fbpx
ಹೆಚ್ಚಿನ

ರಾಕೆಟ್ ಪಟಾಕಿ ಸಿಡಿದು 12 ವರ್ಷದ ಬಾಲಕ ಸಾವು. ಪಟಾಕಿ ಪ್ರದರ್ಶನ ಸಂಘಟಕರ ವಿರುದ್ಧ ದೂರು ದಾಖಲು.

ರಾಕೆಟ್ ಪಟಾಕಿ ಸಿಡಿದು 12 ವರ್ಷದ ಬಾಲಕ ಸಾವು.
ಪಟಾಕಿ ಪ್ರದರ್ಶನ ಸಂಘಟಕರ ವಿರುದ್ಧ ದೂರು ದಾಖಲು.

 

 

ಮೇಲೆ ಹಾರಿದ ರಾಕೆಟ್‌ ಪಟಾಕಿ, ಮೇಲೆ ಹೋಗಿ ಸಿಡಿಯದೆ ಕೆಳಗೆ ನಿಂತಿದ್ದ ಹನ್ನೆರಡು ವರ್ಷದ ಬಾಲಕನ ತಲೆ ಮೇಲೆ ಬಿದ್ದು ಆತ ಸಾವನ್ನಪ್ಪಿರುವ ದಾರುಣ ಘಟನೆ ಹಲಸೂರಿನ ಬಳಿ ಇರುವ ‘ಅವರ್‌ ಲೇಡಿ ಲೂದ್ಸ್‌ರ್‍’ ಚರ್ಚ್‌ನ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದಿದೆ.

 

 

ಆಗಿದ್ದೇನು?: ಹೊಸ ವರ್ಷದ ೨ ನೇ ರವಿವಾರ ಸೆಬಾಸ್ಟಿಯನ್ ಫೆಸ್ಟ್ ಅಂಗವಾಗಿ ಚರ್ಚ್ ಆವರಣದಲ್ಲಿ ಪಟಾಕಿ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಅಂತೆಯೇ ರವಿವಾರ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಗ ಧನುಷ್ ಸೇರಿ ಇನ್ನು 8 ಜನರನ್ನು ಸುರೇಶ್ ಅವರು ಸಿಡಿಮದ್ದು ಪ್ರದರ್ಶನಕ್ಕೆ ಕರೆದುಕೊಂಡು ಹೋಗಿದ್ದರು. ರಾತ್ರಿ 8.30ರಲ್ಲಿ ಸಿಡಿಮದ್ದು ಪ್ರದರ್ಶನ ನೋಡುತ್ತಿದ್ದಾಗ ರಾಕೆಟ್ ಹಾರಿಬಂದು ಧನುಷ್ ತಲೆಗೆ ಬಂದು ಅಪ್ಪಳಿಸಿದೆ. ಆ ರಭಸಕ್ಕೆ ಧನುಷ್​ನ ಮೆದುಳು ಹೊರಗೆ ಬಂದು ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.

 

 

ಸತತ 7 ವರ್ಷದಿಂದ ಈ ಪಟಾಕಿ ಪ್ರದರ್ಶನ ನೋಡಲು ಬರುತ್ತಿದ್ದೇವೆ. ಯಾವುದೇ ವರ್ಷವೂ ಇಲ್ಲಿ ಸಂಘಟಕರು ಮುಂಜಾಗ್ರತಾ ಕ್ರಮವನ್ನು ಕೈಗೊಂಡಿಲ್ಲ. ಇಲ್ಲಿ ಅಗ್ನಿಶಾಮಕ ದಳದ ವಾಹನ ಮತ್ತು ಆಂಬುಲೆನ್ಸ್‌ ಸ್ಥಳದಲ್ಲಿ ಇರಲಿಲ್ಲ. ಒಬ್ಬ ಪೊಲೀಸ್‌ ಸಿಬ್ಬಂದಿ ಕೂಡ ಕಂಡುಬರಲಿಲ್ಲ. ಧನುಷ್‌ ಸಾವಿಗೆ ಆಯೋಜಕರ ನಿರ್ಲಕ್ಷ್ಯವೇ ಕಾರಣವೆಂದು’ ಅನಿಲ್‌ಕುಮಾರ್‌ ಅವರು ದೂರಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top