ್ದು , ನ್ಯಾಯಾಂಗವನ್ನು ಗೌರವಿಸುತ್ತೇನೆ, ನಾನು ಇಲ್ಲಿವರೆಗೂ ನ್ಯಾಯಾಲಯದಿಂದ ಹಿಂದೆ ಸರಿದಿಲ್ಲ. ಅಹಮದಾಬಾದದಲ್ಲಿ ನನ್ನ ಮೇಲೆ ವಾರಂಟ್ ಜಾರಿಯಾಗಿತ್ತು ಆಗ ನಾನು ನ್ಯಾಯಾಲಯದಲ್ಲಿ ಹಾಜರಾಗಿದ್ದೇನೆ.

 

 

ವಿ ಎಚ್ ಪಿ ಮುಖಂಡರಾಗಿರುವ ಪ್ರವೀಣ್ ತೊಗಾಡಿಯಾ ಅವರು ನಿನ್ನೆ ಸೋಮವಾರ ಬೆಳಗ್ಗೆ 11 ಘಂಟೆ ಸುಮಾರಿಗೆ ರಿಕ್ಷಾದಲ್ಲಿ ವಿ ಎಚ್ ಪಿ ಕಚೇರಿಯಿಂದ ತೆರಳಿದ್ದರು ನಂತರ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು ಇದನ್ನು ನೋಡಿದ ಕೆಲವರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ.

ನಾನು ಕಾನೂನು ಪಾಲನೆ ಮಾಡುತ್ತಿದ್ದು, ನನ್ನ ಬಳಿ ಯಾವುದೇ ಸಂಪತ್ತಿ ಇಲ್ಲ ನಾನು ಗೋರಕ್ಷಣೆ ಮಾಡುತ್ತಿರುವೆ ಎಂದು ಹೇಳಿದರು. ನಾನು ಹಿಂದೂಗಳ ಪರ ಹೋರಾಡುತ್ತಿದು ಇನ್ನು ಮುಂದೆಯೂ ಹೋರಾಡುತ್ತೇನೆ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top